ಆರು ಬಂದರು ಸಖಿ ತೇರಿನ ಬೀದಿಲೆಮಾರಜನಕನ ಸಾರುತ ಹೊಗಳುವರಾರೆ ಕರಿಪುರದಲಿ ಬಂದವರಾರೆ ಪ.
ದುಷ್ಟ ದೈತ್ಯರ ಶಿರವ ಕುಟ್ಟಿ ತಮಸ್ಸಿಗೆ ಹಾಕಿಅಟ್ಟಹಾಸದಿಂದ ಭೇರಿ ಘಟ್ಯಾಗಿ ಹೊಯಿಸುವರಾರೆ1
ಕ್ರೂರ ದೈತ್ಯರ ಶಿರವ ಸೇರಿಸಿ ತಮಸ್ಸಿಗೆ ಭೋರೆಂಬೊ ತುತ್ತೂರಿ ಕಾಳಿ ಹಿಡಿಸುವರಾರೆ 2
ವೆಂಕಟನ ದ್ವೇಷಿಗೆ ಸಂಕಟ ಬಿಡದೆಂದುಡಂಕರದಿಂದಲೆ ಡಂಕಿಯ ಹೊಯಿಸುವರಾರೆ 3
ಖೂಳ ದೈತ್ಯರ ಶಿರವ ಸೀಳಿ ತಮಸಿಗೆ ಹಾಕಿಭಾಳಾ ರೌಸದಿಂದ ಕಾಳಿಯ ಹಿಡಿಸುವರಾರೆ4
ಭಾಗವತರ ಸುಖ ಹೀಗೆ ಉನ್ನತ ಎಂದು ಈಗ ತೋರುತ ಭರದಿ ನಾಗಸ್ವರ ಹಿಡಿಸುವರಾರೆ5
ಅಂಬುಜನಾಭನ ನಂಬಲು ಸುಖವಿತ್ತು ಬಂಬಂಬೆನುತ ಶಂಖವ ಸಂಭ್ರಮದಿ ಹಿಡಿಸುವರಾರೆ 6
ಕೌಂಸಾರಿ ನಿರ್ಜರ ಹಂಸನೀ ಹೌದೆಂದು ಸಂಶಯ ಬಿಡಿಸುತ ಕಂಸಾಳೆ ಹೊಯ್ಸುವರಾರೆ7
ಎಷ್ಟೆಷ್ಟು ಕಾಲಕ್ಕೂ ಕೃಷ್ಣಗೆ ದೊರೆ ಎಂದುಶ್ರೇಷ್ಠಾದ ಜಾಂಗುಟಿ ಫಟ್ಯಾಗಿ ಹೊಯಿಸುವರಾರೆ8
ಕಬ್ಬು ಬಿಲ್ಲಿನಯ ಒಬ್ಬ ಜಗದೀಶನೆಂದುಅಬ್ಬರದಿ ಕರಣೆ ನಿರ್ಭಯದಿ ಹಿಡಿಸುವರಾರೆ9
ಮಿತಿಯಿಲ್ಲದೆ ಶೃತಿ ಸಾರುವ ಮಧ್ವಮvವೆÉ ಅಧಿಕವೆಂದು ಶೃತಿಯನೆÉ ಹಿಡಿಸುವರಾರೆ 10
ತಂದೆ ರಾಮೇಶನ ಹೊಂದಲು ಸುಖವೆಂದು ಸುಂದರ ಕೊಳಲನೆ ಮುಂದೆ ಊದಿಸುವರಾರೆ 11
****
No comments:
Post a Comment