ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸಿನೆರೈಯ್ಯ ನಮ್ಮ ದೇವ ದೇವನಂ | ತಂದೆ ಮಹಿಪತಿ - ಜಪಾಲ ಭಕ್ತ ಜೀವ ಜೀವನಂ ಪ
ತೋರ್ಪಕರ್ಪೂರಗಂಗಛವಿಯ | ಸರ್ಪ ಅರ್ಪಿತಾಂಕ ಕಂಠ | ದಿರ್ಪ ಸರ್ಪ ಭೂಷಕಂ - ದರ್ಪ ದರ್ಪ ನಾಶನು 1
ಸ್ಥೈರ್ಯಧೈರ್ಯ ವೀರ್ಯೋದಾರ್ಯ | ವರ್ಯ ಚರ್ಯದೋರಿ ಜನಕ | ಕಾರ್ಯ ಕಾರ್ಯನರ ಹಿಸುವಾ | ಆರ್ಯ ರಾರ್ಯ ಸಾಂಬನಂ | 2
ಕಾಲಕಾಲ ಶಂಭುರಜತ | ಶೈಲವಾಲಯನಿಸಿ ಗಿರಿಜೆ | ನೀಲ ಲೋಹಿತಂಕ | ಪಾಲಿಶೂಲಿ ಶರ್ವನಂ 3
***