ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಪ
ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1
ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2
ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3
ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
***