Showing posts with label ಧ್ಯಾನವ ಕೊಡು ಹರಿಯೆ ನಿರಂತರ ಧ್ಯಾನವ ಕೊಡು ಹರಿಯೆ lakshmikanta. Show all posts
Showing posts with label ಧ್ಯಾನವ ಕೊಡು ಹರಿಯೆ ನಿರಂತರ ಧ್ಯಾನವ ಕೊಡು ಹರಿಯೆ lakshmikanta. Show all posts

Sunday, 1 August 2021

ಧ್ಯಾನವ ಕೊಡು ಹರಿಯೆ ನಿರಂತರ ಧ್ಯಾನವ ಕೊಡು ಹರಿಯೆ ankita lakshmikanta


kruti by ಲಕ್ಷ್ಮೀನಾರಯಣರಾಯರು Lakshminarayanaru 


ಧ್ಯಾನವ ಕೊಡು ಹರಿಯೆ | ನಿರಂತರ

ಧ್ಯಾನವ ಕೊಡು ಹರಿಯೆ ಪ


ನೀನೆ ಗತಿಯೆಂದಾನುಪೂರ್ವಕ

ಧ್ಯಾನ ಮಾಳ್ವರ ಜನ್ಮಕರ್ಮಗ

ಳೇನು ನೋಡದೆ ಪೊರೆವೆ ನಿನ್ನ

ಸುನಾಮವೆ ಸುರಧೇನುವೆಂದು ಅ.ಪ.


ನಿನ್ನ ನಾಮವ ನೆನೆದು | ಅಜಾಮಿಳನು

ಧನ್ಯನು ತಾನಾದನು ಈ ಭುವನದಿ

ತನ್ನ ದೇಹಾತುರದೊಳನ್ಯರ

ಬನ್ನ ಬಿಡಿಸುತಲಿದ್ದ ಖಳನು

ನಿನ್ನ ನಾಮಸ್ಮರಣೆ ಮಾತ್ರದಿ

ಘನ್ನ ಮುನಿಪತಿ ಎನ್ನಿಸಿದನು 1


ದುರುಳ ದುಶ್ಯಾಸನನು | ಸಭೆಯೊಳಗಂದು

ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ

ಮುರಹರನೆ ಹಾ ಕೃಷ್ಣ ದ್ವಾರಕಾ-

ಪುರನಿಲಯ ಪರಮಾತ್ಮ ಭಕ್ತರ

ಸುರತರುವೆ ಎಲ್ಲಿರುವೆ ಏತಕೆ

ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2


ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ

ಪರಿಪರಿ ಭಾಷೆಯಲಿ ಮುಂದೋರದೆ

ಹೊರಳುತ್ಹೊರಳುತ ಮರುಕಗೊಳುತ

ಹರಿಹರಿ ನಾರಾಯಣೆನ್ನಲು

ಸುರಲೋಕವನ್ನಿತ್ತು ಸಲಹಿದೆ

ವರದ ಲಕ್ಷ್ಮೀಕಾಂತ ಶಾಶ್ವತ 3

***