by ಗುರುತಂದೆವರದಗೋಪಾಲ ವಿಠಲ
ಸಾರ್ಥಕ ಉದ್ದದಕೆ ಸಿರಿ ಪಾರ್ಥಸಖನಾ ಗುಣಕೀರ್ತನೆ ಮಾಡಲು ಪ
ಯಂಟೆಂಟೆರಡುನಾಲ್ಕು ಸಾವಿರ ನುಡಿಯಲಿ ಯಂಟೆಂಟೆರಡು ರೂಪದಲಿ ಯಂಟೆಂಟೆರಡು ಮೂರೈದು ವ್ಯಂಜನದಿ ಯಂಟೆಂಟು ಮತ್ತೆಂಟು ಸ್ವರವ ತಿಳಿ 1
ಯಂಟೆಂಟೆರಡು ಕೇಸರದಳ ಆರೆಂಟು ಕಮಲ ಕರ್ಣಿಕೆಯಲ್ಲಿ ಯಂಟೆಂಟೆರಡರ ನಾಲ್ಕು ಸ್ತಂಭರಥ ಮಂಟಪದೊಳಗಿನ ವೆಂಕಟನ ನೋಡು2
ಯಂಟೆಂಟು ಕರಗಳಲಿ ಯಂಟಾಯುಧ ಪಿಡಿದು ಯಂಟು ದಿಕ್ಕಿನಲಿ ತಿರುಗುತಲಿ ಯಂಟು ವಿಧದಿ ಪ್ರೇರಣೆ ಮಾಡುವ ನಮ್ಮಾ ನೆಂಟ ತಂದೆಗುರುಗೋಪಾಲವಿಠಲನು 3
***