by ಪ್ರಾಣೇಶದಾಸರು
ಮಾತು ಸುಳ್ಳಾಗೊದೆ ದುರಿತಾರಿ | ಯನ್ನನಾಥನಿಂದಿಗೆ ರಕ್ಷಿಸೇ ಗೌರಿ ಪ
ಮಾತೆ ನಿನ್ನಯಪಾದಪ್ರೀತಿಂದ ಭಜಿಸಿದ್ದ |ಕ್ಕೀತ ಸಿಕ್ಕಿದ್ದನು ಚಾತುರ್ಯ ಪುರುಷ 1
ಧಾತಾಜನಾಡೀದ ಮಾತೀಗೆ ಕೋಪಾದಿ |ಈ ತೆರ ಮಾಡಿದ ತಾತನು ನೊಂದೂ 2
ಪೋರಾನಲ್ಲಮ್ಮಿವಾ ಆರೆಂದು ಹೇಳಾಲಿ |ಶೌರಿಯ ಮೊಮ್ಮಗನೀರಜನೇತ್ರೆ 3
ಭೃತ್ಯಾರ ಅಭಿಮಾನ ಮತ್ರ್ಯಾಪಗುಂಟಲ್ಲೆ |ಅತ್ತತ್ತವಾದೀನೆ ಹೆತ್ತವ್ವ ನಿನಗೇ 4
ಪ್ರಾಣೇಶ ವಿಠಲನು ಬಾಣನ ಶಿಕ್ಷಿಸಿ |ತಾನೆ ಯೀವಂದಾಗಿ ನೀನೊಲಿಯವ್ವಾ 5
*******