ಭೃಗುವಾರ ಬರಲಿಬೇಕು ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ
ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ.
ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1
ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2
ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3
ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4
ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
****