ಕಾಡುತಲಿಹುದು ಬೆಡಗಿನ ಕೋಡಗ
ಬಡವರಿಗಳವಲ್ಲ ಪೊಡವಿಯಲಿ ||ಧ್ರುವ||
ಮಾಯದ ಮುಖವದು ಮೋಹದ ನಾಶಿಕ
ಮಾಯ ಮಕರ ಕಿವಿಗಣ್ಣುಗಳು
ಹ್ಯಾವ ಹೆಮ್ಮೆಯು ಹುಬ್ಬು ಕಪಿ ಕಣ್ಣ ಎವೆಗಳು
ಬಾಯಿ ನಾಲಗೆ ಹಲ್ಲು ಬಯಕೆಗಳು ||೧||
ಗರ್ವಗುಣ ಶಿರ ಗಾತ್ರ ಸರ್ವಾಂಗವು ದುರುಳ
ದುರ್ಬುದ್ಧಿಯ ಬೆರಳುಗಳು
ಎರಡು ತುಟಿಗಳೆಂಬ ನಿಂದೆ ದೂಷಣಗಳು
ಕೊರಳು ಕುತ್ತಿಗೆ ದುಷ್ಕರ್ಮಗಳು ||೨||
ಹಣೆಯು ದಾಡಿಯು ಗಲ್ಲ ಪ್ರಪಂಚ ಶೋಭಿತ
ಕಣ್ಣ ಭಾವಗಳಿವು ಚಂಚಲವು
ಬಣ್ಣಬಣ್ಣದಿ ಕುಣಿದಾಡುವ ಕಪಿ
ಗುಣ ಏನೆಂದ್ಹೇಳಲಿ ಕಪಿ ವಿವರಣವ ||೩||
ಉದರ ಬೆನ್ನುಗಳಿವು ಸ್ವಾರ್ಥ ಬುದ್ಧಿಗಳು
ಮದಮತ್ಸರಗಳೆಂಬ ಕೈಗಳು
ಪಾದ ಕಾಲುಗಳಿವು ಕಾಮಕ್ರೋಧಗಳು
ಮೇದಿನಿಯೊಳು ಕುಣಿದಾಡುವದು ||೪||
ಆಶೆಯೇ ಪಂಜವು ವಾಸನೆ ಬಾಲವು
ಮೋಸ ಮೂಕರ ಗುಣಕೇಶಗಳು
ಏಸು ಮಂದಿಯ ಕಪಿ ಘಾಸಿಯ ಮಾಡಿತು
ಮೋಸಗೈಸಿತು ಭವಪಾಶದಲಿ ||೫||
ಅಶನವ್ಯಸನ ತೃಷಿ ಕಪಿಗಿದು
ಭೂಷಣ ಮೀಸಲಾಗಿಡಿಸಿತು ಸುವಾಸದ
ಹಸಗೆಡಿಸುದು ಯತಿಮುನಿಗಳ ತಪಸವ
ಮುಸುಕಿತು ಮೋಸವು ಕಪಿಯಿಂದಲಿ ||೬||
ಕಂಡದ್ದು ಬೇಡುತ ಅಂಡಲಿಯುತಲಿಹುದು
ಮಂಡಲದೊಳು ತಾ ಕಾಡುತಲಿ
ಪಿಂಡ ಬ್ರಹ್ಮಾಂಡದಿ ಲಂಘಿಸುತಿಹುದು
ಹಿಡದು ಬಿಡದು ಮುಷ್ಟಿ ಬಿರುದುಗಳ ||೭||
ಪುಂಡತನದಿ ಬಲು ಮಂಡವಾಗಿಹುದು
ಹಂಡೀಗತನದಲಿ ಬಾಳುವದು
ಭಂಡಿನಾ ಆಟಿಗೆ ಗಂಡಾಗಿಹುದು
ಕಂಡ ಕಡಿಗೆ ಹರಿದಾಡುತಲಿ ||೮||
ಮೂಢ ಮಹಿಪತಿಯ ಕಾಡುವ ಕಪಿಗಿನ್ನು
ಜಡಸೀದ ಗುರು ಜ್ಞಾನಸಂಕೋಲೆಯ
ಕಾಡುವ ಕಪಿ ಕೈಯ ಬಿಡಿಸಿದ ಗುರು ಎನ್ನ
ಕಡೆಯ ಮಾಡಿದ ಬ್ರಾಹ್ಮಣ ಜನ್ಮದಲಿ ||೯||
***
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಡುತಲಿಹ್ಯದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ಪ
ಮಾಯದ ಮುಖವದು ಮೋಹದ ನಾಸಿಕ ಮಾಯಮಕರ ಕಿವಿಕಣ್ಣುಗಳು ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು ಬಾಯಿ ನಾಲಿಗೆ ಹಲ್ಲು ಬಯಕಿಗಳು 1
ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು 2
ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣ£ 3
ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು 4
ಆಶಿಯೇ ಪಂಜವು ವಾಸನೆ ಬಾಲವು ಮೋಸಮೂಕರ ಗುಣಕೇಶಗಳು ಏಸು ಮಂದಿಯ ಕಪಿ ಘಾಸಿಯ ಮಾಡಿತು ಮೋಸಗೈಸಿತು ಭವಪಾಶದಲಿ 5
ಅಶನ ವ್ಯವಸನ ತೃಷಿ ಕಪಿಗಿದು ಭೂಷಣ ಮೀಸಲಾಗಿಡಿಸಿತು ಸುವಾಸದ ಹಸಗೆಡಿಸುದು ಯತಿ ಮುನಿಗಳ ತಪಸವು ಮುಸುಕಿತು ಮೋಸವು ಕಪಿಯಿಂದಲಿ 6
ಕಂಡದ್ದು ಬೇಡುತಾ ಅಂಡಲಿಯುತಿಹುದು ಮಂಡಲದೊಳು ತಾ ಕಾಡುತಲಿ ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು ಹಿಡದು ಬಿಡದು ಮುಷ್ಟಿಬಿರುದುಗಳು 7
ಪಂಡತನದಿ ಬಲು ಪುಂಡನಾಗಿಹದು ಹಂಡೀಗತನದಲಿ ಬಾಳುವದು ಭಂಡಿನಾ ಅಟಿಗೆ ಗಂಡಾಗಿಹುದು ಕಂಡಕಡಿಗೆ ಹರಿಡಾಡುತಲಿ 8
ಮೂಢಮಹಿಪತಿಯ ಕಾಡುವ ಕಪಿಗಿನ್ನು ಜಡಸೀದ ಗುರುಜ್ಞಾನ ಸಂಕೋಲಿಯು ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ 9
***
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣಬಹುದಕೆ ಕನ್ನಡಿಯಾಕೆ ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ಪ
ಕುಂಭಿನಿಯೊಳು ಘನಹೊಳೆಯುತ ತುಂಬಿತುಳುಕುತಲ್ಯಾದೆ ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ ಇಂಬು ತಾನೆ ಆಗ್ಯಾದೆ 1
ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯಾ ಚೆನ್ನಾಗಿ ಒಳ ಹೊರಗಿದು ಭಾಸುತಿ ಹ್ಯ ದೆಲ್ಲಾ ಸುಳವು ಬಲ್ಲಾತ ಯೋಗಿ ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ ಹೊಳೆವುತಿಹ್ಯದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ 2
ಇಲ್ಲೆವೆ ಎರಡು ಹಾದಿಯ ಕಟ್ಟಿಗುಲ್ಲುಮಾಡದೆ ನೋಡಿ ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ ಅಲ್ಲಿಯೆ ಮನ ತಾಂ ಮನಿಕಟ್ಟಿ ಫÀುಲ್ಲನಾಭನ ಕೂಡಿ 3
***