Showing posts with label ಹರಿಕಥಾಮೃತಸಾರ ಸಂಧಿ 08 ankita jagannatha vittala ಮಾತೃಕಾ ಸಂಧಿ HARIKATHAMRUTASARA SANDHI 8 MATRUKA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 08 ankita jagannatha vittala ಮಾತೃಕಾ ಸಂಧಿ HARIKATHAMRUTASARA SANDHI 8 MATRUKA SANDHI. Show all posts

Thursday, 19 November 2020

ಹರಿಕಥಾಮೃತಸಾರ ಸಂಧಿ 08 ankita jagannatha vittala ಮಾತೃಕಾ ಸಂಧಿ HARIKATHAMRUTASARA SANDHI 8 MATRUKA SANDHI

 

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


  ಮಾತೃಕಾ ಸಂಧಿ 8
ಪಾದಮಾನಿ ಜಯಂತನೊಳಗೆ ಸುಮೇಧನಾಮಕನಿಪ್ಪ " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ಮಾತೃಕಾ ಸಂಧಿ , ರಾಗ ಕಲ್ಯಾಣಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ
ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ
ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ
ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ||1||

ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು
ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ
ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ
ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು||2||

ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ
ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ
ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ
ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ||3||

ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು
ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ
ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ
ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ||4||

ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು
ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು
ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ
ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ||5||

ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ
ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ
ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ
ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು||6||

ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ
ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ
ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು
ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು||7||

ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ
ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ
ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು
ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು||8||

ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ
ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು
ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ
ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ||9||

ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ
ಆ ಜಮದಗ್ನಿ ನಾಮಗಳಿಂದ ಕರೆಸುತಲಿ
ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು
ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ||10||

ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ
ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ
ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ
ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ||11||

ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ
ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು
ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು
ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ||12||

ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ
ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು
ಹತ್ತೊಂಭತ್ತು ಮೊಗ ತೈಜಸನು
ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ||13||

ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ
ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ
ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ
ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ||14||

ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು
ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ
ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು
ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ||15||

ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ
ತಾಮರಸ ಭವ ವಾಸುದೇವರು ಮಸ್ತಕದೊಳಿಹರು
ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ
ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ||16||

ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ
ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ
ಸತತ ಸುಲೀಲೆಗೈಯುತಲಿ ಇಪ್ಪ
ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು||17||

ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ
ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು
ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು
ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು||18||

ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ
ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ
ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ
ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು||19||
ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ
ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ
ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ
ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು||20||

ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ
ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ
ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ
ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ||21||

ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ
ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು
ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ
ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ||22||

ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು
ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ
ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ
ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ||23||

ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ
ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ
ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು
ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ||24||

ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ
ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ
ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ
ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು||25||

ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ
ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ
ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು
ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ||26||

ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು
ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು
ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ

ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು||27||

ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ
ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ
ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ
ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು||28||

ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು
ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ
ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ
ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು||29||

ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ
ತದಭಿಮಾನಿಗಳು ಎಂದೆನಿಸಿಕೊಂಬ
ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು
ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ||30||

ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ
ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು
ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ
ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು||31||

ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ
ಪೂಜಿಸುತ ನೋಡುತ ಸುಖಿಸುತಿರು ಬಿಡದೆ
ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ
ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು||32||
*******

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

pAdamAni jayantana oLage sumEdha nAyakanu ippa
dakShiNa pAdada anguTadalli pavananu BAraBRudrUpa
kAdukonDiha Tankitara modalAda nAmadi
sandhigaLali Iraidu rUpadali ippa santata naDedu naDesutali||1||

kapila cArvAnga Adi rUpadi vapugaLoLu hastagaLa sandhiyoLu
aparimita karmagaLa mADutalippa dinadinadi
kRupaNa vatsala pArSvadoLu para suPaliyenisuva
gudupasthadi vipuLa baliBaga manavenisi tundiyoLage irutihanu||2||

aidu mEloMdadhikadaLavuLLa aidu padmavu nABi mUladi
aidu mUrtigaLihavu aniruddhAdi nAmadali
aidisuta garBavanu jIvara anAdi karma prakRuti guNagaLa
hAdi tappalugoDade vyApAragaLa mADutiha||3||

nABiyali ShaTkOna manDalada I BaviShyad brahmanoLu
muktABa SrI pradyumnanu ippanu vibudha gaNasEvya
SOBisuva kaustuBave modalAda ABaraNa AyudhagaLinda
mahA Bayankara pApa puruShana SOShisuva nitya||4||

dvAdaSa arkara manDalavu madhya udaradoLu suShumnadoLagihadu
aidu rUpAtmakanu aravattadhika munnUru
I divArAtrigaLa mAnigaLu Ada divijara santayisuta
niShAda rUpaka daityaranu saMharipa nityadali||5||

hRudayadoLagihadu aShTadaLa kamala adaroLage
prAdESa nAmakanudita BAskaranante tOrpanu biMbanendenisi
padumacakra suSanKa sugadAngada kaTaka mukuTa anguLIyaka
padaka kaustuBa hAra graivEya Adi BUShitanu||6||

dvidaLa padmavu SOBipudu kanThadali muKyaprANa
tannaya sudatiyinda oDagUDi haMsa upAsaneya mALpa
udakavu annAdigaLige avakASadanu tAnAgiddu
udAna aBidhanu Sabdhava nuDidu nuDisuva sarvajIvaroLu||7||

nAsikadi nAsatya dasraru SvAsamAnI prANa BArati
haMsa dhanvantrigaLu allalli ipparu avaroLage
BESa BAskararu akShi yugaLake adhISareniparu
avaroLage lakShmISadadhi vAmanaru nIyAmisutali irutiharu||8||

staMBa rUpadali ippa dakShiNa aMbakadi pradyumna
guNa rUpa aMBraNiyu tAnAgi ippaLu
vatsarUpadali poMbasira padayOgya pavana
triyaMbakAdi samasta divija kadaMba sEvitanAgi sarva padArthagaLa tOrpa||9||

nEtragaLali vasiShTha viSvAmitra BAradvAja gautama atri
A jamadagni nAmagaLiMda karesutali
patratApaka Sakra sUrya dharitri parjanyAdi suraru
jagatraya ISana Bajiparu anudina parama Bakutiyali||10||

jyOtiyoLage ippanu kapila puruhUta muKa dikpatigaLiMda samEtanAgi
dakShiNa akShiya muKadoLiha viSva
SvEtavarNa caturBujanu saMprItiyiMdali
sthUla viShayava cEtanarige uMDu uNipa jAgrateyittu nRugajAsya||11||

nelesiharu dikdEvategaLu ikkarada karNangaLali
tIrthaMgaLige mAnigaLAda suranadi muKya nirjanaru
balada kiviyali irutiharu bAMboLeya janaka trivikramanu
nirmalinaranu mADuvanu Ipari cintisuva janara||12||

cittaja indraru manadoLu ipparu kRuttivAsanu ahankAradi
citta cEtanamAnigaLu vihaga indra PaNiparoLu nityadali nelegonDu
hattoMBattu moga taijasanu
svapnAvastheyaidisi jIvaranu praviBakta Bukuvenipa||13||

j~jAnamaya taijasanu hRudaya sthAnava aidisi
prAj~janeMba aBidhAnadiM karesutta citsuKa vyaktiyane koDuta
AnateShTa pradanu anusandhAnavIyade suptiyaidisi
tAne punarapi svapna jAgrateyIva cEtanake||14||

nAligeyoLiha varuNa matsya aNunAligeyoLu upEndra indraru
tAlu parjanyAKya sUryanu ardhagarBaniha
aleyoLu vAmana suBAmana PAladoLu Siva kESavanu
sukapOladoLage ratISa kAmanu alli pradyumna||15||

rOmagaLali vasanta trikakuddhAma muKadoLage agni BArgava
tAmarasa Bava vAsudEvaru mastakadoLiharu
I manadoLiha viShNu SiKadoLu umAmahESvara nArasiMhasvAmi
tanna anudinadi nenevara mRutyu pariharipa||16||

mauLiyalliha vAsudEvanu ELu adhika nava jAti rUpava tALi
muKadoLu SravaNa nayanAdi avayavagaLige ALarasu tAnAgi
satata sulIlegaiyutali ippa
suKamaya kELi kELisi nODi nODisi nuDidu nuDisuvanu||17||

eraDadhikavu eppattu enipa sAvirada nADige
muKyavu Eka uttara SatagaLu alli ihavu nUrA ondu mUrtigaLu
aridu dEhadi kalaSa nAmaka harige kaLegaLu ivu endu
nairantaradi pUjisutiharu paramAdaradi BUsuraru||18||

idake kAraNavenisuvavu eraDadhika daSa nADigaLa oLage
surA nadiye modalAda amala tIrthagaLu ihavu karaNadali
padumanABanu kESavAdi dvidaSa rUpadali ippanalli
ati mRuduLavAda suShumnadoLage EkAtmanenisuvanu||19||

Amnaya pratipAdya SrI pradyumna dEvAnu dEhadoLage
suShumnadi IDA pingaLadi viSvAdi rUpadali
nirmalAtmanu vANi vAyu caturmuKaroLiddu aKiLa jIvara
karma guNava anusarisi naDevanu viSva vyApakanu||20||

abda ayana Rutu mAsa pakSha suSabdhadindali karesutali
nIlAbdha varNa aniruddhane modalAda aidu rUpadali
habbihanu sarvatradali karuNAbdhi nAlvattaidu rUpadi
laByanAguvanI pari dhEnisuva Bakutarige||21||

aidu rUpAtmakanu ippattaidu rUpadalippa
matte hadinaidu tithi ippattanAlkarinda peccisalu
aiduvadu aravattadhika Araidu divasa AhvayanoLage
mana tOydavage tApatrayada mahadOShavellihudO||22||

divasa yAma mahUrta GaTikAdi avayavagaLoLagiddu
gangA pravAhadandadi kAlanAmaka pravahisutalippa
ivana guNa rUpa kriyangaLa nivahadoLu muLugi ADutali
BArgavi sadAnandAtmaLu AgihaLu ella kAladali||23||

vEdatatigaLa mAni lakShmI dharAdharana guNa rUpa kriyegaLa
Adi madhya antavanu kANade manadiyOcisuta
Adapane Itanige patni? kRupOdadhiyu svIkarisudanu
lOkAdhipanu BikShukana maneya autaNava koMbante||24||

kOvidaru cittaisuvadu SrIdEviyoLagiha niKila guNa
tRuNa jIvarali kalpisi yukutiyali mattu kramadiMda
dEva dEvakiyippaLu endaridu A virincana janani
Itana AvakAlaku ariyaLu antava narara pADEnu||25||

kShIra dadhi navanIta GRutadoLu sauraBa rasAhvayanenisi SAntIramaNa
j~jAna iccA kriyA SaktiyendeMba IrereDu nAmadali karesuta
BAratI vAgdEvi vAyu sarOruha Asanaru
alli nelesiharu ella kAladali||26||

vasugaLenTu nava praja ISaru Svasana guNa aivattu
EkAdaSa divAkararu anite rudraru aSvinigaLeraDu
daSa vihIna SatAKya I sumanasaroLage
caturAtma nIyAmisuva brahma samIra Kaga PaNIMdrara oLagiddu||27||

tOrutippanu cakradali hinkAra nAmaka SanKadali pratihAra
gadeyali nidhana padmadali ippa prasthAna
kAruNikanu udgIthanAmadi mAramaNana ai rUpagaLa
SanKAri modalAda AyudhagaLoLu smarisi dharisutiru||28||

tanuve ratha vAk aBimAniye guNavenisuvaLu
SrOtradoLu rOhiNi SaSAMkaru pASa pANigaLu aSvavendenisi
inanu saMj~jA dEviyaru ihara anala lOcana
sUtanenisuva praNava pAdya prANa nAmaka rathikanenisuvanu||29||

amita mahimana apAra guNagaLa samita varNAtmaka Sruti smRuti gamisalApave
tadaBimAnigaLu endenisikoMba
kamalA saMBava Bava sura indrAdi amararu anudina tiLiyalu ariyaru
svamahimegaLa Adi anta madhyagaLu ariva sarvaj~ja||30||

vitta dEhAgAra dArA patya mitrAdigaLoLage
hari pratyagAtmanu endenisi nelesippanendaridu
nityadali saMtRupti baDisuta uttama adhama madhyamara
kRuta kRutyanAgu unmattanu Agade BRutya nAnendu||31||

dEva dEvESana sumUrti kaLEvaragaLoLage anavarata saMBAvisuta
pUjisuta nODuta suKisutiru biDade
SrIvara jagannAtha viThala tA olidu kAruNyadali
Bava nOva pariharisuvanu pravitata patita pAvananu||32||
*************