ಯೇಕೋ ದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ
ಸಾಕಾರ ಮೂರುತಿ ಸುಜನ ಮಂದಾರ ಅನೇಕದಿವ್ಯರೂಪ ಪ.
ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ
ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ
ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ
ಮನಸಿಜಪಿತ ಮೃದು ಮಧು ಸುಂದರ ಮಮಕಾರ
ಬಿಡಿಸೊ ನೀ ಎನ್ನ 1
ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ
ಸುರಪತಿತನಯನು ದಿನಕರ ವಂಶೋದ್ಧಾರನ
ಸತಿಯನು ಹಿಂಸಿಸಿ
ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ
ಸಕಲಾಗಮಸುತ್ತ್ಯಾ ಸಾಮಗಾನ ಲೋಲ 2
ಶರಧಿ ಶಶಿಧರ ಸನ್ನುತ ಶಾಶ್ವತ ಗುಣಭಾಸ
ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ
ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ
ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ 3
***