ರಾಗ - : ತಾಳ -
ಶರಣು ಶರಣು ಸುರಾರಿ ಭಂಜನ
ಶರಣು ತ್ರಿಭುವನ ರಂಜನ
ಶರಣು ಸೇವಿತ ಸಕಲ ಮುನಿಜನ
ಶರಣು ರವಿಕುಲವರ್ಧನ ಶರಣು ll ಪ ll
ಹರಿಮುಕುಂದ ಮುರಾರಿ ಶ್ರೀಧರ ಆದಿಪುರುಷ ರಮಾವರ
ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕರ ll 1 ll
ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ
ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ll 2 ll
ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ದನ
ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ll 3 ll
ಬ್ರಹ್ಮರುದ್ರೇಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ
ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ll 4 ll
ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ
ಜನವರನೆ ಗುರುರಾಮವಿಟ್ಠಲ ಜಾನಕೀ ಪ್ರಾಣವಲ್ಲಭ ll 5 ll
***