Showing posts with label ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ramesha. Show all posts
Showing posts with label ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ramesha. Show all posts

Monday, 11 November 2019

ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ankita ramesha

by ಗಲಗಲಿಅವ್ವನವರು
ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ಬಾಲೆನೀರೆಮನಕೆ ತಾರೆ ಪ.

ನೀರಜಾಕ್ಷೆಯರ ನಿನ್ನದ್ವಾರದಿ ನಿಲ್ಲಿಸಿದಿಪೋರಬುದ್ಧಿಯನೆಲ್ಲತೋರಿಸಿದೆ ಈಗ 1

ನೋಡಿ ನಮ್ಮನು ಕರೆಯದೆಓಡಿದೆ ಒಳಗಿನ್ನುಮಾಡಿದ ಕಪಟದ ಸೇಡುತೆಗೆಯುವೆ ನೀಗ 2

ಮೂಡಲಗಿರಿವಾಸನೋಡುವಂತೆಮಾರಿಬಾಡಿಸಿ ಕಳಿಸುವೆನೋಡಿಕೊ ರುಕ್ಮಿಣಿ 3

ಹೀನಗುಣದ ಬಾಲೆಮಾನವು ನಿನಗಿಲ್ಲಶ್ರೀನಿವಾಸನು ನಿನ್ನಏನೆಂದು ಮದುವೆಯಾದ 4

ರಜವೆಂಬೊಗುಣಸೇರಿರಾಜ್ಯ ಭೋಗವಬಟ್ಟೆತ್ರಿಜಗವಂದನ ಕೂಡಭುಜಗಾಲಿಂಗನೆಯಾಕೆ 5

ಸತ್ವಗುಣವ ಸೇರಿಅತ್ಯಂತ ಸುಖಿಸಿದಿಚಿತ್ತಜನಯ್ಯಗೆಪತ್ನಿ ತಕ್ಕವಳಲ್ಲ 6

ತಮವೆಂಬೊ ಗುಣಗಳಸುಮ್ಮನೆ ಗುತ್ತಿಗೆ ಹೊತ್ತಿರಮಿ ಅರಸನ ಕೂಡರಮಿಸೋದು ತರವಲ್ಲ 7
*******