Showing posts with label ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ rukmesha. Show all posts
Showing posts with label ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ rukmesha. Show all posts

Thursday, 5 August 2021

ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ankita rukmesha

 ..

kruti by rukmangadaru

ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ


ಹಿಂಡಾಕಳು ಹೊರ ಹೊರಡಿಸಿ ಕರೆವನು- | ಚ್ಚಂಡಾ ವೃಷಭಕಾದಸುರರು ಹಿಂಡುವ ಗಂಡಾ ಕರ್ಣದಿ | ಕುಂಡಲ ಮಂಡಿತ ಪುಂಡರೀಕಾಕ್ಷಾ 1

ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ 2

ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ 3

ಫಣಿಮಣಿ ಮೇಲಿಟ್ಟನು ಮಣಿ ರುಣಿ ಝಣಿ- | ರೆನಿಸುವಮಣಿ ಸಜ್ಜನ ಮಾಕೃಷ್ಣನ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ 4

ಮಂಗಲಮಹಿಮನು ಶೃಂಗಾರ ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ 5

***