Showing posts with label ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿಕಂಡು ನಮಿಸಿದೆ gopalakrishna vittala satyabodha teertha stutih. Show all posts
Showing posts with label ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿಕಂಡು ನಮಿಸಿದೆ gopalakrishna vittala satyabodha teertha stutih. Show all posts

Sunday, 1 August 2021

ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿಕಂಡು ನಮಿಸಿದೆ ankita gopalakrishna vittala satyabodha teertha stutih

ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ-

ಕಂಡು ನಮಿಸಿದೆ ಸತ್ಯಬೋಧ ಮುನಿಯ

ಮಂಡೆ ಬಾಗುತ ದೇಹ ದಂಡವಿಕ್ಕುತಲಿ ಪ.


ಭವ್ಯ ಬೃಂದಾವನದಿ ವೈಭವದಿ ಮೆರೆವವರ

ಸವ್ಯಸಾಚಿಯ ಸಖನ ಪ್ರಿಯ ಪಾತ್ರರ

ದಿವ್ಯ ಕೂರ್ಮಾಸನದಿ ಕುಳಿತು ತಪಚರಿಸುವರ

ಅವ್ಯಯಾತ್ಮನ ಚರಣ ಧ್ಯಾನ ಮಾಳ್ಪವರ 1

ವಿಷವಿಡಲು ಪಾಪಿಗಳು ರಾಮಗರ್ಪಿಸಿ ಭುಜಿಸೆ

ನಿಶಿಯಲ್ಲಿ ನಿದ್ರೆ ಜೈಸುತ ನಿತ್ಯದಲಿ

ಹಸನಾಗಿ ದೇವತಾರ್ಚನೆ ಭೋಜನವಗೈಯೆ

ದೂಷಿಸಿದ ಕುಜನರಿಗೆ ರಾತ್ರೆ ಸೂರ್ಯನ ತೋರ್ದ 2

ಕಾಶಿಗ್ಹೋಗುವೆನೆಂಬ ಆಸೆ ಪೂರೈಸುವೊಡೆ

ತಾ ಸ್ವಪ್ನದಲಿ ಬಂದು ಜಾಹ್ನವಿಯು ಪೇಳೆ

ರಸರಹಿತವಾದ ವೃಕ್ಷದಿ ಗಂಗೆಯನೆ ತರಿಸಿ

ತಾ ಸ್ನಾನಗೈದು ಭಾಗೀರಥಿಯ ಪೂಜಿಸಿದ3

ಪೇಳಲಳವಲ್ಲದಿಹ ಬಹಳ ಕೌತುಕ ಮಹಿಮೆ

ಕಾಲಕಾಲಕೆ ತೋರಿ ಭಕ್ತರನು ಕಾಯ್ದು

ಮೇಲಾದ ಮಧ್ವ ಶಾಸ್ತ್ರಾರ್ಣವದಿ ಈಜುತಲಿ

ಲೀಲೆಯಿಂದಲಿ ಮಾಯ್ಗಳನೆ ಗೆದ್ದ ಮಹಿಮ 4

ಪ್ರತಿವರ್ಷ ಪಾಲ್ಗುಣದಿ ದ್ವಿತೀಯ ಪಕ್ಷದಿ

ದ್ವಿತೀಯ ತಿಥಿಯಲ್ಲಿ ದಿವ್ಯ ಉತ್ಸವ ಕೊಳುತ

ಸತತ ಈ ಸವಣೂರು ಕ್ಷೇತ್ರದಲಿ ನೆಲಸುತಲಿ

ಚ್ಯುತರಹಿತ ಗೋಪಾಲಕೃಷ್ಣವಿಠ್ಠಲನ ಭಜಿಪೆ5

***