Showing posts with label ಅಂಬಿಕಾಪತಿ ಉಮಾಪತಿಯೆಂದು hayavadana ankita suladi ಸಾಧನ ವಿಷಯ ಸುಳಾದಿ AMBIKAPATI UMAPATIYENDU SAADHANA VISHAYA SULADI. Show all posts
Showing posts with label ಅಂಬಿಕಾಪತಿ ಉಮಾಪತಿಯೆಂದು hayavadana ankita suladi ಸಾಧನ ವಿಷಯ ಸುಳಾದಿ AMBIKAPATI UMAPATIYENDU SAADHANA VISHAYA SULADI. Show all posts

Sunday 8 December 2019

ಅಂಬಿಕಾಪತಿ ಉಮಾಪತಿಯೆಂದು hayavadana ankita suladi ಸಾಧನ ವಿಷಯ ಸುಳಾದಿ AMBIKAPATI UMAPATIYENDU SAADHANA VISHAYA SULADI

Audio by Mrs. Nandini Sripad

ಶ್ರೀ ವಾದಿರಾಜ ಗುರುಸಾರ್ವಭೌಮ ವಿರಚಿತ 

 ಹರಿಯೇ ಸರ್ವೋತ್ತಮನೆಂಬ ಪ್ರಮೇಯ
 ಸಾಧನ ವಿಷಯ ಸುಳಾದಿ 

 ರಾಗ ಪಂತುವರಾಳಿ 

 ಧ್ರುವತಾಳ 

ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ -
ಯಂಬಕನ ಗೌರಿಯರಸನ ತುತಿಸುತಿದಕೋ
ಸಾಂಬಶಿವನೆಂಬವನು ಇವನೆ ಆದಡೆ ಜಡೆಯ
ಸಂಭ್ರಮದಿಂದ ಗಂಗೆ ಗರ್ವಿಸುವಳು
" ಡಂಭ ಏಕೋರುದ್ರನದ್ವಿತೀಯವತಸ್ತೆ "
ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವ ಸಖನು ಒ -
ಡಂಬಡದು ವಿಷ್ಣುನೆಂಬವತಾರ ಮೂಲರೂಪ
ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ
ಇಂಬು ಸಲ್ಲುವದು " ತ್ರಿಷ್ವಧಿಕೇಷುಕೊ ಮಹಾನ್ "
ಯೆಂಬ ಹಿರಿಯರ ಮತವ ಸುಮತವೆಂದು
ನಂಬು ಮನುಜ ಸ್ತಂಭಸಂಭವ 
ರುದ್ರ ಶೀರ್ಷಕನು ಪುರಹರನೆ ಗಡ
ಅಂಬುಜಾಕ್ಷ ಹಯವದನ ಅಖಿಳರೊಡೆಯಾ ॥ 1 ॥

 ಮಠ್ಯತಾಳ 

ಆರು ಪುರಾಣ ಗೌರಿಯ ಗಂಡನವು ಮ -
ತ್ತಾರು ಪುರಾಣ ಚತುರಮುಖನವು
ಆರು ಪುರಾಣ ಹಯವದನನವು 
ತೋರೋ ಸಾಂಬಶಿವನ ಪುರಾಣವ
ಭಾರತ ಪುರಾಣದೊಳಗಿಲ್ಲದ 
ಕಾರಣ ಶಶಶೃಂಗ ನಿನ್ನ ಶಿವಾ ॥ 2 ॥

 ತ್ರಿಪುಟತಾಳ 

ಕೈಲಾಸ ರುದ್ರನದು ವೈಕುಂಠಲೋಕ ನಮ್ಮ
ಶ್ರೀಲೋಲನಿಹ ಲೋಕ ಜಲಜಸಂಭವನಿಗೆ
ಮೂಲೋಕವಲ್ಲವೆ ಮೇಲಿನ ಸತ್ಯಲೋಕ
ಪೇಳೊ ನಿನ್ನ ಸಾಂಬಶಿವನ ಲೋಕ
ಖೂಳಜನ ರೊಡನಾಡದಿರು ದುರುಕ್ತಿಯ ಬಿಡು
ಸಾರೊ ಸಜ್ಜನ ಕುಲದೈವ ಹಯವದನನ್ನ 
ಆಳಾಗಿ ಬದುಕು ಶ್ರೀಹರಿ ಸರ್ವೋತ್ತಮನೆಂಬ
ಸಾರ ಮತವನು ಸೇವಿಸು ಮನುಜ ॥ 3 ॥

 ರೂಪಕತಾಳ 

ಶ್ರುತಿ ಪುರಾಣದೊಳಿಲ್ಲದ ಕ್ಷಿತಿಯೊಳರ್ಚನೆಗಲ್ಲದ
ದಿತಿಜ ದೇವಕ್ಕಳೊಲ್ಲದ ಮತಿವಂತರ ಮುಂದೆ ನಿಲ್ಲದ
ಮತವಿದ್ಯಾತಕೋ ಸಲ್ಲದ ನಮ್ಮ
ಗತಿ ಹಯವದನ ಬಲ್ಲಿದಾ ॥ 4 ॥

 ಝಂಪೆತಾಳ 

ಪರಶಿವ ನಿರಾಕಾರನಾದಡೆ ನಿರ್ಗುಣ ಬೊಮ್ಮ
ಹರ ಶಿವಾದಿ ಪೆಸರು ಪಂಚಮುಖನಿಗಲ್ಲದೆ ಸಲ್ಲ
ಶರೀರ ವೆರಸಿದಡೆ ಜನ್ಮ ಮರಣಗಳು ಬಿಡವು ನಿನ್ನ
ದುರುತ್ಸಹ ಬರಿದೆ ಪೋಯಿತೊ ಪರಶಿವ 
ಪರದೇವನೆಂದು ವಾಸುದೇವಗೆ ಸಾ -
ಸಿರನಾಮದೊಳಿದ್ದ ಕಾರಣ ಪರಶಿವನವನೆ
ಪೆರತೊಬ್ಬ ಶಿವನಿಲ್ಲ ಪರಾತ್ಪರ ನಮ್ಮ
ಸಿರಿದೇವಿಯರಸ ಹಯವದನ ಕಾಣೋ ॥ 5 ॥

 ರೂಪಕತಾಳ 

" ತ್ರಯ ತ್ರಿಂಶದ್ವೈ ದೇವಾ ಸೋಮಪಾ " ಯೆಂದು
ಪ್ರಿಯಾ ಪ್ರಾಯಾಧಾನಾ ಮೂವರು ಜೀವರು ನಿ -
ಶ್ಚಯಿಸಿ ಪೇಳಿದ ಕಾರಣದಿ ಇನ್ನೊಂದು
ಹೆದ್ದೈವ ಮತ್ತೆಲ್ಲಿಹದೊ
ನ್ಯಾಯವೆಲ್ಲಿಹದೊ ಪೇಳೆಲೊ ಕುವಾದಿ
ನ್ಯಾಯ ಕೋವಿದರೊಳು ಶ್ರೀ
 ಹಯವದನ ಬೊಮ್ಮ ಶಿವರೆಂಬ ಈ
ನ್ಯಾಯವು ತಪ್ಪದು ಇನ್ನೊಬ್ಬರೊಪ್ಪರೊ ॥ 6 ॥

 ಅಟ್ಟತಾಳ 

" ನಾಮಾನಿ ಸರ್ವಾಣಿ ಯಮಾ ವಿಶಂತಿ ತಂವೈ ವಿಷ್ಣು "
ಎಂದು ಶ್ರುತಿಯಲ್ಲಿ ಸುಪ್ರಸಿದ್ಧಾ
ನಾಮಗಳು ಹರಿಯಲ್ಲಿ ಪ್ರವೇಶಿಸಿದ ಕಾರಣ
ಆಮ್ನಯಾ ಬಂದಂತೆ ಬಹದೂ
ಭ್ರಾಮಕ ಶ್ರುತಿ ಸ್ಮೃತಿ ವಿರೋಧ ಬಳಿಸಿಕೊಳ್ಳಲಾರದೆ
ತಾ ಮತ್ತೆ ಕೆಡುವೆನೆಂದು
ಧೀಮಂತರೆಲ್ಲರು ಬಲ್ಲರು
ನೀ ಮರುಳಾಗಿ ಶ್ರೀಹಯವದನನ ಜರಿದು
ತಾಮಸ ರೋಳ್ಯಾಕೆ ಕೂಡುವಿ ॥ 7 ॥

 ಅಟ್ಟತಾಳ 

ಅದರಿಂದ ಹರಿಸರ್ವೋತ್ತಮನೆಂಬ ಶ್ರುತಿ ನಮ್ಮ
ಮಧುಸೂದನನ ಕೊಂಡಾಡುವದು ಸಂದೇಹವಿಲ್ಲ
ವಿಧುಗಳ ಮತದಲ್ಲಿ ಹರಿ ಸರ್ವೋತ್ತಮನೆಂದು
ಚದುರರೆಲ್ಲರು ಬಲ್ಲರು
ಉದಕ ಮಾತ್ರ ಕೊಡಲಮ್ಮೆಂಬದೇವನ
ಹೃದಯ ಕಮಲದೊಳು ನೆನೆ ಹಯವದನನ್ನ 
ಸದಮಲ ಚರಿತನ ಸದುಗುಣ ಭರಿತನ
ಮದ ಕ್ರೋಧ ವಿರಹಿತನಾ ॥ 8 ॥

 ಆದಿತಾಳ 

ಮತ್ತೊಂದು ದೈವದ ಘಸಣಿಯ ಬಿಡು ಪುರು -
ಷೋತ್ತಮನಂಘ್ರಿಯ ಭಜಿಸು ಭಕತಾರ
ಹತ್ತಿಲಿ ಸೇರಿ ವಿರಕ್ತಿಯ ಬಿಡದಿರು
ಭಕ್ತಿಯ ಮಾಡುತಿರು
ಹತ್ತಾವತಾರದ ಹರಿಯ ಚರಿತ್ರೆಯ
ಸುತ್ತಲಿ ಸುತ್ತುತ ಕೀರ್ತಿಸುತಿರು ಸರ್ವ
ಕರ್ತೃ ಹಯವದನನತ್ತ ಮನವ ಮಾಡು 
ದುಸ್ತರ್ಕಿಗಳ ಬಿಡು ॥ 9 ॥

 ಜತೆ 

ಹಯವದನನೇ ಗತಿ ಹಯವದನನೇ ಪತಿ
ಹಯವದನನೇ ಸುರಪತಿ ಸುರರುಗಳಿಗೆ ॥
*********


ಶಿವ ಸುಳಾದಿ ರುದ್ರ ದೇವರ ಸುಳಾದಿ (May be incomplete)

ಧ್ರುವತಾಳ
ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ-
ಯಂಬಕನ ಗೌರಿಯರಸನ ತುತಿಸುತಿದಕೊ
ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ
ಸಂಭ್ರಮದಿಂದ ಗಂಗೆ ಗರ್ವಿಸುವಳು
‘ಡಂಭ ಏಕೋರುದ್ರನದ್ವಿತೀಯವದನ್ತೌ’
ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ-
ಡಂಬಡದು ವಿಷ್ಣುವೆಂಬವತಾರ ಮೂಲರೂಪ
ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ
ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’
ಯೆಂಬ ಹಿರಿಯರ ಮತವ ಸುಮತವೆಂದು
ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ
ಅಂಬುಜಾಕ್ಷ ಹಯವದನ ಅಖಿಳರೊಡೆಯ ||1||

ಮಠ್ಯÀತಾಳ
ಆರು ಪುರಾಣ ಗೌರಿಯ ಗಂಡನವು ಮ-
ತ್ತಾರು ಪುರಾಣ ಚತುರಮುಖನವು
ಆರು ಪುರಾಣ ಹಯವದನನವು
ತೋರೊ ಸಾಂಬಶಿವನ ಪುರಾಣವ
ಭಾರತ ಪುರಾಣದೊಳಗಿಲ್ಲದ ಕಾರಣ ಶಶÀಶೃಂಗ ನಿನ್ನ ಶಿವ ||2||

ತ್ರಿಪುಟತಾಳ
ಕೈಲಾಸ ರುದ್ರನದು ವೈಕುಂಠಲೋಕ ನಮ್ಮ
ಶ್ರೀಲೋಲನಿಹಲೋಕ ಜಲಜಸಂಭವÀನಿಗೆ
ಮೂಲೋಕವಲ್ಲದೆ ಮೇಲಿನ ಸತ್ಯಲೋಕ
ಪೇಳೊ ನಿನ್ನ ಸಾಂಬಶಿವನ ಲೋಕ
ಖೂಳಜನರೊಡನಾಡದಿರು ದುರುಕ್ತಿಯನು ಬಿಡು
ಸಾರೊ ಸಜ್ಜನ ಕುಲದೈವ ಹಯವದನನ್ನ
ಆಳಾಗಿ ಬದುಕು ಶ್ರೀಹರಿ ಸರ್ವೋತ್ತಮನೆಂಬ
ಸಾರಮತವನು ಸೇವಿಸು ಮನುಜ ||3||

ರೂಪಕತಾಳ
ಶ್ರುತಿ ಪುರಾಣದೊಳಿಲ್ಲದ ಕ್ಷಿತಿಯೊಳರ್ಚನೆಗಲ್ಲದಾ-
ದಿತಿ ದೇವಕ್ಕಳೊಲ್ಲದ ಮತಿವಂತರ[ಮುಂದೆ]ನಿಲ್ಲದ
ಮತವಿದ್ಯಾತಕೊ ಸಲ್ಲದು ನಮ್ಮ
ಗತಿ ಹಯವದನ ಬಲ್ಲಿದ ||4||

ಝಂಪೆತಾಳ
ಪರಶಿವ ನಿರಾಕಾರನಾದಡೆ ನಿರ್ಗುಣ ಬೊಮ್ಮ
ಹರಶಿವಾದಿ ಪೆಸರು ಪಂಚಮುಖನಿಗಲ್ಲದೆ ಸಲ್ಲ
ಶರೀರವೆರಸಿದಡೆ ಜನ್ಮ ಮರಣಗಳು ಬಿಡವು ನಿನ್ನ
ದುರುತ್ಸಹ ಬರಿದೆ ಹೋಯಿತು
ಪರಶಿವ ಪರದೇವನೆಂದು ವಾಸುದೇವಗೆ ಸಾ-
ಸಿರನಾಮದೊಳಿದ್ದ ಕಾರಣ ಪರಶಿವನವನೆ
ಪೆರತೊಬ್ಬ ಶಿವನಿಲ್ಲ ಪರಾತ್ಪÀ್ಪರ ನಮ್ಮ
ಸಿರಿದೇವಿಯರಸ ಹಯವದನ ಕಾಣೊ ||5||

ರೂಪಕತಾಳ
ತ್ರಯತ್ರಿಂಶದ್ವೈದೇವಾ ಸೋಮಪಾ-ಯೆಂದು
ಪ್ರಿಯಾತ್ಪ್ರಿಯಧಾಮ ಮೂವರು ಜೀವರು ನಿ-
ಶ್ಚಯಿಸಿ ಪೇಳಿದ ಕಾರಣದಿ ಇನ್ನೊಂದು
ಹೆದ್ದೈವ ಮತ್ತೆಲ್ಲಿಹುದೊ
ನ್ಯಾಯವೆಲ್ಲಿಹುದೊ ಪೇಳೆಲೊ ಕುವಾದಿ
ನ್ಯಾಯಕೋವಿದರೊಳು ಶ್ರೀ
ಹಯವದನನ ಬೊಮ್ಮ ಶಿವರೆಂಬೊ ಈ
ನ್ಯಾಯವು ತಪ್ಪದು ಇನ್ನೊಬ್ಬರೊಪ್ಪರೊ ||6||

ಅಟ್ಟತಾಳ 

" ನಾಮಾನಿ ಸರ್ವಾಣಿ ಯಮಾ ವಿಶಂತಿ ತಂವೈ ವಿಷ್ಣು "
ಎಂದು ಶ್ರುತಿಯಲ್ಲಿ ಸುಪ್ರಸಿದ್ಧಾ
ನಾಮಗಳು ಹರಿಯಲ್ಲಿ ಪ್ರವೇಶಿಸಿದ ಕಾರಣ
ಆಮ್ನಯಾ ಬಂದಂತೆ ಬಹದೂ
ಭ್ರಾಮಕ ಶ್ರುತಿ ಸ್ಮೃತಿ ವಿರೋಧ ಬಳಿಸಿಕೊಳ್ಳಲಾರದೆ
ತಾ ಮತ್ತೆ ಕೆಡುವೆನೆಂದು
ಧೀಮಂತರೆಲ್ಲರು ಬಲ್ಲರು
ನೀ ಮರುಳಾಗಿ ಶ್ರೀಹಯವದನನ ಜರಿದು
ತಾಮಸ ರೋಳ್ಯಾಕೆ ಕೂಡುವಿ ॥ 7 ॥

 ಅಟ್ಟತಾಳ 

ಅದರಿಂದ ಹರಿಸರ್ವೋತ್ತಮನೆಂಬ ಶ್ರುತಿ ನಮ್ಮ
ಮಧುಸೂದನನ ಕೊಂಡಾಡುವದು ಸಂದೇಹವಿಲ್ಲ
ವಿಧುಗಳ ಮತದಲ್ಲಿ ಹರಿ ಸರ್ವೋತ್ತಮನೆಂದು
ಚದುರರೆಲ್ಲರು ಬಲ್ಲರು
ಉದಕ ಮಾತ್ರ ಕೊಡಲಮ್ಮೆಂಬದೇವನ
ಹೃದಯ ಕಮಲದೊಳು ನೆನೆ ಹಯವದನನ್ನ 
ಸದಮಲ ಚರಿತನ ಸದುಗುಣ ಭರಿತನ
ಮದ ಕ್ರೋಧ ವಿರಹಿತನಾ ॥ 8 ॥

 ಆದಿತಾಳ 

ಮತ್ತೊಂದು ದೈವದ ಘಸಣಿಯ ಬಿಡು ಪುರು -
ಷೋತ್ತಮನಂಘ್ರಿಯ ಭಜಿಸು ಭಕತಾರ
ಹತ್ತಿಲಿ ಸೇರಿ ವಿರಕ್ತಿಯ ಬಿಡದಿರು
ಭಕ್ತಿಯ ಮಾಡುತಿರು
ಹತ್ತಾವತಾರದ ಹರಿಯ ಚರಿತ್ರೆಯ
ಸುತ್ತಲಿ ಸುತ್ತುತ ಕೀರ್ತಿಸುತಿರು ಸರ್ವ
ಕರ್ತೃ ಹಯವದನನತ್ತ ಮನವ ಮಾಡು 

ದುಸ್ತರ್ಕಿಗಳ ಬಿಡು ॥ 9 ॥
*********