Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಸಚ್ಚಿದಾನಂದ ಸರ್ವ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಸಚ್ಚಿದಾನಂದ ಸರ್ವ purandara vittala. Show all posts

Wednesday, 4 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ಸಚ್ಚಿದಾನಂದ ಸರ್ವ purandara vittala


 ರಾಗ : ಶ್ರೀ      ಮಿಶ್ರಛಾಪು


 ಜಯ ಮಂಗಳಂ ಶುಭ ಮಂಗಳಂ॥ಪ॥


ಸಚ್ಚಿದಾನಂದ ಸರ್ವಗುಣಪೂರ್ಣಗೆ 

ಅತ್ಯಂತ ಸುಜ್ಞಾನಗಬ್ಜಾಕ್ಷಗೆ

ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ 

ನಿತ್ಯ ಕಲ್ಯಾಣ ನಿರ್ದೋಷಗೆ ॥೧॥


ವ್ಯಾಸಾವತಾರಗೆ ವೇದಉದ್ಧಾರಗೆ 

ಸಾಸಿರಾ ನಾಮದಾ ಸರ್ವೇಶಗೆ 

ವಾಸವಾಗಿದ್ದ ಶ್ರೀವೈಕುಂಠನಿಲಯಗೆ 

ಶೇಷಗಿರಿವಾಸ ವೇಂಕಟರಾಯಗೆ ॥೨॥


ಅಂಬರೀಷನ ಶಾಪ ಪರಿಹರಿಸಿದವನಿಗೆ 

ತುಂಬುರು ನಾರದ ಮುನಿವಂದ್ಯಗೆ 

ಅಂಬುಜನಾಭಗೆ ಅಜನ ಪೆತ್ತವನಿಗೆ 

ಕಂಬುಕಂಧರ ಪುರಂದರವಿಠಲರಾಯಗೆ ॥೩॥


ಜಯ ಮಂಗಳಂ ನಿತ್ಯ ಶುಭ  ಮಂಗಳಂ॥

*****

ರಾಗ ಭೈರವಿ ಛಾಪುತಾಳ