ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಕೂಡಿ ಸಾಧು ಸಂಗ ಮಾಡಿ ಭೇದಾಭೇದೀಡ್ಯಾಡಿ pa
ಮರಹು ಮರಿಯ ನೀಗಿ ಅರವ್ಹಿನೊಳಗಾಗಿ ಕುರುಹ್ಹದೋರಿಕೊಡುವ ಗುರು ಬ್ರಹ್ಮಾನಂದಯೋಗಿ 1
ತಿರುಗಿನೋಡಿ ನಿಮ್ಮ ಅರಿತು ನಿಜವರ್ಮ ಪಾರಗೆಲಿಸುವದಿದು ಗುರುಪಾದ ಧರ್ಮ 2
ಕಣ್ದೆರೆದು ನೋಡಿ ತನ್ನೊಳು ಬೆರೆದಾಡಿ ಧನ್ಯವಾದ ಮಹಿಪತಿ ಗುರುಪಾದ ಕೂಡಿ3
****