Wednesday, 1 September 2021

ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ 


ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1 

ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2 

ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3 

ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4 

ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5

***


No comments:

Post a Comment