ಕಲಯ ರಘುವಂಶಾಬ್ಧಿಸೋಮಂ ಕಲ್ಯಾಣರಾಮಂ
ಸಲಲಿತ ಗುಣಾಭಿರಾಮಂ ಸಕಲದಾನವವಿರಾಮಂ ಪ
ಮರಕತನೀರದ ಮಂಜುಳಗಾತ್ರಂ
ಹರಿಹಯ ಸನ್ನುತಮಂಬುಜನೇತ್ರಂ
ಹರಮುಖಸೇವಿತಂ ಮಾಸುರ ಸಂಸ್ತುತಂ
ಪರಮಪವಿತ್ರಂ ಬಾನುಜ [ಸಖ]ಮಿತ್ರಂ 1
ಕಮಲಜ ನಾರದ ಗಾನವಿಲೋಲಂ
ಕಮನೀಯಾನನ ಕಾಂಚನಚಲಂ
ಸುಮನಾಶ್ರಿತಜನ ಸುರತರುಮೂಲಂ
ದ್ಯುಮಣಿಕುಲಂ ರಣದೋರ್ಬಲಶೀಲಂ 2
ಅನಿಶಂವೇಮನನಿಜಕಾಮಂ
ಹನುಮತ್ಸೇವಿತ ಆಹವಭೀಮಂ
ಜನಕಾರ್ಚಿತಮತಿ ಸಾರ್ವಭೌಮಂ
ಘನ [ಕೋಸಲಪುರ] ಕಲ್ಯಾಣರಾಮಂ 3
****