Showing posts with label ಜಯ ಮಂಗಳ ನಿತ್ಯ ಶುಭಮಂಗಳ tulasiramadasa. Show all posts
Showing posts with label ಜಯ ಮಂಗಳ ನಿತ್ಯ ಶುಭಮಂಗಳ tulasiramadasa. Show all posts

Friday, 27 December 2019

ಜಯ ಮಂಗಳ ನಿತ್ಯ ಶುಭಮಂಗಳ tulasiramadasa

ರಚನೆ : ಚೆನ್ನಪಟ್ಟಣದ  ಅಹೋಬಲದಾಸರು

ಜಯ ಮಂಗಳ ನಿತ್ಯ ಶುಭಮಂಗಳ  ।।ಪ।।

ಶ್ರೀರಂಗನಾಥನಿಗೆ  ಮೂರಂಗವೇಷನಿಗೆ
ಮಾರಾರಿಸಖನೆಂಬ ಮದನಪಿತಗೆ

ನೂರೆಂಟುತಿರುಪತಿಗೆ  ಕಾರಣನು  ನಿಜದಿವ್ಯ
ವೀರವೈಷ್ಣವನೆಂಬೋ  ಮಹಾರಾಜಗೆ   ।।೧।।    ।।ಪ।।

ನೀಲಕಂಠಪ್ರಿಯಗೆ  ಮೇಲುಕೋಟೆಯ  ದೊರೆಗೆ
ಏಳುಸುತ್ತಿನ  ಕೋಟೆಯೊಳಗಿರುವಗೆ
ಕಾಳೆಕೊಂಬುಧ್ವನಿಯ  ಕೇಳುವಾನಂದನಿಗೆ
ವಾಲಿಯನು  ಕೊಂದಂತ  ಓಂಕಾರಗೆ   ।।೨।।   ।।ಪ।।

ಶಂಕರಪ್ರಿಯನಿಗೆ  ಶ್ರೀಪಂಕಜಾಕ್ಷನಿಗೆ
ಕುಂಕುಮಾಂಕಿತ  ಪಕ್ಷಿವಾಹನನಿಗೆ
ಕಂಕಣವು  ಕರದೊಳಗೆ  ಕಟ್ಟಿವೋ  ಶ್ರೀಗುರು
ತುಲಸಿರಾಮದಾಸ   ಪೋಷಿತನಿಗೆ  ।।೩।।    ।।ಪ।।
******