Showing posts with label ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ gurumahipati. Show all posts
Showing posts with label ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ gurumahipati. Show all posts

Wednesday, 1 September 2021

ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ankita gurumahipati

 ಮಹಿಪತಿ ಸುತ ಕೃಷ್ಣ ದಾಸರಿಂದ ವಿರಚಿತವಾದ "ಗಣಪತಿ ಆರತಿ ಹಾಡು"


ಮಂಗಳಾರತಿಯ ತಂದೆತ್ತಿರೇ ಜಯ -

ಮಂಗಳ ಮೂರ್ತಿ ಶ್ರೀಗಣರಾಯಗೆ |ಪ


ಶರ್ವಾಣಿಸುತ ಚತುರ್ದಶ ವಿದ್ಯದಾಗರ |

ಸರ್ವಗುಣಾಂಬುಧಿ ಗಜಮುಖಗೆ |

ಊರ್ವಿಯೊಳಗೆ ತನ್ನ ಚರಣವ ನೆನೆವರ |

ನಿರ್ವಿಘ್ನದಲಿ ಕಾವ ದಯಾನಿಧಿಗೆ |1


ರನ್ನ ಮುಕುಟ ದಿವ್ಯ ಕುಂಡಲಧಾರಿಗೆ |

ಪನ್ನಗ ಭೂಷಣ ಚತುರ್ಭುಜಗೆ |

ಸನ್ನುತ ಪರಶಾಂಕುಶವನು ಪಿಡಿದಗೆ |

ಉನ್ನತ ಮೂಷಕ ವಾಹನಗೆ |2


ಸಮಚರಣಾಂಬುಜ ಸುರವರವಂದ್ಯಗೆ |

ಕಮಲಸಖನ ತೇಜ ಗೆದ್ದವಗೆ |

ವಿಮಲ ಮತಿಯನೀವ ಸಿದ್ಧಿ ಧೀರೇಶಗೆ |

ನಮೋಎಂಬೆ ಮಹಿಪತಿ ಸುತಪ್ರಿಯಗೆ |3 

***


ಕಾಖಂಡಕಿ ಶ್ರೀ ಕೃಷ್ಣದಾಸರು

ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ಅಮಂಗಜನಪಡದಾ ಮಂಗಳಾತ್ಮಗ ಪ 


ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ 1 

ಉತ್ತಮ ಪುರುಷ ಶ್ರೀ ಹರಿಗೆ ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ 2 

ಜಯ ಜಯ ಶಿಷ್ಟ ರಕ್ಷಕನೇ ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ ಮಹಿಪತಿ ಸುತಪ್ರೀಯಗೆ 3

***