ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ
ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1
ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2
ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3
ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4
ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5
***