Showing posts with label ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ramesha. Show all posts
Showing posts with label ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ramesha. Show all posts

Monday, 11 November 2019

ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ankita ramesha

by ಗಲಗಲಿಅವ್ವನವರು
ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.

ಅರ್ಜುನ ಯಾತರ ಭಂಟನೆನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆÉ ಅ.ಪ.

ಏನೇನೂ ಧೈರ್ಯವಿಲ್ಲವೊ ಕೃಷ್ಣಗೆಬಲು ಮೀನಿನಂತ ಚಂಚಲವೊ 1

ಇಷ್ಟು ಎದೆಗಾರನಲ್ಲವೊ ಪಾರ್ಥಯುದ್ಧ ಬಿಟ್ಟರೆ ನಗುವರಲ್ಲವೊ 2

ಸೊಲ್ಲುಸಾಲವ ಕೊಡುವೊನಲ್ಲವೊದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ 3

ಹೆಣ್ಣು ಬಾಳ್ವೆ ಬಲು ಹೊಲ್ಲೊಹರಡು ಸಣ್ಣವಲ್ಲವೊ ನಿನಗಲ್ಲವೊ 4

ತಲೆದೂಗೊ ಲಕ್ಷಣ ಹೊಲ್ಲವೊಅತಿ ಮಲೆತು ನಡೆವ ಬುದ್ದಿ ಅಲ್ಲವೊ 5

ವೇಷಗಾರಿಕೆ ಬಲು ಹೊಲ್ಲವೊವಿಶೇಷ ಪರಾಕ್ರಮ ಅಲ್ಲವೊಅರ್ಜುನ6

ಬಿರಿಗಣ್ಣು ಲಕ್ಷಣ ಹೊಲ್ಲವೊದೊಡ್ಡ ಉರಿಮಾರಿಪುರುಷನಲ್ಲವೊ7

ಮರುಳುತನ ಬಲು ಹೊಲ್ಲವೊಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ 8

ತಿರುಕತನ ಬಲು ಹೊಲ್ಲವೊಅತಿ ಹರಕ ನೀ ಪುರುಷನಲ್ಲವೊ ಕೃಷ್ಣ 9

ಚೋರತನದಿಂದ ಬಲು ಕೆಟ್ಯೊನಿನ್ನ ಧೀರತನವ ತೋರಿಸಿ ಬಿಟ್ಯೊ 10

ಕೊಡಲಿಗಡುಕತನ ಹೊಲ್ಲವೊಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ 11

ಅಹಲ್ಯದೇವಿಯ ಕೆಡಿಸಿದನೆಂದುಬಹು ಭೋಳೆ ಬುದ್ದಿಹೇಳಲೊನಿಂದುಅರ್ಜುನ12

ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ 13

ವೈರಾಗ್ಯವ ತೋರಿಕೊಂಡೆಲ್ಲೊನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ 14

ಪೋರತನವು ಬಲು ಅಲ್ಲವೊ ಕೃಷ್ಣನಿನ್ನ ಜಾರತನವ ಬಿಡಲ್ಲಿವೊ 15

ದಾರಿದ್ರ್ಯತನ ಬಲು ಹೊಲ್ಲವೊದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ 16

ಅನ್ನವಸ್ತ್ರವು ನಿನಗಿಲ್ಲವೊಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ 17

ರಾಜ ಲಕ್ಷಣ ನಿನಗಿಲ್ಲವೊರೂಪಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ18

ದ್ವಂದ್ವ ಯುದ್ಧವÀ ಮಾಡಿದವನಲ್ಲವೊಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ 19

ಕರೆದರೆ ಯುದ್ಧಕ್ಕೆ ಹ್ಯಾಗೆಂದುನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ 20

ಕೃಷ್ಣ ಅರ್ಜುನರ ಈ ಸಂವಾದಸಂತುಷ್ಟ ರಾಮೇಶ ಕೊಡುವಮೋದ21
*******