Showing posts with label ದಾಸರ ದೂಷಿಪರೊ ಕುಜನರು ಹರಿದಾಸರ ನಿಂದಿಪರೊ kamalanabha vittala. Show all posts
Showing posts with label ದಾಸರ ದೂಷಿಪರೊ ಕುಜನರು ಹರಿದಾಸರ ನಿಂದಿಪರೊ kamalanabha vittala. Show all posts

Thursday, 5 August 2021

ದಾಸರ ದೂಷಿಪರೊ ಕುಜನರು ಹರಿದಾಸರ ನಿಂದಿಪರೊ ankita kamalanabha vittala

 ..

kruti by Nidaguruki Jeevubai


ದಾಸರ ದೂಷಿಪರೊ ಕುಜನರು ಹರಿ-

ದಾಸರ ನಿಂದಿಪರೊ ಪ


ಏಸೇಸು ಜನುಮದ ದೋಷರಾಶಿಗಳೆಲ್ಲ

ನಾಶವಗೈÀವ ಶ್ರೀಕೇಶವನಣುಗರ ಅ.ಪ


ಮಂದಮತಿಗಳೆಲ್ಲರೂ ಸಜ್ಜನರ

ನಿಂದನೆಯೊಳಗಿಹರೊ

ಮುಂದಿನ ಬವಣೆಗಳೊಂದೆಣಿಸದಲೆ ಮು-

ಕುಂದನ ಭಕುತರ ಸಂದಣಿ ಸೇವಿಪ 1


ಇಂದಿರೇಶನ ಗುಣವ ಪಾಡುತಲಿ ಆ-

ನಂದದೊಳೋಲ್ಯಾಡುವ

ನಂದಕಂದನ ಲೀಲೆಯಿಂದ ಹಗಲಿರುಳು ಮು-

ಕುಂದನ ಕುಣಿಸುವರೊ ದಣಿಯುವರೊ 2


ಆರು ಮಂದಿಗಳ ಗೆದ್ದು ಹೃದಯದಲ್ಲಿ ಶ್ರೀ-

ಮಾಧವನನು ಕಾಂಬರ

ಶ್ರೀಧರನಂಘ್ರಿಗಳಾದರದಿಂ ಭಜಿಸಲು

ಸಾಧು ಗುರುಗಳು ಇವರು ಸುಂದರರು 3


ಸುರಮುನಿವರ ಪ್ರಿಯನ ಭಕ್ತರಿಗೆಲ್ಲ

ವರಗಳ ಕೊಡುತಿಹನ

ಪರಮಪಾವನ ಮೂರುತಿಯನೆ ಕೊಂಡಾಡುತ

ದುರಿತಗಳಳಿಯುವರ ಪಾವನರ 4

ಕರೆದು ಭಕ್ತರ ಸಲಹುವ ಕರುಣದೊಳು ಮೂ-

ರ್ಜಗದÉೂಡೆಯನ ಪಾಡುವ

ಪರಮ ಗುರುಗಳ ಮುಖ್ಯ ಕಾರಣವು ಪಡೆದವರು 

ಶ್ರೀ-ಕಮಲನಾಭ ವಿಠ್ಠಲನೆನ್ನುವರು5

***