Kavi Lakshmeesha 1550+ Devanuur, Chikmagalur District famous for Jaimini Bharata
ಅಂಗನೆ ನಿನ್ನ ಮುಖದಿರುವಿಂತು ನೆರೆ
ದಿಂಗಳ ಸೋಲಿಸುವಂತೆ ತೋರುತಿದೆ ಪ
ಮಿಸುಪ ಕೆಂಪಿನೊಳಸಿತಗಳೇನೇ ಯೀ
ಎಸೆವಚ್ಚಬಿಳಿದರೊಳು ರಾಗವೇಕೇ
ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ
ಪೊಸತಾವರೆಯ ಮೇಲೆ ಮಳೆ ಸೂಸಿತೇ 1
ಅಂಬರ ಅಳಿದಿಹುದೇನೆ ಮರಿ
ದುಂಬಿಯ ಹಂಬಲು ಪೊಸತಾಗಿದೆ
ತಂಬೆಲರಳತೆಗೆ ಪೇರ್ಚಿದೆಯೇನು
ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ 2
ಬಾಲೆ ನೀಕರೆಯ ಹೋಗಿ ನೆರದೆಯೇ ಈಗ
ಮೂಲೋಕ ಮೋಹನ ಸುರಪುರವ
ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ
ಮೇಲಿಕ್ಕಿ ನೆರದುದಾ ಯೇನೆಂಬೆನೇ 3
****
No comments:
Post a Comment