Showing posts with label ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ mahipati. Show all posts
Showing posts with label ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ mahipati. Show all posts

Thursday, 12 December 2019

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ankita mahipati

ಭೈರವಿ ರಾಗ ತೀನ್ ತಾಳ

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ||

ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು
ಎಲ್ಲರೊಳಗೆಲ್ಲ ತಾನಾಗಬೇಕು
ಎಲ್ಲರೊಳಗೆಲ್ಲ ತಾನಾಗಿ ಎಲ್ಲ ತನ್ನೊಳಗಾಗಿ
ಬೆಲ್ಲ ಸವಿದ ಮೂಕನಂತಾಗಬೇಕು ||೧||

ಬಲ್ಲತನವನು ನೀಡಿ ಬಲ್ಲನೆ ತಾನಾಗಿ
ಬಲ್ಲರಿಯನೆಂಬುದು ಈಡ್ಯಾಡಬೇಕು
ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು
ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು ||೨||

ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು
ದೇಹವಿದೇಹದಲಿ ಬಾಳಬೇಕು
ಮಹಿಗೆ ಮಹಿಪತಿಯಾಗಿ ಸದ್ಗುರುವಾದ
ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ||೩||
***

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಪ  


ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 

ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 

ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3

****