|| ಶ್ರೀ ಕಾಮದೇವರ ಪ್ರಾರ್ಥನ ||
ಅಂಗಜ ಮನ್ಮಥ ಮಾರ ಮನೋಜ |
ಮಂಗಳ ಮಕರ ಧ್ವಜ ||
ತುಂಗ ವಿಕ್ರಮ ಅನಂಗ ಹರಿಯಸುತ |
ಅಂಗನೆ ರತಿಪ್ರಿಯ | ಗಾರ ನಿಲಯ ॥ ಅ ಪ ॥
॥1॥ ತಾರಕ ಅಸುರ ಸಂ | ಹಾರ ವಾಗಲು ಸುಕು |
ಮಾರ ಶಿವನಿಗೆ ಬೇಕಾಯ್ತು ||
ಧೀರ ಹರನ ತಪ ಕೆಡಿಸಿ ಪೂಶರದಿ |
ಮೂರನೆ ಕಣ್ಣಿಗೆ ಆಹುತಿ ಯಾದೆ ॥1॥
॥2॥ ದೇವತಾ ಕಾರ್ಯಕೆ | ಕಾಯವ ನೀಗಿ |
ದೇವಿ ರುಕ್ಮಿಣಿಗೆ ಮಗನಾದೆ ||
ಭಾವಜ ನೀ ಪ್ರದ್ಯುಮ್ನ ನಾಮದಿ |
ದೇವ ವೈರಿ ಶಂಬರನನು ತರಿದೆ ॥2॥
॥3॥ ದುಷ್ಟವಿಷಯಗಳ | ದೃಷ್ಟಿಗೆ ತಾರದ |
ಧಿಟ್ಟ ಮನವ ಕೊಡು | ಮನಸಿಜನೇ ||
ಇಷ್ಟದೈವನಾ | ಗೇಶ ಶಯನನನು |
ಮುಟ್ಟಿ ಭಜಿಪ ಸೌ| ಭಾಗ್ಯವ ನೀಡೋ ||
ಶ್ರೀ ಕಾಮ ದೇವರ ಪ್ರಾರ್ಥನ ಸಂಪೂರ್ಣಮ್ ||
ಶ್ರೀ ಕೃಷ್ಣಾರ್ಪಣ ಮಸ್ತು ||
******