dakshina kannada
ಅದು ಏತಕೆ ಬಂತೋ ||ಪ||
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ ||
ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ ||
ವೇದವಾದಗಳನೋದಿತಂತೆ
ಗಾದೆ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ ||
ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗ ಪುರಂದರವಿಠಲನ ಮರೆತು
ಭಂಗ ಬಹಳ ಪಟ್ಟಿತಂತೆ ||
****
ರಾಗ ಪೂರ್ವಿ ಆದಿತಾಳ (raga, taala may differ in audio)
Kurudu naayi taa samtege bantante || pa ||
adu yaatake banto || a.pa.||
Khanda sakkare hitavillavante | khandaa elabu kaddeetante |
hendiru makkala neccitante | kondu hoguvaaga yaarillavante || 1 ||
Naanaa janmavanettitante | maanavanaagi puttitante |
kaanana kaanana tirugitante | taane tannanu maretitante || 2 ||
Mangana kaiyali maanikyadante | haagoo hingoo kaledinte |
rangapurandara viththalana maretitante | bhanga bahala pattitante || 3 ||
***
pallavi
kuruDu nAyi tA santege bandade adu Edake bandO
caraNam 1
gaNDa sakkare hatavillavante gaNDa elubu kaDiditante
heNDira makkaLa neccitante koNDu hOguvAga yArillavante
caraNam 2
bharadi angaDi hokkitante tiruvi doNNeyali ikkidarante
maretarinnu vyarttavante narakadoLage bidditante
caraNam 3
vEda vAdagaLanOditante gAde mADi biTTidante
hAdi tappi naDEdu yamana bAdhege tA guriyAyitante
caraNam 4
nAnA janmavanettitante mAnavanAgi huTTitante
kAnana kAnana tirugitante tAnu tannane mareyitante
caraNam 5
mangaLa kaiya mANikyavante hAngo hIngo kaLedItante
ranga purandara viTTalana maredu bhanga bahaLa paTTitante
***
ಕುರುಡು ನಾಯಿ ಸಂತೆಗೆ ಬಂತಂತೆ, ಅದು ಏತಕೆ ಬಂತೋ. ಪ.
ಅರ್ಥ. ಕುರುಡು ನಾಯಿಯೊಂದು ಸಂತೆಗೆ ಬಂದಿತು. ಆದರೆ ಅದು ಏಕೇ ಬಂದಿತು ಯಾರಿಗೂ ತಿಳಿಯದ ವಿಷಯವಾಗಿದೆ.
ಆಧ್ಯಾತ್ಮಿಕ ಅರ್ಥ. ನಾಯಿ ಅಂದರೆ ಭೂಮಿಗೆ ಬಂದ ಅಜ್ಞಾನಿಯಾದ ಮಾನವ ಜೀವಿ. ಸಂತೆ ಅಂದರೆ ಈ ಸಂಸಾರ. ಅದೆಷ್ಟೋ ಜೀವರು ಬಂದಿದ್ದಾರೆ. ಈ ಭೂಲೋಕಕ್ಕೆ ಜೀವರು ಏಕೇ ಬಂದರು ಅದೇ ದೊಡ್ಡ ಪ್ರಶ್ನೆ. ಉತ್ತರ ಸರಳ. ಜೀವರುಗಳ ಪ್ರಾರಬ್ಧ ಕರ್ಮಗಳಿಗೆ ತಕ್ಕಂತೆ ಪಾಪಗಳನ್ನು ಅನುಭವಿಸಲು ಜೀವರು ಸಂಸಾರವೆಂಬ ಸಂತೆಗೆ ಬಂದಿವೆ. ಪರಮಾತ್ಮನ ಬಗ್ಗೆ ತಿಳಿದುಕೊಳ್ಳದೆ ಅಜ್ಞಾನಿ ಎಂದು ಕರೆಸಿಕೊಂಡು ಕುರುಡು ನಾಯಿ ಎನಿಸಿಕೊಂಡಿವೆ.
ಖಂಡ ಸಕ್ಕರೆ ಹಿತವಲ್ಲವಂತೆ
ತುಂಡು ಎಲಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತ್ತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ . ೧.
ಅರ್ಥ. ಭೂಲೋಕಕ್ಕೆ ಬಂದ ನಾಯಿಗೆ ಕಲ್ಲು ಸಕ್ಕರೆ ರುಚಿಸುವದಿಲ್ಲ ವಂತೆ. ಆದಕಾರಣ ಎಲುಬಿನ ತುಂಡನ್ನು ಕಡಿದು ತಿಂದಿತು. ಸಂಸಾರದಲ್ಲಿ ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ಮೋಹದಿಂದ ಕಂಡಿತು. ಯಮದೂತರು ಕರೆದು ಕೊಂಡು ಹೋಗುವಾಗ ಅದನ್ನು ಕಾಪಾಡಲು ಯಾರೂ ಇಲ್ಲವಂತೆ.
ಆಧ್ಯಾತ್ಮಿಕ ಅರ್ಥ. ಭೂಲೋಕದಲ್ಲಿ ಜನಿಸಿದ ನಾಯಿ ಎನಿಸಿಕೊಂಡ ಜೀವನು ಪರಮಾತ್ಮನ ಜ್ಞಾನವಿಲ್ಲದೆ ರಾಜಸ ಮತ್ತು ತಾಮಸ ಗುಣಗಳನ್ನೇ ಮೆಚ್ಚುತ್ತಾನೆ. ಸಾಧು ಜನರ ಹಿತವಾಕ್ಯಗಳು, ಸಾಧನೆಯ ಮಾರ್ಗದರ್ಶನ ಮಾಡುವ ಸಾತ್ವಿಕ ಗುಣವು ಈ ನಾಯಿಗೆ ರುಚಿಸುವದಿಲ್ಲ. ದಾಸರು ಈ ಸಾತ್ವಿಕ ಗುಣವನ್ನೇ ಖಂಡಸಕ್ಕರೆ ಎಂದು ಕರೆದಿರುವರು. ಮುಕ್ತಿ ಸಾಧನೆಯ ಸಕ್ಕರೆ ಬೇಡವಾಗಿ ರಾಜಸ ತಾಮಸ ಗುಣಕ್ಕೆ ತಕ್ಕಂತೆ ಎಲುಬು ಎಂಬ ನಿಷಿದ್ಧ ಪದಾರ್ಥವನ್ನು ತಿನ್ನುತ್ತಾನೆ.
ಈ ಸಂಸಾರದಲ್ಲಿ ಬಿದ್ದು ಹೆಂಡತಿ ಮಕ್ಕಳೇ ಪ್ರೀತಿಯವರು ಆಗುವರು. ಇವರ ಮೇಲ್ವಿಚಾರಣೆಯಲ್ಲಿ ಜೀವನ ಮನಸ್ಸು ಮುಕ್ತಿ ಸಾಧನೆಗೆ ಕಡೆಗೆ ಹರಿಯುವದಿಲ್ಲ. ಜಗತ್ತಿನ ಮಾಯೆಯಲ್ಲಿ ಸಿಲುಕಿ ಪಾರಮಾರ್ಥಿಕ ಸುಖವನ್ನು ಬಿಟ್ಟು ಲೌಕಿಕದಲ್ಲಿ ದೈಹಿಕ ಸುಖವನ್ನೇ ಮೆಚ್ಚುವನು. ಹೆಣ್ಣು, ಹೊನ್ನು, ಮಣ್ಣಿಗಾಗಿ ಜೀವನ ಹಾಲು ಮಾಡಿಕೊಳ್ಳುತ್ತಾನೆ. ತ್ರಿಷಣ ಗಳಿಗೆ ಬಲಿಯಾಗುತ್ತಾನೆ.
ಇಷ್ಟೆಲ್ಲಾ ಗಳಿಸಿ ಹೆಂಡತಿ ಮಕ್ಕಳು ಬಂಧು ಬಳಗದವರಿಗೆ ಸಹಾಯ ಮಾಡಿದರೂ ಕೊನೆಗೆ ಮರಣ ಸಮಯದಲ್ಲಿ ಇವನನ್ನು ಯಾರೂ ಕಣ್ಣೆತ್ತಿ ನೋಡುವದಿಲ್ಲ. ಏಕೆಂದರೆ ಮುಪ್ಪಿನ ಕಾಲದಲ್ಲಿ ಇವನಿಂದ ಬಳಗದವರಿಗೆ ಯಾವ ಲಾಭ ಇರುವದಿಲ್ಲ. ಮರಣ ಹೊಂದಿದಮೇಲೆ ಮುಟ್ಟಲೂ ಹಿಂಜರಿದು ದೂರ ಕೂಡುವರು. ಯಾರೂ ಬರುವದಿಲ್ಲ.ಅವನ ಹಿಂದೆ ಬರುವದು ಅಂದರೆ ಜೀವದ ಹಿಂದೆ ದೇಹ ಮನದ ಮುಖಾಂತರ ಮಾಡಿದ ಕರ್ಮ ಮಾತ್ರ ಎಂದು ದಾಸರು ವರ್ಣಿಸಿದ್ದಾರೆ.
*******