ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ.
ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು
ಹರಿಯೇ ಎನ್ನಯ ದೊರೆಯೇ ಅ.ಪ.
ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು
ಆಹ್ವಾನ ತಂದು ನಿಂದಾನು
ಮಲ್ಲನ ಕೊಂದನು ಕೃಷ್ಣ
ರಜಕನ ಕೊಂದನು ರಕ್ತಾಲಂಕೃತನಾಗಿ
ಕುಬಜಿಯಿಂದ ಗಂಧವಾ ಕೊಂಡನು
ಡೊಂಕನು ತಿದ್ದಿದನು 1
ಚಾಣಿಕರ ಮುಷ್ಟಿಕರ ಕೂಡಾ
ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು
ರಂಗಮಂಟಪಕೆ ಬಂದು
ನಾನಾಭರರಣ ಭೂಷಿತನಾಗಿ
ರಾಜ ಬೀದಿಯೊಳು ಸಾಗಿ 2
ಮಧುರಾಪುರದ ನಾರಿಯರು
ಬಲು ಚೆಲುವಿಯರು
ನಿನ್ನನೆ ಮರುಳು ಮಾಡುವೋರು
ಯಮ್ಮನಗಲಿಸುವೋರು ಇವರು 3
ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು
ವೊಂದು ನಿಮಿಷವಾದರು
ಕಾಲಹ್ಯಾಗ ಕಳಿಯೋಣ
ಘನ ಮಹಿಮನ ಅಧರಾಮೃತ ಪರವಶವಾದೆವು 4
ಮಲ್ಲಯುದ್ಧವ ಮಾಡಿ
ಮಾವ ಕಂಸನ ಕೊಂದು
ಉಗ್ರಸೇನರಿಗೆ ಅನುಗ್ರಹವ ಮಾಡಿ
ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು
ಕಾಳಿಮರ್ಧನಕೃಷ್ಣ ನಿನಗಿಂದು 5
****