ಪೂರ್ವಿಕಲ್ಯಾಣಿ ರಾಗ ಆದಿತಾಳ
check similar under shree krishna ankita
ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ,
ನಂಬದೇ ಕೆಟ್ಟರೆ ಕೆಡಲಿ ||ಪ||
ಅಂಬುಜನಾಭನ ಪಾದವ ನೆನೆಯೆ ಭ-
ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ||
ಬಲಿಯ ಪಾತಾಳಕ್ಕೆ ಇಳಿಸಿ ಭಕ್ತ-
ಗೊಲಿದು ಬಾಗಿಲ ಕಾಯ್ದನು
ಛಲದೊಳು ಅಸುರನ ಶಿರಗಳ ತರಿದು ತ-
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ ||
ತರಳ ಪ್ರಹ್ಲಾದಗೊಲಿದು
ಉಗುರಿನಿಂದ ಹಿರಣ್ಯನುದರ ಸೀಳಿದ
ಕರಿರಾಜಗೊಲಿದು ನೆಗಳು ನುಂಗಿರಲಾಗಿ
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ ||
ಪಾಂಡವರಿಂಗೊಲಿದು ಕೌರವರನ್ನು
ತುಂಡು ಛಿದ್ರವ ಮಾಡಿದ
ಅಂಡಲೆದು ದ್ರೌಪದಿ ಸಭೆಯೊಳು ಕೂಗೆ
ಬಂದು ಕಾಯ್ದ ಶ್ರೀಪುರಂದರವಿಠಲ ||
****
ನಂಬದೇ ಕೆಟ್ಟರೆ ಕೆಡಲಿ ||ಪ||
ಅಂಬುಜನಾಭನ ಪಾದವ ನೆನೆಯೆ ಭ-
ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ||
ಬಲಿಯ ಪಾತಾಳಕ್ಕೆ ಇಳಿಸಿ ಭಕ್ತ-
ಗೊಲಿದು ಬಾಗಿಲ ಕಾಯ್ದನು
ಛಲದೊಳು ಅಸುರನ ಶಿರಗಳ ತರಿದು ತ-
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ ||
ತರಳ ಪ್ರಹ್ಲಾದಗೊಲಿದು
ಉಗುರಿನಿಂದ ಹಿರಣ್ಯನುದರ ಸೀಳಿದ
ಕರಿರಾಜಗೊಲಿದು ನೆಗಳು ನುಂಗಿರಲಾಗಿ
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ ||
ಪಾಂಡವರಿಂಗೊಲಿದು ಕೌರವರನ್ನು
ತುಂಡು ಛಿದ್ರವ ಮಾಡಿದ
ಅಂಡಲೆದು ದ್ರೌಪದಿ ಸಭೆಯೊಳು ಕೂಗೆ
ಬಂದು ಕಾಯ್ದ ಶ್ರೀಪುರಂದರವಿಠಲ ||
****
ರಾಗ ಕಲ್ಯಾಣಿ ಅಟತಾಳ (raga, taala may differ in audio)
Nambi kettavarillavo rangayyana
Nambade kettare kedali ||pa||
Ambujanabana akila lokesana
Aprameyanada adipurushana ||apa||
Pitana todeya mele dhruvaraya
Hitadinda kulitiralu
Matihinalada surucidevi nukalu
Hitadi dhruvage patta kotta murariya ||1||
Vara prahladana pitanu badhisutire
Hari nine gatiyenalu
Parama pritiyinda taralana palisi
Durula hiranyakasyapana silida dhoreya ||2||
Karirajana salahi anjadirendu a-
Darisidavaru yaro
Garudagamana sri purandaravithalana
Caranakamalavannu drudhadinda nambiro||3||
***pallavi
nambi keTTavarillavO rangayya ninna nambadE keTTarE keDali
anupallavi
ambuja nAbhana akhila lOkEshana apramEyanAda Adi puruSana
caraNam
karirAjana salahi anjabEDendu AdarisidavarArO garuDa gamana
shrI purandara viTTalana caraNa kamalavannu drDhadinda nambirO
***
pallavi
nambi keTTavar illavO rangaiyyaa ninna
nambadE keTTarE kEDalee
(nambi)
anupallavi
ambuja naabana akhila lOkEshana
abramEya naada aadi purusha ninna
(nambi)
caraNam
kariraajana salahi anja bEDendu
aadarincidava daarO
garuDa gamana shree purandara viTThalanaa
caraNa kamala vannu driDa din dhanammirO
(nambi)
****
ಅಂಕಿತ ಶ್ರೀಕೃಷ್ಣ
pallavi
nmbikeTTavarillavO rangayyana nambadE keTTarE keDali
anupallavi
ambujanAbhana akhila lOkEshana kambu kandara krSNa karuNAsAgarana
caraNam 1
taraLa prahlAda sAkSi sarasiyoLidda gajarAjanobba sAkSi
maraNa kAladi ajamiLa magananu kareye garuDanEri banda garuva rahitana
caraNam 2
taruNi draupadi sireya dishyAsana sara sara seLeyutire
karuNi tannoDatiyoDane ADuvuda biTTu tvaradi akSayaviTTa shrI krSNarAyana
***
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ ||pa||
ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ ||apa||
ಪಿತನ ತೊಡೆಯ ಮೇಲೆ ಧ್ರುವರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ ||1||
ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ ||2||
ಕರಿರಾಜನ ಸಲಹಿ ಅಂಜದಿರೆಂದು ಅ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ||3||
****
ನಂಬಿ ಕೆಟ್ಟವರಿಲ್ಲವೊ
ಕೃಷ್ಣಯ್ಯನ ನಂಬದೆ ಕೆಟ್ಟರೆ ಕೆಡಲಿ
ಅಂಬುಜನಾಭನ ಪಾದವ ನೆನೆದರೆ
ಇಂಬುಗೊಡದೆ ದು:ಖ ಹರಿಸುವ ಶ್ರೀಕೃಷ್ಣ
ಬಲಿಯ ಪಾತಾಳಕಿಳುಹಿ ಭಕ್ತ
ಬಾಗಿಲವ ಕಾಯುವೆ ನಾನೆಂದ
ಛಲದೊಳು ಅಸುರರ ಶಿರಗಳ ತರಿದು
ತಾನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ
ತರಳ ಪ್ರಹ್ಲಾದಗೊಲಿದು ಉಗುರಿನಿಂದ
ಹಿರಣ್ಯನುದರ ಸೀಳಿದ
ಕರಿರಾಜಗೊಲಿದು ನೆಗಳು ನುಂಗುತಿರಲಾಗ
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ
ಪಾಂಡವರಿಗೊಲಿದು ಕೌರವರನು
ತುಂಡು ಛಿದ್ರವ ಮಾಡಿದ
ಗಂಡರೈವರ ಮುಂದೆ ದ್ರೌಪದಿ ಕೂಗಲು
ಕಂಡು ಕರುಣದಿ ಕಾಯ್ದ ಪುರಂದರವಿಠಲ
ನಂಬಿ ಕೆಟ್ಟವರಿಲ್ಲವೊ
*********
ನಂಬದೆ ಕೆಟ್ಟರೆ ಕೆಡಲಿ ||pa||
ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ ||apa||
ಪಿತನ ತೊಡೆಯ ಮೇಲೆ ಧ್ರುವರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ ||1||
ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ ||2||
ಕರಿರಾಜನ ಸಲಹಿ ಅಂಜದಿರೆಂದು ಅ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ||3||
****
ನಂಬಿ ಕೆಟ್ಟವರಿಲ್ಲವೊ
ಕೃಷ್ಣಯ್ಯನ ನಂಬದೆ ಕೆಟ್ಟರೆ ಕೆಡಲಿ
ಅಂಬುಜನಾಭನ ಪಾದವ ನೆನೆದರೆ
ಇಂಬುಗೊಡದೆ ದು:ಖ ಹರಿಸುವ ಶ್ರೀಕೃಷ್ಣ
ಬಲಿಯ ಪಾತಾಳಕಿಳುಹಿ ಭಕ್ತ
ಬಾಗಿಲವ ಕಾಯುವೆ ನಾನೆಂದ
ಛಲದೊಳು ಅಸುರರ ಶಿರಗಳ ತರಿದು
ತಾನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ
ತರಳ ಪ್ರಹ್ಲಾದಗೊಲಿದು ಉಗುರಿನಿಂದ
ಹಿರಣ್ಯನುದರ ಸೀಳಿದ
ಕರಿರಾಜಗೊಲಿದು ನೆಗಳು ನುಂಗುತಿರಲಾಗ
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ
ಪಾಂಡವರಿಗೊಲಿದು ಕೌರವರನು
ತುಂಡು ಛಿದ್ರವ ಮಾಡಿದ
ಗಂಡರೈವರ ಮುಂದೆ ದ್ರೌಪದಿ ಕೂಗಲು
ಕಂಡು ಕರುಣದಿ ಕಾಯ್ದ ಪುರಂದರವಿಠಲ
ನಂಬಿ ಕೆಟ್ಟವರಿಲ್ಲವೊ
*********