ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಪ
ಕರುಣಾನಂದದ ಸಾಗರ ಕರಿವರ ಶರಣಾಗತಜನರ ಮಂದಾರ ಪರಮ ಉದ್ಧಾರ ಸುರ ಸಂಸಾರಾಯದಾಗರ ಪರಾತ್ಪರ ತರಣೋಪಾಯದಾಧಾರ 1
ಅನಾಥ ಜನರಾಶ್ರಯ ನೀನೆ ನಿಶ್ಚಯ ಅನುಭವಾನಂದಾ ಹೃದಯ ಘನಮಯ ದಿನಕರಕೋಟಿ ಪ್ರಭೆಯೆ ಜನವನಲಿಹ್ಯ ಮುನಿಜನರ ಹೃದಯ ಅನುದಿನದಲಕ್ಷಯ 2
ವಿಹಿತವಿಚಾರದ ವಿವರ ಈಹ್ಯಶ್ರೀಧರ ಸ್ವಹಿತ ಸುಖದ ಸುಸಾರ ಬಾಹ್ಯಾಂತರ ಮಹಿಮೆ ನಿನ್ನದು ಅಪಾರ ಮಹೇಶ್ವರ ಇಹ್ಯ ಪರದ ದಾತಾರ ಮಹಿಪತಿ ಸಹಕಾರ 3
***