Showing posts with label ಎಲ್ಲರಿಗೊಂದಿಸಿ ಕರವ ಜೋಡಿಸಿ ಎಲ್ಲರಿಗೊಂದಿಸಿ ramesha. Show all posts
Showing posts with label ಎಲ್ಲರಿಗೊಂದಿಸಿ ಕರವ ಜೋಡಿಸಿ ಎಲ್ಲರಿಗೊಂದಿಸಿ ramesha. Show all posts

Wednesday, 4 August 2021

ಎಲ್ಲರಿಗೊಂದಿಸಿ ಕರವ ಜೋಡಿಸಿ ಎಲ್ಲರಿಗೊಂದಿಸಿ ankita ramesha

 ..

ಎಲ್ಲರಿಗೊಂದಿಸಿ ಕರವ ಜೋಡಿಸಿ ಎಲ್ಲರಿಗೊಂದಿಸಿ ಪ.

ಎಲ್ಲರಿಗೊಂದಿಸಿ ಫುಲ್ಲನಾ¨sನÀ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ.

ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ 1

ಹದಿನಾಲ್ಕು ಲೋಕವ ಮುದದಿಂದ ಸೃಜಿಸಿದ ಪದ್ಮ ಸಂಭವನೆ ಪರಮೇಷ್ಠಿ ಪದ್ಮ ಸಂಭವನೆ ಪರಮೇಷ್ಠಿ ನಿನ್ನ ಪಾದ ಪದ್ಮವನೆ ಮೊದಲೆ ಬಲಗೊಂಬೆ2

ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ 3

ಹನುಮ ಭೀಮ ಮಧ್ವಮುನಿರಾಯಮಾರುತ ಘನಮಹಿಮಮಾರುತ ಘನಮಹಿಮ ಭಕ್ತ ವಿರಕ್ತನಿನ್ನ ಪಾದ ವನಜವ ಮೊದಲೆ ಬಲಗೊಂಬೆ4

ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು5

ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ6

ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ7

ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ 8

ಸೌಪರಣಿ ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ9

****