Showing posts with label ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಗುರು ಮಧ್ವ ೨ ankita kamalanabha vittala. Show all posts
Showing posts with label ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಗುರು ಮಧ್ವ ೨ ankita kamalanabha vittala. Show all posts

Thursday 5 August 2021

ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಗುರು ಮಧ್ವ ೨ ankita kamalanabha vittala

..

kruti by Nidaguruki Jeevubai


ಲಾಲಿ ಲಾಲಿ ಹನುಮ ಲಾಲಿ ಬಲಭೀಮ

ಲಾಲಿ ಲಾಲಿ ಲಾಲಿ ಗುರು ಮಧ್ವರಾಯ ಪ


ತ್ರೇತೆಯಲಿ ಸಾಗರವ ದಾಟಿ ನಿಮಿಷದಲಿ

ಸೀತೆಗುಂಗರ ಕೊಟ್ಟು ಕುಶಲ ತಿಳಿಸುತಲಿ

ದೂತರಾವಣಗೆ ಶೌರ್ಯಗಳ ತೋರುತಲಿ

ಸೀತೆಯ ಕ್ಷೇಮ ರಘುನಾಥಗರುಹುತಲಿ 1


ದ್ವಾಪರದಿ ಕೃಷ್ಣನಿಗೆ ಪರಮಾಪ್ತನಾಗಿ

ದ್ರೌಪದಿಯ ವಚನವನು ಸಲಿಸಬೇಕಾಗಿ

ಕೋಪದಲಿ ಖಳನ ಸೀಳುತ ತೃಪ್ತನಾಗಿ

ಈ ಪರಿಯಲಿ ಹರಿಗೆ ಅರ್ಪಿಸುತ ಚನ್ನಾಗಿ2


ಮಧ್ವಮತವನುದ್ಧರಿಸಬೇಕೆನುತ

ಶ್ರದ್ಧೆಯಲಿ ಕೃಷ್ಣನ್ನ ಸೇವಿಸುತ ಸತತ

ಮುದ್ದು ಕಮಲನಾಭ ವಿಠ್ಠಲನ ಸ್ಮರಿಸುತ್ತ

ಸದ್ಗ್ರಂಥ ರಚಿಸಿ ಬದರಿಯಲಿ ವಾಸಿಸುತ 3

***