Showing posts with label ಶ್ರೀಮಂತ್ರಾಲಯಾಧೀಶ ಗುರುರಾಜ ಸುರಭೋಜ jayesha vittala. Show all posts
Showing posts with label ಶ್ರೀಮಂತ್ರಾಲಯಾಧೀಶ ಗುರುರಾಜ ಸುರಭೋಜ jayesha vittala. Show all posts

Saturday, 1 May 2021

ಶ್ರೀಮಂತ್ರಾಲಯಾಧೀಶ ಗುರುರಾಜ ಸುರಭೋಜ ankita jayesha vittala

 ರಾಗ : ಮೋಹನ  ತಾಳ : ಆದಿ 


ಶ್ರೀ ಮಂತ್ರಾಲಯಾಧೀಶ -

ಗುರುರಾಜ ಸುರಭೋಜ ।

ಸಿರಿ ರಾಘವೇಂದ್ರ ನಮೋ ।। ಪಲ್ಲವಿ ।।


ಸಿರಿ ಮಧ್ವ ಮುನಿ ಪರಮ ।

ಕರುಣಾ ಜಲಧಿಯೊಳು ।

ಪರಿ ಪರಿ ಹರಿಯುವ ।

ಸುರಧೇನು ಸಲಹೆಮ್ಮ ।। ಅ ಪ ।।


ಸುರರಾಜನಂತೆ ಭೂಸುರರ -

ಪಾಲಿಪನಾದ ।

ಹರಿ ಪಾದಪದ್ಮ ಭೃಂಗ ।

ದೊರೆ ನಿನ್ನ ವೈಭವ ।

ಸಿರಿಯೆಂತೊ ನಾ ಕಾಣೆ ।

ಹರಿ ತಾನೆ ನಿಂದತುಳ ।

ವರಗಳ ಬೀರುವ ।। ಚರಣ ।।


ಸುವರ್ಣ ವೃಂದಾವನದಿ -

ಮೆರೆಯುವ ।

ಸಂದೇಹ ಹರನೆ ಧೀರ ।

ಅಂದಾದಿ ಕೇಸರಿ ।

ಗಂಧ ಅಕ್ಷತೆ ಧರಿಸಿ ।

ಚಂದಿರನಂತೆಸೆವ ।

ಮಂದಹಾಸನೆ ಪಾಹಿ ।। ಚರಣ ।।


ದೇಶ ದೇಶದಿ ಬರುವ ।  

ದಾಸ ಜನರ  ಆರ್ಥಿ ।

ಕೋಶ ಮೂರುತಿ -

ನೀನೆ ಹಂಸ । ಜ ।

ಯೇಶ ವಿಠಲ ದಾಸ ।

ಈ ಸಮಯದಿ ಕಾಯೋ ।

ಭೋ ಸೋತು ಮೊರೆಹೊಕ್ಕೆ ।। ಚರಣ ।।

****