Showing posts with label ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು hanumesha vittala. Show all posts
Showing posts with label ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು hanumesha vittala. Show all posts

Tuesday, 1 June 2021

ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು ankita hanumesha vittala

ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು

ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ


ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ

ಕೆಟ್ಹೋಗಲೆಂದು ತಾ ಬಯಸಳು

ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು

ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ 1


e್ಞÁನವಿಲ್ಲದೆ ಹರಿಯೇ ನಾನು ನೀನು ಸರಿಸ-

ಮಾನರೆಂದರಿತು ನಾ ಮೋಸ ಹೋದೆ

ನಾನು ನಿನ್ನಾಧೀನವಿರುವೆನೇ ಹೊರ್ತು ನೀ

ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ 2


ಏಸು ಜನ್ಮಗಳಿಂದ ವೇಷವಾ ಧರಿಸಿ ಹನು-

ಮೇಶ ವಿಠಲನೆ ನಾ ತೋರಿಸಿದೆನೋ

ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ

ಬೇಸರಾಗಿರೆ ಇನ್ನು ವೇಷವನು ಬಿಡಿಸೊ 3

****