ಸುಂದರಾಂಗನೆ ನಿನ್ನ ಇಂದು ಶ್ರೀರೂಪವ ಛಂದಾದಿಂದಲಿ
ನೋಡುವೆನು ಆನಂದ ಪಡುವೆನು ಪ.
ಭರದಿಜರಿ ಪೀತಾಂಬರವನುಟ್ಟಳು ಇವಳು
ಬಿಳಿಯ ಕುಪ್ಪುಸವಾ ತೊಟ್ಟಳು
ಲಲಾಟದಿ ಕುಂಕುಮ ತಿಲಕವನಿಟ್ಟಳು ವಾರೆ
ನೋಟವ ನೋಡುವಳು 1
ಪಾದಾಕೊಪ್ಪುವ ಋಳಿ ಪೈಜಣಿ ಕಾಲುಂಗರದಂದಾ
ನೋಳ್ಪ ಜನಕ್ಕೇ ವಿನೋದಾ ದೈವ ದೈತ್ಯ
ಸಾಲಿನೊಳಗೆ ಅಘಾದ ಪರಿಪೂರ್ಣ 2
ಗಳದಿ ಕಠಾಣೆಯಕಟ್ಟಿ ಅದರ ಮೇಲ್ ಗೆಜ್ಜೆಯ ಟೀಕಿ
ಪುಥಲಿಸರ ಚಂದ್ರಹಾರಗಳು ವೈಯಾರದಿ ಬರುವೋಳೂ 3
ಮುದ್ದು ಮುಖಕ್ಕೆ ತಕ್ಕ ಮುಖುರೆ ಬುಲಾಕು ದ್ರಾಕ್ಷಝೂಲರ
ಬುಗುಡಿಯ ಬೆಳಕು ಆನಂದ ಸುರಿಯೋಳು ಇವಳು ಮನಕ 4
ಚವರಿ ಚಂದ್ರಾ ಜಡಿ ಭಂಗಾರದ ರಾಗುಟಿ ಬೈತಲ ಮುತ್ತನಿಟ್ಟ
ಹೇಳ ಭಂಗಾರ ಗೊಂಡೆವ ಕಟ್ಟಿ ಇವಳ್ಯಾರು ಧಿಟ್ಟಿ 5
ಮಂದರ ಮಲ್ಲಗಿ ಸುಗಂಧಿಯು ತ್ಯಾದಿಗಿ ನೂತನದ ಪಾರಿಜಾತವನ್ನು
ಇಂದು ತಾಂಬೂಲ ಮೆಲುವುತ ಮುಗುಳು ನೆಗಿಯು ನಗುತ 6
ತರುಣಿಯೆನ್ನದಿರು ಹರಿಯಾ ರೂಪಾವ ವ್ಹಾ ನೋಡು
ಈ ಶ್ರೀ ರೂಪದಿಂದ ಹರನು ಮೋಹಿಸಿದನು
ಛಂದಾಮನ ಕಾನಂದಾ 7
ಮಂಗಳಾಂಗನೆ ಎನ್ನುತ ರಂಗಾನಲ್ಲಿರು
ನೀನು ಶ್ರೀರಂಗನಾಯಕನೆ
ಕಾಳಿಂಗಶಯನನೆ ನರಶಿಂಗನೋ 8
ಯೇಷ್ಟುನೋಡಿದರು ಈ ಧಿಟ್ಟ ಮೂರುತಿಯ ದೃಷ್ಟಿ ತಾಕುವ
ದಯ್ಯ ಕಾಳಿಯ ಮರ್ಧನ ಕೃಷ್ಣರಾಯಾ 9
****
No comments:
Post a Comment