ಮೂರನೆಯ ಸಂಧಿ
ನಿದ್ರೆಗೈದಿಂದುಹಾಸನ ಕಂಚುಳಿಕೆಯಲ್ಲಿರ್ದ
ಪತ್ರವನೋದಿಕೊಂಡು
ತಿರ್ದಿ ತಾ ವಧುವಾದಳು ಮಂತ್ರಿತನುಜೆಯು
ಪದ್ಮನಾಭನ ಕಿಂಕರಗೆ
ಲೀಲೆಯಿಂದಲಿ ಚಂಪಕಮಾಲೆ ವಿಷಯೆ
ವಿಶಾಲದಿ ಸಖಿಯರು ಕೂಡಿ
ಆಲಯದಿಂದಲಿ ಹೊರಟರು ವಸಂತಕಾಲ ಬಂದಿರೆ ನಂದನಕೆ 1
ವಚ್ಚೇರೆಗಂಗಳ ವಾರಿಜಮುಖಿಯರು ನಿಚ್ಚಳಾಂಗದ ನೀರೆಯರು
ಹೆಚ್ಚ ಹಿರಿಯ ಹೆಂಗಳ ರನ್ನೇರು ಬೆಚ್ಚದೆ ಬೆರೆದು ನಡೆದರು 2
ಮಲ್ಲಿಗೆನನೆ ಮುದ್ದುಮುಖಮಾಲೆ ಗಂಧೇರು
ಚೆಲ್ಲೆಗಂಗಳ ಚೆಲ್ವೆಯರು
ಫುಲ್ಲಶರನ ಮದದಾನೆಯಂತೊಲೆವುತ
ಎಲ್ಲರೈದಿದರು ನಂದನಕೆ 3
ಕಳಕೀರವಾಣಿಯರು ಕಾಳಾಹಿವೇಣಿಯರು
ಕಳಕಳಿಸುವ ವದನÉಯರು
ಕಳಸಕುಚದೋರು ಕಂಬುಕಂಧರೆಯರು ಕುಂತಳಕಾಗಿ ನಡೆದರು4
ಕುಟಿಲಕುಂತಳೆಯರು ಕೋಮಲಾಂಗಿಯರು
ಚೆಂದುಟಿ ಚೆಲುವಿನ ಬಾಲೆಯರು
ಬಟ್ಟ ಪೊಂಬೊಗರಿಯ ಕುಚದ ಬಾಲಕಿಯರು
ನಟನೆಯಿಂದೆಲ್ಲ ನಡೆದರು 5
ಒಬ್ಬರ ಹೆಗಲಲ್ಲಿ ಒಬ್ಬರ ನಳಿತೋಳಿಟ್ಟು
ತಬ್ಬುತ ತಾಗೊಲವುತಲಿ
ಕಬ್ಬುವಿಲ್ಲನ ಕೋಲಾಹಲ ಉಲ್ಲಸದಿ ತಬ್ಬಿ ನಡೆದರು ನಂದನಕೆ 6
ಸೊಕ್ಕು ನುಡಿಯೋರು ಸೊಬಗು ಮತಿಯೋರು ಕಕ್ಕಸ
ಕುಚದ ಬಾಲೆಯರು
ನಕ್ಕುನಲಿದು ನಾನಾ ಚೇಷ್ಟೆಗಳಿಂದ ಹೊಕ್ಕರು ನಂದನವನವ7
ಗಾಡಿಕಾರ್ತಿಯರೆಲ್ಲ ಗಮಕದಿಂದಲಿ ಒಡಗೂಡಿ
ಸರೋವರವಿಳಿದು
ಮಾಡಿದರ್ ಕೈಚಳಕವ ಜಲಕ್ರೀಡೆಯನಾಡಿದರತಿ ಹರುಷದಲಿ 8
ಪೊಳಕುವ ಮೀನುಗಳ್ ನೀಲಕುಂತಳವು ಕಳಕಳಿಸುವ
ಕೆಂದಾವರೆ ಮೊಗ್ಗು
ಅರಳಿದಂಬುಜ ತಾರೆಗಳು ಕೋಮಲೆಯರ ನೀರಾಟವನೆ
ಕಂಡು ಹರುಷದಿ9
ಕೋಮಲೆಯರ ನೀರಾಟದ ರಭಸಕ್ಕೆ ತಾವರೆಗಳು ಬೆರಗಾಗೆ
ಭಾವಕಿಯರ ಮುಖವನೆ ನೋಡಿ ಅಂಬುಜ
ಹೇವದಿ ತಲೆಯ ತಗ್ಗಿದವು10
ನವರತ್ನದ ಸೋಪಾನವನೇರೋರು
ನವಯವ್ವನೆಯರ್ ಹರುಷದಲಿ
ಕಮಲಮುಖಿಯರ ಮೆಲ್ಲಡಿಗಳ ಭಾರಕ್ಕೆ
ಸಮನಾಗಿ ತೋರುತಲಿಹವು 11
ತರುಣಿಯರುಟ್ಟ ತಂಗಲವಸ್ತ್ರ ಮೈಯೊಳು ಒರೆದು
ದಿವ್ಯಾಂಗ ತೋರುತಲಿ
ಗುರುಕುಚದ ಬಾಲೆಯರು ನಿಂತರು ಕಾಮನ
ಹೆರೆಯ ಕೂರಂಬಿನಂದದಲಿ12
ಬಡನಡುವಿನ ದೇವಾಂಗವನರಿದುಟ್ಟು
ಸಡಿಲಿದಾಭರಣವನಿಟ್ಟು
ನಿಡುಗುರುಳಿಗೆ ಧೂಪದ ಹೊಗೆಯನು ಕೊಟ್ಟು
ಮುಡಿದರು ತುದಿವೆಣ್ಣೆಗಂಟು 13
ಪಣೆಗೆ ಕಸ್ತೂರಿಯಿಟ್ಟು ಪೂಸಿ ಶ್ರೀಗಂಧವ
ಕಣ್ಣಿಗೆ ಅಂಜನ ಹಚ್ಚಿ
ಸಂಪಿಗೆ ಮಕರಂದ ಪತ್ರಿಕೆಯನಿಟ್ಟು ಲಲನೆಯರೆಲ್ಲ ಶೃಂಗಾರದಿ 14
ಆನಂದಗಾತ್ರೆಯರು ಅತಿಹರುಷದಿ ಮಧುಪಾನವ
ಮಾಡಿ ಸಂಭ್ರಮದಿ
ಧೇನುವಾ ಕೋಮಲಶ್ರವಣನಾಲಿಸುವಂತೆ
ಮಾನಿನಿಯರು ತೆರಳಿದರು 15
ದರ್ಪಣವನೆ ನೋಡಿ ರಮಣಿಯರೆಲ್ಲ
ಕಂದರ್ಪನ ಮದದಾನೆಯಂತೆ
ಕರ್ಪುರ ವೀಳ್ಯವ ಕರದಲ್ಲಿ ಪಿಡಿದು ಗುಪ್ಪವಡೆದರು ನಾರಿಯರು 16
ವನಜಮುಖಿಯರು ವನಾಂತರವನು ಪೊಕ್ಕು
ಘನರಾಗದಿಂದ ಪಾಡುತಲಿ
ನಮಗೆ ತಮಗೆಯೆಂದು ಕೊಯ್ದರು ತಮ
ತಮ್ಮ ಮನಬಂದ ಫಲ ಪುಷ್ಪಂಗಳ 17
ಮಿಂಡೆವೆಣ್ಣುಗಳೆಲ್ಲ ಮದವೆದ್ದು ತಮ್ಮೊಳು ಕಂಡಕಡೆಗೆ ಚೆಲ್ಲುವರಿದು
ಸೊಂಡಿಲು ಕದಳಿಯ ವನವÀ ಪೊಕ್ಕಂದದಿ
ಉದ್ದಂಡತನದಲಾಡುತಿಹರು 18
ಅರಸನ ಮಗಳು ಚಂಪಕಮಾಲೆ ಸಖಿಯರು
ಬೆರಸಿಕೊಂಡಾಡುತಲಿಹರು
ಮರೆಸಿ ಮತ್ತೊಂದು ಕಡೆಗೆ ತಾನು ಬಂದಳು
ಹರುಷದಿಂದಲಿ ಮಂತ್ರಿ ತನುಜೆ 19
ಚಿಕ್ಕ ಪ್ರಾಯದ ಕೋಮಲಾಂಗಿಯು ಹೆಮ್ಮಕ್ಕಳನಗಲಿ ತಾ ಚೂತ
ವೃಕ್ಷದ ನೆರಳಲ್ಲಿ ಮಲಗಿದ್ದಾತನ ಕಂಡು
ಬೆಕ್ಕಸ ಬೆರಗಾಗಿ ನಿಂದಳ್ 20
ಅತಿಚೆಲುವ ಪುರುಷನ ಕಾಣುತ ಮೂರ್ಛೆಗತಳಾಗಿ
ತಿಳಿದು ಎಚ್ಚತ್ತು
ಪೃಥುವಿಯೊಳಗೆ ಇಂಥ ಚೆಲುವನಿಲ್ಲವೆಂದು
ಮತಿಭ್ರಮೆಯಿಂದ ನೋಡಿದಳು 21
ಪಾರ್ವತಿಪತಿಯೆಂಬೆನೆ ಪಣೆಗಣ್ಣಿಲ್ಲ ವಾರಿಜೋದ್ಭವನಿವನಲ್ಲ
ನಾರಾಯಣನೆಂಬೆನೆ ಶಂಖಚಕ್ರವು ತೋರುವುದಿಲ್ಲ ಕೈಯೊಳಗೆ 22
ಇಂದ್ರನೆಂಬೆನೆ ಬಿಳಿಯಾನೆ ಕೆಲದಲಿಲ್ಲ ಚಂದ್ರನೆಂಬೆನೆ ಮೃಗವಿಲ್ಲ
ಕುಂದದೆ ಲೋಕಲೋಕವ ತಿರುಗಿದ ರವಿ
ಬಂದಿಳಿದನೊ ಭೂತಳಕೆ 23
ವಸುದೇವಸುತನಾತ್ಮಜ ತಾನೆಂಬೆನೆ ಕುಸುಮ
ಬಾಣವು ಕೈಯೊಳಿಲ್ಲ
ದಶದಿಕ್ಪಾಲನೊ ಯಕ್ಷಗಂಧರ್ವನೊ ಎಂದು
ವಿಸ್ಮಿತೆಯಾದಳು ವಿಷಯೆ 24
ಸುತ್ತನೋಡುವಳಾರ ಸಂಚಾರವಿಲ್ಲೆನುತ
ಹತ್ತಿರೆ ಬಂದು ನಿಲ್ಲುವಳು
ಚಿತ್ತದೊಳೊಮ್ಮೊಮ್ಮೆ ನೆರೆಯ ನೇಮಿಸುವಳು
ಹೊತ್ತಲ್ಲವೆಂದು ಸಾರುವಳು 25
ಇಟ್ಟ ಕಾಲಂದಿಗೆ ಅಲುಗದಂದದಿ ಬಂದು
ಮುಟ್ಟುವೆನೆಂದು ನಿಲ್ಲುವಳು
ದಿಟ್ಟ ಹೆಂಗಸು ಇವಳಾರೋ ಎಂಬುವನೆಂದು
ಥಟ್ಟನೆ ಕಡೆಗೆ ಸಾರುವಳು 26
ಆದುದಾಗಲಿ ಇವನ ಅಗಲಲಾರೆನು
ಲಜ್ಜೆಹೋದರು ಹೋಗಲಿ ಎನುತ
ಪಾದದಿಂದಿಡಿದು ಮಸ್ತಕ ಪರಿಯಂತರ
ಭೇದಿಸಿ ನೋಡಿದಳವನ 27
ಸೊಗಸಿಂದ ನಿದ್ರೆಗೈದಿಂದುಹಾಸನು ತೊಟ್ಟ
ಚೊಗೆಯ ಕುಪ್ಪಸದ ಕೊನೆಯಲ್ಲಿ
ಬಿಗಿದುಕಟ್ಟಿರ್ದ ಪತ್ರಿಕೆಯನ್ನುಮೆಲ್ಲನೆ ತೆಗೆದುಕೊಂಡಳು
ಮಂತ್ರಿ ತನುಜೆ 28
ನಿದ್ರೆಯ ತಿಳಿದು ಎಚ್ಚೆತ್ತು ನೋಡುವನೆಂದು
ಹೊದ್ದಿದ್ದ ಲಜ್ಜೆ ಭಾವದಲಿ
ಸದ್ದು ಮಾಡದೆ ಸಂಪಿಗೆ ವೃಕ್ಷವನೆ
ಸಾರ್ದುಮುದ್ರೆಯೊಡೆದಳಂಬುಜಾಕ್ಷಿ 29
ನೋಡಿದು ತಮ್ಮ ತಂದೆಯ ಸ್ವಹಸ್ತದ
ಮೋಡಿಯ ಬರೆದ ಬರಹನು
ರೂಢಿಯೊಳತಿ ಚೆಲುವ ಇವನೆಂದು ಕಳುಹಿದನಾ
ಮಾಡಿದ ಸುಕೃತದ ಫಲದಿ 30
ಶ್ರೀಮತು ಮಂತ್ರಿ ದುಷ್ಟಬುದ್ಧಿ ಮದನಗೆ
ನೇಮಿಸಿ ಕಳುಹಿದ ಕಾರ್ಯ
ಸೀಮೆಗರಸು ಇವನಹನು ಕಾಣುತ ಶೀಘ್ರ
ವಿಷವ ಕೊಡುವುದುತ್ತಮವು 31
ಒಂದು ಲಿಖಿತ ಸಹಸ್ರ ಲಿಖಿತವು ಎಂದು
ಭಾವಿಸಿ ನಿನ್ನ ಮನದಿ
ಸಂದೇಹವಿಲ್ಲದೆ ವಿಷವ ಕೊಡುವುದು
ಮುಂದಕ್ಕೆ ಲೇಸುಂಟು ನಮಗೆ 32
ವಿಪ್ಪನ್ನವಾಗಿರ್ದ ವರನÀ ಕಾಣುತ
ನಮ್ಮಪ್ಪನವರು ಕಳುಹಿದರು
ತಪ್ಪುಂಟು ಇದರೊಳು ಕೆಡುವುದು ಕಾರ್ಯ
ಕೈತಪ್ಪೆಂದು ಮನದಲ್ಲಿ ತಿಳಿದು 33
ವಾಕಾರವನೆ ಚೆಳ್ಳುಗುರಿಂದಲಿ ತಿದ್ದಿ ಯೇಕಾರವನೆ ಮಾಡಿದಳು
ಜೋಕೆಯಿಂದಲಿ ಎಂದಿನಂದದಿ ಕಟ್ಟಿ ವಿರಹಾಕಾತುರದಿಂದ
ಮರುಗಿದಳು 34
ತೆಗೆದು ಚಾಪವ ಕಿವಿಗೇರಿಸಿ ಮನ್ಮಥ ಬಿಗಿದು
ಕಟ್ಟಿದ ಭರದಿಂದ
ತಗುಲಿತು ಎದೆಗೆ ಕೂರಂಬು ಬೆನ್ನಲಿ ತಟ್ಟುಗಿಯಿತು
ತಲೆಯನು ಎತ್ತಿ 35
ಹಿಂದಕ್ಕೆ ಹೆಜ್ಜೆಯನಿಡುವರೆ ಕಾಲೇಳವು ನಿಂದು
ನಿಂದೊಮ್ಮೆ ನೋಡುವಳು
ಹೊಂದಿತು ಇಂದುಹಾಸನ ಮೇಲೆ ಚಿತ್ತವು
ಕಂದಿ ಕಾತರಿಸುತಲಿಹಳು 36
ಮದನವಿಕಾರದಿಂದಲಿ ಮೋಹನಾಂಗಿಯು
ಬೆದರಿದ ಹುಲ್ಲೆಯಂದದಲಿ
ನದರುದಪ್ಪುವಳು ನಿಲ್ಲುವಳು ನಾಚುವಳೊಮ್ಮೆ
ಹೃದಯ ಸಂಚಲಿಸುತಲಿಹಳು 37
ಮನವ ಬೇರಿಟ್ಟು ಮಾತಾಡಳೆಲ್ಲರ ಕೂಡೆ ವಿನಯದಿ
ಹುಸಿ ನುಡಿಗಳನು
ಮನ್ಮಥ ತಾಪದ ಬೆಮರ್ವನಿಗಳಿಂದ ನೆನೆದವು
ಉಟ್ಟ ದೇವಾಂಗ 38
ಹೇಳದಿದ್ದರೆ ಹುಸಿವುದೆ ಈ ವಾರ್ತೆಯು ಗಾಳಿಗೆ
ಪರಿಮಳ ಮಾಜುವುದೆ
(one or two lines incomplete?)
****