Showing posts with label ನಮೋ ನಮೋ ನಾರಾಯಣ ಸನ್ನುತ jagannatha vittala. Show all posts
Showing posts with label ನಮೋ ನಮೋ ನಾರಾಯಣ ಸನ್ನುತ jagannatha vittala. Show all posts

Saturday, 14 December 2019

ನಮೋ ನಮೋ ನಾರಾಯಣ ಸನ್ನುತ ankita jagannatha vittala

ಜಗನ್ನಾಥದಾಸರು
ನಮೋ ನಮೋ ನಾರಾಯಣ
ಸನ್ನುತ ಸುಗುಣ ಗುಣಾರ್ಣವ
ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ

ಲೋಕೇಶ ವಿಧಾತಜನಕ ರ
ತ್ನಾಕರಮಥನ ಜಗದಾಘಪಹ
ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ
ಆಕಾಶ ತರಂಗಿಣಿ ಪಿತ ಕರುಣಾಕರ
ಕೌಮೋದಕಿಧರ ಧರಣಿ ಕುವರಾಂತಕ
ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ 1

ಅರದೂರಾಬ್ಜ ಭವಾಂಡೋದರ
ಶರಣಾಗತ ಸವಿ ಪಂಜರ ಅಂ
ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ
ಕರಿವರ ಪ್ರಭಂಜನ ಪೀತಾಂ
ಬರಧರ ಖಳಕುಲವನ ವೈಶ್ವಾ
ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] 2

ಸತ್ವರಜಸ್ತಮ ಜೀವರ
ತತ್ ಸಾಧನವರಿತವರಗತಿ ಗ
ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು
ಉತ್ತಮ ಪುರುಷನೆ ಚೇತನ ಜಡದ
ತ್ಯಂತವಿಭಿನ್ನ ವಿಜಯ ಸಖ
ಸತ್ಯಸುಕಾಮ ಕಮಲನಯನನೆÉ ಚಿತ್ತೈಸೊ [ಹಸೆಗೆ]3

ವಾಸವತನುಸಂಭವ ಸಾರಥಿ
ವೀಶುದ್ಭುಜ ವಿಧೃತ ಸುದರ್ಶನ
ದಶಾರ್ಹ ದಿವಕರನಿಭ ಸಂಕಾಶÀ ಸುಭದ್ರಾತ್ಮಾ
ವಾಸುಕಿ ಪರ್ಯಂಕಶಯನ ಹರಿ
ವ್ಯಾಸಕಪಿಲ ದತ್ತಾತ್ರಯ ಮಹಿದಾಸ
ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]4

ಪಾಂಡವ ಸಖ ಪತಿತ ಸುಪಾವನ
ಚಂಡಾಂಶು ನಿಶಾಕರ ಪಾವಕ
ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ
ಕುಂಡಲ ಮಂಡಿತ ಗಂಡಸ್ಥಳ
ಖಂಡಮಹಿಮ ಖೇಚರ ಪುರಹರ
ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]5
********