ಸಾಕು ಈ ಭವಭಂಗ ಈ ಮಾನಭಂಗ. ಪ
ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |
ಸಾಕಬೇಕೆಲೋ ರಂಗ ||
ಹಲವು ಜನುಮಗಳಲ್ಲಿ ತೊಳಲಿ ತೊಳಲೀ
ಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |
ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ ಲೋಕದಲ್ಲಿ
ಕಾಲವ ಕಳೆಯುತಲಿರುವೆನೊ ಪೃಥ್ವಿಯಲ್ಲಿ ||
ಆಡಬಾರದ ಆಟ ನೋಡಬಾರದ ನೋಟ |
ಕೂಡಬಾರದ ಕೂಟದೊಳಗೆನ್ನ ನಲಿದಾಟ ||
ಒಡಲಿಗಿಲ್ಲದೆ ಪರರ ಮನೆಯೊಳಗೆ ಓಡ್ಯಾಟ |
ಬ್ಯಾಡವೆಂದರೂ ಬಿಡದು ಇದೆಲ್ಲ ನಿನ್ನಾಟ ||
ನಿನ್ನವನೆಂದೆನಿಸೊ ಮನಸು ನಿನ್ನೊಳು ನಿಲಿಸೊ |
ನಿನ್ನ ದಾಸರ ಸಂಗದೊಳಗೆನ್ನನಿರಿಸೊ |
ಎನ್ನಂಥ ಪತಿತರು ಇನ್ನಿಲ್ಲ ಧರೆಯೊಳಗೆ |
ಮನ್ನಿಸಿ ಸಲಹೋ ಶ್ರೀ ಪ್ರಾಣೇಶವಿಠಲ ||
**********
saaku ee bhavabhanga ee maanabhanga
just scroll down for other devaranama