..
kruti by Nidaguruki Jeevubai
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ
ಮುತ್ತೈದೆಯರು ಜಯ ಪ
ರತ್ನಮಂಟಪದೊಳು ವರ ಮಹ-
ಲಕ್ಷ್ಮಿಯ ಕುಳ್ಳಿರಿಸಿ
ಮುತ್ತಿನ್ಹಾರಗಳ್ಹಾಕಿ
ಮುತ್ತೈದೆಯರು ಜಯ 1
ಮಿತ್ರೆ ಮಹಲಕ್ಷುಮಿಯ ಬಹು
ಸಿಸ್ತಿಲಿ ಶೃಂಗರಿಸಿ
ಉತ್ತಮಾಂಗನೆಗೀಗ
ಮುತ್ತೈದೆಯರು ಜಯ2
ಕರ್ತೃ ಶ್ರೀಹರಿ ಎನ್ನುತ ಕಮಲನಾಭ
ವಿಠ್ಠಲನರಸಿಗೀಗ
ಎತ್ತಿ ಚಾಮರ ಬೀಸಿ
ಮುತ್ತೈದೆಯರು ಜಯ3
***