Showing posts with label ಶ್ರೀಸತ್ಯಧರ್ಮ ತೀರ್ಥರ ಪಾದಯುಗ್ಮದಲಿ prasannashreenivasa satyadharma teertha stutih. Show all posts
Showing posts with label ಶ್ರೀಸತ್ಯಧರ್ಮ ತೀರ್ಥರ ಪಾದಯುಗ್ಮದಲಿ prasannashreenivasa satyadharma teertha stutih. Show all posts

Friday, 27 December 2019

ಶ್ರೀಸತ್ಯಧರ್ಮ ತೀರ್ಥರ ಪಾದಯುಗ್ಮದಲಿ ankita prasannashreenivasa satyadharma teertha stutih

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ


ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿ

ನಾ ಶರಣು ಎನ್ನ ಪಾಲಿಪರು ಎಡಬಿಡದೆ

ಅಸಮ ಅನುಪಮ ಸರ್ವಗುಣ ಗುಣಾರ್ಣವ ಅನಘ

ಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪ


ಹಂಸನಾಮಕ ವಿಷ್ಣುವನರುಹಾಸನ ಸನಕ

ದೂರ್ವಾಸ ಮೊದಲಾದ ಗುರುವಂಶಜಾತ

ದಶಪ್ರಮತಿ ಸರಸಿಜನಾಭ ನರಹರಿ ತೀರ್ಥ

ಬಿಸಜ ಚರಣಂಗಳಲಿ ಸತತ ನಾ ಶರಣು 1


ಮಾಧವ ಅಕ್ಷೋಭ್ಯಜಯ ವಿದ್ಯಾಧಿರಾಜ

ರಾಜೇಂದ್ರ ಕವೀಂದ್ರ ವಾಗೀಶ ರಾಮಚಂದ್ರ

ವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವ

ಸುತಪೋನಿಧಿ ಯತಿವರ್ಯರಿಗೆ ನಮಿಪೆ 2


ವೇದಾಂತ ಕೋವಿದರು ರಘುನಾಥ ರಘುವರ್ಯ

ಪದವಾಕ್ಯ ತತ್ವಜ್ಞ ರಘೂತ್ತಮಾರ್ಯರಿಗೆ

ವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆ

ವೇದನಿಧಿಗಳಿಗೆ ಬಾಗುವೆ ಶಿರವ 3


ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆ

ಸತ್ಯಭಿನವಸತ್ಯಪೂರ್ಣರಿಗೆ ನಮಿಪೆ

ಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆ

ಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4


ಸತ್ಯವರತೀರ್ಥರಿಗೆ ಸತ್ಯವರ ಕರಜಾತ

ಸತ್ಯಧರ್ಮರಿಗೆ ನಾ ಮನಸಾ ಆನಮಿಪೆ

ಸತ್ಯಧರ್ಮರ ಮಹಿಮೆ ಬಹು ಬಹು ಬಹಳವು

ಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5


ಉದ್ದಾಮ ಪಂಡಿತರು ನವರತ್ನ ವಂಶಜರು

ವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರು

ವೈದಿಕ ಸದಾಚಾರಿ ತ್ರಿಕರಣದಿ ಶುದ್ದರು

ನಂದಿನಿಧರ ಮಧ್ವಮಾಧವ ಪ್ರಿಯರು 6


ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆ

ಸತ್ಯಧರ್ಮದಿರತರು ಸಂತತ ಇವರು

ಸದಾಗಮಿಕ ಭಾಗವತ ಮಾಧ್ವ ಸಚ್ಛಾಸ್ತ್ರದಿ

ಮುದದಿಂದ ಕಾಲ ಉಪಯೋಗ ಮಾಡುವರು 7


ಇಂಥಾ ಭಾಗವತರಲ್ಲಿ ಗಂಗಾಧರನೇವೇ

ಬಂದು ಔತಣ ಉಂಡು ಉಡುಗೊರೆಯಕೊಂಡು

ಸಂತತ ತಾ ಧ್ಯಾನಿಸುವ ರಾಮನ್ನ ಇವರು

ಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8


ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿ

ಉಣಲಿಕ್ಕೆ ಸಾಲದೆ ಇರುವಾಗ ಬಂದ

ಬ್ರಾಹ್ಮಣ ಓರ್ವನು ಭಸ್ಮಧರ ಅವನು

ಅನ್ನಬೇಕೆಂದನು ಮಧ್ಯಾಹ್ನಕಾಲ 9


ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತ

ಅಣ್ಣಾಚಾರ್ಯರು ಅಡಿಗೆ ತಾಮಾಡಿ

ಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರು

ಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10


ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನ

ಮಂದಿರದಿ ವಿಪ್ರ ಅಂತರ್ಧಾನನಾದ

ಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳು

ಚಂದದಿ ಇದ್ದವು ದಕ್ಷಿಣೆ ಸಮೇತ 11


ಸವಣೂರು ರಾಜ್ಯದ ಮಂತ್ರಿ ಖಂಡೇರಾಯ

ದಿವಿಜರ ಲೋಕಯಾತ್ರೆಯು ಮಾಡಲಾಗ

ದೇವರ ನೈವೇದ್ಯಯಕ್ಕಾದರಣೆ ತಪ್ಪಲು

ಸವಣೂರು ಪ್ರಾಂತವ ಬಿಟ್ಟು ತೆರಳಿದರು 12


ದೇವತಾಂಶರು ಇವರು ಮಾನುಷ ಜನ್ಮವ

ಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆ

ಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆ

ದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13


ಔದಾರ್ಯಗುಣನಿಧಿ ಶ್ರೀ ರಾಘವೇಂದ್ರ

ತೀರ್ಥರ ವೃಂದಾವನ ಸೇವೆ ಮಾಡಿ

ಕೃತಕೃತ್ಯರಾದರು ಅಣ್ಣಾಚಾರ್ಯರು

ಒದಗಿ ಅನುಗ್ರಹಿಸಿದರು ಗುರುಗಳು ಬೇಗ 14


ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳು

ತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆ

ದೊರೆಯುವುದು ಇಷ್ಟಾರ್ಥ ಎಂದು ಪೇಳಿದರು

ಹೊರಟರು ಆಚಾರ್ಯರು ಸತ್ಯವರರಲ್ಲಿ 15


ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂ

ಶ್ರೀ ಸ್ವಾಮಿ ಮಂಜೂಶ ಕಳವು ಆಗಿ

ವ್ಯಸನದಲಿ ಉಪೋಶಣದಿ ಸತ್ಯವರರಿದ್ದರು

ಭಾಸವಾಗದೆ ಮೂರ್ತಿಗಳಿರುವ ಸ್ಥಳವು 16


ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳ

ಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆ

ಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರು

ಹೇಗೆ ವರ್ಣಿಸುವೆ ಆ ಗುರುಗಳ ಆನಂದ 17


ನಿಗಮ ಘೋಷಂಗಳು ವಿಪ್ರಜನ ಮುಖದಿಂದ

ಮಂಗಳ ಧ್ವನಿ ಮೇಳ ತಾಳವಾದ್ಯಗಳು

ಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆ

ಗಂಗಾಜನಕನ ಮೂರ್ತಿಗಳ ತಂದರು 18


ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳು

ಸತ್ಯವರರ ಅಮೃತ ಹಸ್ತಾಭಿಷೇಕ

ಯತಿ ಆಶ್ರಮ ಸತ್ಯಧರ್ಮತೀರ್ಥ

ರೆಂದು ನಾಮಾ ಪ್ರಣವ ಉಪದೇಶಕೊಂಡರು 19


ಪ್ರಣವೋಪದೇಶ ಗುರು ಹಸ್ತದಿಂ ಅಭಿಷೇಕ

ಘನ ಮಹಾವೇದಾಂತ ಪೀಠವು ಲಭಿಸಿ

ಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯ

ಜ್ಞಾನೋಪದೇಶ ಹರಿಪೂಜಾ ಮಾಡಿದರು 20


ಭಾವುಕರ ಪ್ರಿಯತಮಸನತ್ಸುಜಾತೀಯವು

ಭಾವದೀಪಿಕ ಶ್ರೀಮದ್ ಭಾಗವತಕೆ

ತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯ

ಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21


ವಾಗ್ವಜ್ರ ಧಾರಾವು ದುರ್ವಾದಿ ಗಿರಿಕುಲಿಶ

ಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆ

ಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶ

ಜಗಕ್ಷೇಮಕರ ಪೂಜಾ ವರವು ದೀನರಿಗೆ 22


ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠ

ಸುವಿತರಣಿಯಿಂದ ಆಡಳಿತ ಮಾಡಿ

ಸುವರ್ಣ ರತ್ನಾಭರಣ ಮಠತೋಟಂಗಳ

ದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23


ಹದಿನೇಳನೂರು ಐವತ್ತೆರಡು ಶಾಲಿಶಕ

ತ್ರಯೋದಶಿ ಶ್ರಾವಣ ಕೃಷ್ಣಪಕ್ಷ

ಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯ

ಪಾದವನೈದಿದರು ಹರಿಯಧ್ಯಾನಿಸುತ 24


ಮತ್ತೊಂದು ಅಂಶದಲಿ ವೃಂದಾವನದಲ್ಲಿ

ಬಂದು ಸೇವಿಸುವವರ ವಾಂಛಿತವೀಯುತ್ತ

ನಂದಿನಿಧರ ಮಧ್ವ ಮಾಧವನ ಒಲಿಮೆಯಿಂ

ನಿಂತಿಹರು ಸ್ಮರಿಪರ ಗೋಕಲ್ಪತರುವು 25


ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆ

ಹೊನ್ನೂರು ಕ್ಷೇತ್ರದಲಿ ವೃಂದಾವನ

ಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳು

ಜಾಹ್ನವಿಧರ ಉಸುವು ಕಣರೂಪದೊಳಗೆ 26


ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲು

ಒಲಿವರು ಮಧ್ವಮುನಿ ಶಿವನು ನಮಗೊಲಿಯೆ

ಒಲಿವನು ಅಜಪಿತ `ಶ್ರೀ ಪ್ರಸನ್ನ ಶ್ರೀನಿವಾಸನು'

ಒಲಿವ ಬೋಧರು ಮಧ್ವಮುನಿ ಒಲಿದರೇವೇ27 

|| ಸಂಪೂರ್ಣಂ ||

***

ಪ್ರಸನ್ನ ಶ್ರೀನಿವಾಸದಾಸರು   ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ

ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿನಾ ಶರಣು ಎನ್ನ ಪಾಲಿಪರು ಎಡಬಿಡದೆಅಸಮ ಅನುಪಮ ಸರ್ವಗುಣ ಗುಣಾರ್ಣವಅನಘಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪ

ಹಂಸನಾಮಕ ವಿಷ್ಣುವನರುಹಾಸನಸನಕದೂರ್ವಾಸಮೊದಲಾದ ಗುರುವಂಶಜಾತದಶಪ್ರಮತಿಸರಸಿಜನಾಭನರಹರಿ ತೀರ್ಥಬಿಸಜಚರಣಂಗಳಲಿ ಸತತ ನಾ ಶರಣು1

ಮಾಧವಅಕ್ಷೋಭ್ಯಜಯ ವಿದ್ಯಾಧಿರಾಜರಾಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸುತಪೋನಿಧಿ ಯತಿವರ್ಯರಿಗೆ ನಮಿಪೆ 2

ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆವೇದನಿಧಿಗಳಿಗೆ ಬಾಗುವೆ ಶಿರವ 3

ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವಸತ್ಯಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4

ಸತ್ಯವರತೀರ್ಥರಿಗೆ ಸತ್ಯವರ ಕರಜಾತಸತ್ಯಧರ್ಮರಿಗೆ ನಾ ಮನಸಾ ಆನಮಿಪೆಸತ್ಯಧರ್ಮರ ಮಹಿಮೆ ಬಹು ಬಹು ಬಹಳವುಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5

ಉದ್ದಾಮ ಪಂಡಿತರು ನವರತ್ನ ವಂಶಜರುವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರುವೈದಿಕ ಸದಾಚಾರಿ ತ್ರಿಕರಣದಿ ಶುದ್ದರುನಂದಿನಿಧರ ಮಧ್ವಮಾಧವ ಪ್ರಿಯರು 6

ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆಸತ್ಯಧರ್ಮದಿರತರು ಸಂತತ ಇವರುಸದಾಗಮಿಕಭಾಗವತಮಾಧ್ವ ಸಚ್ಛಾಸ್ತ್ರದಿಮುದದಿಂದಕಾಲಉಪಯೋಗ ಮಾಡುವರು7

ಇಂಥಾ ಭಾಗವತರಲ್ಲಿ ಗಂಗಾಧರನೇವೇಬಂದು ಔತಣ ಉಂಡು ಉಡುಗೊರೆಯಕೊಂಡುಸಂತತ ತಾ ಧ್ಯಾನಿಸುವ ರಾಮನ್ನ ಇವರುಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8

ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿಉಣಲಿಕ್ಕೆ ಸಾಲದೆ ಇರುವಾಗ ಬಂದಬ್ರಾಹ್ಮಣ ಓರ್ವನು ಭಸ್ಮಧರ ಅವನುಅನ್ನಬೇಕೆಂದನು ಮಧ್ಯಾಹ್ನಕಾಲ 9

ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತಅಣ್ಣಾಚಾರ್ಯರು ಅಡಿಗೆ ತಾಮಾಡಿಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರುಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10

ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನಮಂದಿರದಿವಿಪ್ರಅಂತರ್ಧಾನನಾದಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳುಚಂದದಿ ಇದ್ದವು ದಕ್ಷಿಣೆ ಸಮೇತ 11

ಸವಣೂರು ರಾಜ್ಯದ ಮಂತ್ರಿ ಖಂಡೇರಾಯದಿವಿಜರ ಲೋಕಯಾತ್ರೆಯು ಮಾಡಲಾಗದೇವರ ನೈವೇದ್ಯಯಕ್ಕಾದರಣೆ ತಪ್ಪಲುಸವಣೂರು ಪ್ರಾಂತವ ಬಿಟ್ಟು ತೆರಳಿದರು 12

ದೇವತಾಂಶರು ಇವರು ಮಾನುಷ ಜನ್ಮವಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13

ಔದಾರ್ಯಗುಣನಿಧಿ ಶ್ರೀ ರಾಘವೇಂದ್ರತೀರ್ಥರ ವೃಂದಾವನ ಸೇವೆ ಮಾಡಿಕೃತಕೃತ್ಯರಾದರು ಅಣ್ಣಾಚಾರ್ಯರುಒದಗಿ ಅನುಗ್ರಹಿಸಿದರು ಗುರುಗಳು ಬೇಗ 14

ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳುತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆದೊರೆಯುವುದು ಇಷ್ಟಾರ್ಥ ಎಂದು ಪೇಳಿದರುಹೊರಟರು ಆಚಾರ್ಯರು ಸತ್ಯವರರಲ್ಲಿ 15

ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂಶ್ರೀ ಸ್ವಾಮಿ ಮಂಜೂಶ ಕಳವು ಆಗಿವ್ಯಸನದಲಿ ಉಪೋಶಣದಿ ಸತ್ಯವರರಿದ್ದರುಭಾಸವಾಗದೆ ಮೂರ್ತಿಗಳಿರುವ ಸ್ಥಳವು 16

ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರುಹೇಗೆ ವರ್ಣಿಸುವೆ ಆ ಗುರುಗಳ ಆನಂದ 17

ನಿಗಮಘೋಷಂಗಳು ವಿಪ್ರಜನ ಮುಖದಿಂದಮಂಗಳ ಧ್ವನಿ ಮೇಳ ತಾಳವಾದ್ಯಗಳುಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆಗಂಗಾಜನಕನ ಮೂರ್ತಿಗಳ ತಂದರು 18

ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳುಸತ್ಯವರರ ಅಮೃತ ಹಸ್ತಾಭಿಷೇಕಯತಿ ಆಶ್ರಮ ಸತ್ಯಧರ್ಮತೀರ್ಥರೆಂದು ನಾಮಾಪ್ರಣವಉಪದೇಶಕೊಂಡರು19

ಪ್ರಣವೋಪದೇಶಗುರುಹಸ್ತದಿಂ ಅಭಿಷೇಕಘನಮಹಾವೇದಾಂತ ಪೀಠವು ಲಭಿಸಿಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯಜ್ಞಾನೋಪದೇಶ ಹರಿಪೂಜಾ ಮಾಡಿದರು 20

ಭಾವುಕರ ಪ್ರಿಯತಮಸನತ್ಸುಜಾತೀಯವುಭಾವದೀಪಿಕ ಶ್ರೀಮದ್ ಭಾಗವತಕೆತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21

ವಾಗ್ವಜ್ರ ಧಾರಾವುದುರ್ವಾದಿಗಿರಿಕುಲಿಶಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶಜಗಕ್ಷೇಮಕರ ಪೂಜಾ ವರವು ದೀನರಿಗೆ 22

ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠಸುವಿತರಣಿಯಿಂದ ಆಡಳಿತ ಮಾಡಿಸುವರ್ಣ ರತ್ನಾಭರಣ ಮಠತೋಟಂಗಳದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23

ಹದಿನೇಳನೂರು ಐವತ್ತೆರಡು ಶಾಲಿಶಕತ್ರಯೋದಶಿಶ್ರಾವಣಕೃಷ್ಣಪಕ್ಷಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯಪಾದವನೈದಿದರು ಹರಿಯಧ್ಯಾನಿಸುತ 24

ಮತ್ತೊಂದು ಅಂಶದಲಿ ವೃಂದಾವನದಲ್ಲಿಬಂದು ಸೇವಿಸುವವರ ವಾಂಛಿತವೀಯುತ್ತನಂದಿನಿಧರ ಮಧ್ವ ಮಾಧವನ ಒಲಿಮೆಯಿಂನಿಂತಿಹರು ಸ್ಮರಿಪರ ಗೋಕಲ್ಪತರುವು 25

ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆಹೊನ್ನೂರು ಕ್ಷೇತ್ರದಲಿ ವೃಂದಾವನಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳುಜಾಹ್ನವಿಧರ ಉಸುವು ಕಣರೂಪದೊಳಗೆ 26

ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲುಒಲಿವರು ಮಧ್ವಮುನಿ ಶಿವನು ನಮಗೊಲಿಯೆಒಲಿವನುಅಜಪಿತ`ಶ್ರೀ ಪ್ರಸನ್ನ ಶ್ರೀನಿವಾಸನು'ಒಲಿವ ಬೋಧರು ಮಧ್ವಮುನಿ ಒಲಿದರೇವೇ 27 ಪ|| ಸಂಪೂರ್ಣಂ ||
*******