Showing posts with label ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ purandara vittala. Show all posts
Showing posts with label ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ purandara vittala. Show all posts

Wednesday, 4 December 2019

ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆ purandara vittala

ಪುರಂದರದಾಸರು
ಎಂಥ ಪುಣ್ಯವೆ ನಿನ್ನದೆಂಥ ಭಾಗ್ಯವೆಗೋಪಿ|
ಇಂಥ ಮಗನ ಕಾಣೆವೆ ಪ

ಚಿಂತಿಸಿದರೂ ದೊರಕ ಚೆಲುವ ರಾಜಗೋಪಾಲ |ಇಂತೀ ಮಾತುಗಳೆಲ್ಲವು - ಹುಸಿಯಲ್ಲವು ಅ.ಪ

ಸರಸಿಜನಾಭನ ಸುಮ್ಮನೆ ಕೊಂಡಾಡೆ |ದುರಿತವೆಲ್ಲವು ಪೋಪುದೆ ||ಸರಸದಿಂದಲಿ ಒಮ್ಮೆ ಸವಿಮಾತನಾಡಿದರೆ |ಪರಿತೋಷ ಕೈಗೂಡುವುದೆ-ಯಶೋದೆ 1

ಊರ ಒಳಗೆ ನಿಮ್ಮ ಅಂಜಿಕೆ ನೆರೆಹೊರೆ |ದೂರಿಕೊಂಬುವರಲ್ಲವೆ? ||ಅರಣ್ಯದಲಿ ನಾವು ಆಡಿದ ಆಟವು |ಆರಿಗಾದರೂ ಉಂಟೇನೆ-ಇಂದುವದನೇ? 2

ನಿನ್ನ ಮಗನ ಕರೆಯೆ ಎನ್ನ ಪ್ರಾಣದೊಡೆಯ |ಪುಣ್ಯದ ಫಲವು ಕಾಣೆ ||ಚೆನ್ನ ಶ್ರೀಪುರಂದರವಿಠಲರಾಯನ |ನಿನ್ನಾಣೆ ಬಿಡಲಾರೆವೆ-ಪುಸಿಯಲ್ಲವೆ 3
***

pallavi

enthA puNyave ninnadentha bhAgyave gOpi inthA magana kANene

anupallavi

cittasidaru doraka celuva rAjagOpAla vintemAtugaLallave hushiyallave

caraNam 1

sarasija nAbhana summane kandare duritavellavu pOvude
sarasadindaliyomme savimAtanADidare santOSa kaikuDuvade keLe yashOde

caraNam 2

UroLage ivana anjike nerehore dUrutiharu ellaru
AraNyadali nAvu AdidATada sukha yArigAdaru vuNTene induvadane

caraNam 3

ninna magana kareya enna prANa doreya suguNanu parabrahmane
cenna shrI purandara viTTalarAyana innu nA biDalArane induvadane
***