Showing posts with label ಮಾರಜನಕ ಮುರಾರಿ ಕಾಣಮ್ಮ jagannatha vittala. Show all posts
Showing posts with label ಮಾರಜನಕ ಮುರಾರಿ ಕಾಣಮ್ಮ jagannatha vittala. Show all posts

Saturday, 14 December 2019

ಮಾರಜನಕ ಮುರಾರಿ ಕಾಣಮ್ಮ ankita jagannatha vittala

ಜಗನ್ನಾಥದಾಸರು
ಮಾರಜನಕ ಮುರಾರಿ ಕಾಣಮ್ಮ ಪ

ಅರುಣ ಚರಣ ಕಳದಿರವು ಅಂಕುಶಧ್ವಜ
ಅರವಿಂದ ರೇಖಾಂಕ ಪುರುಷನಾರಮ್ಮ
ಉರಗಶಯನ ಕರಸರೋಜ ಮಧ್ಯದೊಳಿಟ್ಟು
ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1

ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ
ವಳಿಯಿಂದ ಒಪ್ಪುವ ಚಲುವನಾರಮ್ಮಾ
ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ
ಜಲಧಿ ಕಾಣಮ್ಮ 2

ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ
ತೊಡಂದ ಬರುತಿಹ ಪ್ರೌಢನಾರಮ್ಮ
ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ
ಮೃಡಸುರಪಾದ್ಯರ ಪತಿಯು ಕಾಣಮ್ಮ 3

ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ
ಳೆರಡು ತರಣಿಯಂತೆ ಇವನಾರಮ್ಮಾ
ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ
ಪರಮ ಪುರುಷ ನರಹರಿಯು ಕಾಣಮ್ಮ 4

ಇಭವರಕರದಂತೆ ಉಭಯ ಊರು ಕಟಿ
ಪ್ರಭ ವಸನವನುಟ್ಟ ಸುಭಗನಾರಮ್ಮಾ
ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ
ಅಭಯವಿತ್ತ ಸುರಪ್ರಭುವು ಕಾಣಮ್ಮ 5

ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ
ವಳಿಗಳಿಂದಲಿ ಬಲು ಪೊಳೆವನಾರಮ್ಮಾ
ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ
ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6

ಕೌಸ್ತುಭ ವೈಜಯಂತೀ ಸರ
ಸಿರಿಯಿಂದಲೊಪ್ಪೋ ನಿರಯನಾರಮ್ಮ
ವರಭೃಗುಮುನಿಪನ ಸ್ಪರುಶವನು ತಾಳ್ದ
ಕರುಣ ಸಾಗರ ಸಿರಿಧರನು ಕಾಣಮ್ಮ 7

ಅರಿ ಶಂಖ
ಸತತ ಪಿಡಿದಿಹ ಚತುರನಾರಮ್ಮ
ದಿತಿಜರ ಸದೆದು ದೇವತೆಗಳ ಸಲಹಿದ
ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8

ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ
ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ
ವಜ್ರ ಪಂಜರವನು ಕಾಣಮ್ಮ 9

ಸುರಕಪೋಲ ನಾಸ ಸರಸಿಜನಯನ ಪು
ಕುಂಡಲಿ ಯುಗಧರನು ಆರಮ್ಮಾ
ಶರಧಿ ಮಥನದಲ್ಲಿ ತರುಣಿಯಾಗಿ ಅಸು
ರರ ಮೋಹಿಸಿದ ಅಜರನು ಕಾಣಮ್ಮ10

ಬಾಲಶಶಿಯಂತೆ ಫಾಲಕಸ್ತೂರಿನಾಮ
ಮೌಳಿ ಸುಳಿಕೇಶ ಬಾಲನಾರಮ್ಮಾ
ಮೂಲೇಶನಾದ ಜಗನ್ನಾಥ ವಿಠ್ಠಲ
ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
********