Showing posts with label ಅಂಗನೆ ನಿನ್ನ ಮುಖದಿರುವಿಂತು ನೆರೆದಿಂಗಳ ಸೋಲಿಸುವಂತೆ ತೋರುತಿದೆ ankita devapura lakshmikanta. Show all posts
Showing posts with label ಅಂಗನೆ ನಿನ್ನ ಮುಖದಿರುವಿಂತು ನೆರೆದಿಂಗಳ ಸೋಲಿಸುವಂತೆ ತೋರುತಿದೆ ankita devapura lakshmikanta. Show all posts

Monday, 2 August 2021

ಅಂಗನೆ ನಿನ್ನ ಮುಖದಿರುವಿಂತು ನೆರೆದಿಂಗಳ ಸೋಲಿಸುವಂತೆ ತೋರುತಿದೆ ankita devapura lakshmikanta

Kavi Lakshmeesha 1550+ Devanuur, Chikmagalur District famous for Jaimini Bharata 

ಅಂಗನೆ ನಿನ್ನ ಮುಖದಿರುವಿಂತು ನೆರೆ

ದಿಂಗಳ ಸೋಲಿಸುವಂತೆ ತೋರುತಿದೆ ಪ


ಮಿಸುಪ ಕೆಂಪಿನೊಳಸಿತಗಳೇನೇ ಯೀ

ಎಸೆವಚ್ಚಬಿಳಿದರೊಳು ರಾಗವೇಕೇ

ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ

ಪೊಸತಾವರೆಯ ಮೇಲೆ ಮಳೆ ಸೂಸಿತೇ 1


ಅಂಬರ ಅಳಿದಿಹುದೇನೆ ಮರಿ

ದುಂಬಿಯ ಹಂಬಲು ಪೊಸತಾಗಿದೆ

ತಂಬೆಲರಳತೆಗೆ ಪೇರ್ಚಿದೆಯೇನು

ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ 2


ಬಾಲೆ ನೀಕರೆಯ ಹೋಗಿ ನೆರದೆಯೇ ಈಗ

ಮೂಲೋಕ ಮೋಹನ ಸುರಪುರವ

ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ

ಮೇಲಿಕ್ಕಿ ನೆರದುದಾ ಯೇನೆಂಬೆನೇ 3

****