Showing posts with label ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ uragadrivasa vittala. Show all posts
Showing posts with label ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ uragadrivasa vittala. Show all posts

Monday, 2 August 2021

ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ankita uragadrivasa vittala

ಪಾಲಿಸು ಭಾರತಿಯೆ ದೇವಿಯೆ

ಕಾಲಮಾನಿಯ ತಾಯೆ ಪ


ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ

ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು

ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1


ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ

ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ

ಚಿತ್ತಜನಯ್ಯನಾ ಹತ್ತಿರಕೊಯ್ಯೆ 2


ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ

ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ

ವೆಂಕಟೇಶನ ಪಾದಪಂಕಜ ತೋರಿಸೆ3

****