ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು
ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು 1
ಕಷ್ಟಬಟ್ಟ ದಿವ್ಯ ಶ್ರೇಷ್ಠಮಾರ್ಗವು ಸಿಕ್ಕಿತಿನ್ನೇನಿನ್ನೇನು
ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು 2
ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು
ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು 3
****