Thursday, 19 November 2020

ಹರಿಕಥಾಮೃತಸಾರ ಸಂಧಿ 08 ankita jagannatha vittala ಮಾತೃಕಾ ಸಂಧಿ HARIKATHAMRUTASARA SANDHI 8 MATRUKA SANDHI

ರಾಗ ಕಲ್ಯಾಣಿ
Audio by Mrs. Nandini Sripad

RESTART MOBILE IF AUDIO IS NOT PLAYING  CLICK-> HOME

or just scroll down for other devaranama 

ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ, 
 ಮಾತೃಕಾ ಸಂಧಿ (ಸಂಧಿ 8) 

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ
ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ
ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ
ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ||1||

ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು
ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ
ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ
ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು||2||

ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ
ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ
ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ
ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ||3||

ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು
ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ
ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ
ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ||4||

ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು
ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು
ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ
ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ||5||

ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ
ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ
ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ
ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು||6||

ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ
ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ
ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು
ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು||7||

ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ
ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ
ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು
ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು||8||

ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ
ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು
ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ
ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ||9||

ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ
ಆ ಜಮದಗ್ನಿ ನಾಮಗಳಿಂದ ಕರೆಸುತಲಿ
ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು
ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ||10||

ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ
ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ
ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ
ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ||11||

ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ
ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು
ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು
ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ||12||

ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ
ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು
ಹತ್ತೊಂಭತ್ತು ಮೊಗ ತೈಜಸನು
ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ||13||

ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ
ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ
ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ
ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ||14||

ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು
ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ
ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು
ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ||15||

ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ
ತಾಮರಸ ಭವ ವಾಸುದೇವರು ಮಸ್ತಕದೊಳಿಹರು
ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ
ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ||16||

ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ
ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ
ಸತತ ಸುಲೀಲೆಗೈಯುತಲಿ ಇಪ್ಪ
ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು||17||

ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ
ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು
ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು
ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು||18||

ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ
ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ
ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ
ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು||19||
ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ
ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ
ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ
ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು||20||

ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ
ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ
ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ
ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ||21||

ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ
ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು
ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ
ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ||22||

ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು
ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ
ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ
ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ||23||

ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ
ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ
ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು
ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ||24||

ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ
ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ
ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ
ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು||25||

ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ
ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ
ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು
ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ||26||

ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು
ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು
ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ

ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು||27||

ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ
ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ
ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ
ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು||28||

ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು
ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ
ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ
ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು||29||

ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ
ತದಭಿಮಾನಿಗಳು ಎಂದೆನಿಸಿಕೊಂಬ
ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು
ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ||30||

ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ
ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು
ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ
ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು||31||

ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ
ಪೂಜಿಸುತ ನೋಡುತ ಸುಖಿಸುತಿರು ಬಿಡದೆ
ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ
ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು||32||
***

Verse 1
pādamāni jayantana oḷage sumēdha nāyakanu ippa |
dakṣiṇa pādada aṅguṭadalli pavananu bhārabhŕdrūpa |
kādukoṇḍiha ṭaṅkitara modalāda nāmadi |
saṁdhigaḷali īraidu rūpadali ippa saṁtata naḍedu naḍesutali ||1||

Verse 2
kapila cārvāṅga ādi rūpadi vapugaḷoḷu hastagaḷa saṁdhiyoḷu |
aparimita karmagaḷa māḍutalippa dinadinadi |
kr̥paṇa vatsala pārśvadoḷu para suphaliyenisuva |
gudupasthadi vipuḷa balibhaga manavenisi tuṁdiyoḷage irutihanu ||2||

Verse 3
aidu mēloṁdadikadaḷavuḷḷa aidu padmavu nābhi mūladi |
aidu mūrtigaḷihavu aniruddhādi nāmadi |
aidisuta garbhavanu jīvara anādi karma prakr̥ti guṇagaḷa |
hādi tappalugoḍade vyāpāragaḷa māḍutiha ||3||

Verse 4
nābhiyali ṣaṭkōna maṁdalada ī bhaviṣyad brahmaṇoḷu |
muktābha śrī pradyumnanu ippanu vibudha gaṇasēvya |
śōbhisuva kaustubhave modalāda ābharaṇa āyudhagaḷinda |
mahā bhayaṁkara pāpa puruṣana śōṣisuva nitya ||4||

Verse 5
dvādaśa arkara maṁḍalavu madhya udaradoḷu suṣumnadoḷagihadu |
aidu rūpātmaganu aravattadika munnūru |
ī divārātrigaḷa mānigaḷu āda divijara saṁtayisuta |
niṣāda rūpaka daityaranu saṁharipa nityadali ||5||

Verse 6
hr̥dayadoḷagihadu aṣṭadaḷa kamala adaroḷage |
prādēśa nāmakanudita bhāskaranante tōrpanu biṁbanendenisi |
padumacakra suśaṅkha sugadāṅgada kaṭaka mukuṭa aṅguḷīyaka |
padaka kaustubha hāra graivēya ādi bhūṣitanu ||6||

Verse 7
dvidala padmavu śōbhipudu kaṁṭhadali mukhyaprāṇa |
tannaya sudatiyinda oḍagūḍi haṁsa upāsanē māḷpa |
udakavu annādigaḷige avakāśadanu tānāgiddū |
udāna abhidhanu śabdhava nuḍidu nuḍisuva sarvajīvaroḷu ||7||

Verse 8
nāsikadi nāsatya dasraru śvāsama-nī prāṇa bhāratī |
haṁsa dhanvaṁtrigaḷu allalli ipparu avaroḷage |
bhēśa bhāskararu akṣi yugaḷake adhīśareniparu |
avaroḷage lakṣmīśadadhi vāmanaru nīyāmisutali irutiharu ||8||

Verse 9
staṁbha rūpadali ippa dakṣiṇa aṁbakadi pradyumna |
guṇa rūpa aṁbhraṇiyu tānāgi ippaḷu |
vatsarūpadali poṁbasira padayōgya pavana |
triyaṁbakādi samasta divija kadāṁba sēvitanāgi sarva padārthagala tōrpa ||9||

Verse 10
nētragagaḷali vasiṣṭha viśvāmitra bhāradvāja gautama atri |
ā jamadagni nāmagalinda karesutali |
patratāpaka śakra sūrya dharitri parjanyādi suraru |
jagatraya īśana bhajiparu anudina parama bhakutiyali ||10||

Verse 11
jyōtiyoḷage ippanu kapila puruhūta mukha dikpatigaḷinda samētanāgi |
dakṣiṇa akṣiya mukhadoḷiha viśva |
śvētavarṇa caturbhujanu saṁprītiyindali |
sthūla viṣayava cētanarige uṁḍu uṇipa jāgrateyittu nr̥gajāsyana ||11||

Verse 12
nelesiharu dikdēvatēgaḷu ikkarada karṇaṅgaḷali |
tīrthaṁgaḷige mānigaḷāda suranadi mukhya nirjanaru |
balada kivaliyali irutiharu bāṁboḷeya janaka trivikramanu |
nirmalinaranu māḍuvanu īpari cintisuva janara ||12||

Verse 13
cittaja indraru manadoḷu ipparu kr̥ttivāsanau ahaṅkārādi |
citta cētanamanigaḷu vihaga indra phaṇipar oḷu nityadali nelegonḍu |
haṭṭoṁbattu moga taijasanu |
svapnāvastheyaidisi jīvaranu pravibhakta bhukuvēnipa ||13||

Verse 14
jñānamaya taijasanu hr̥daya sthānava aidisi |
prājñanemba abhidhānadiṁ karesutta citsukha vyaktiyane koḍuta |
ānateṣṭa pradanu anusaṁdhānavīyade suptiyaidisi |
tāne punarapi svapna jāgrateyīva cētanake ||14||

Verse 15
nāligeyoḷiha varuṇa matsya aṇunāligeyoḷu upēndra indraru |
tālu parjanyākhya sūryanu ardhagarbhaniha |
aleyoḷu vāmana subhāmana phāladoḷu śiva kēśavanu |
sukapōladoḷage ratīśa kāmanu alli pradyumna ||15||

Verse 16
rōmagaḷali vasanta trikakuddhāma mukhadoḷage agni bhārgava |
tāmarasa bhava vāsudēvaru mastakadoḷiharu |
ī manadoḷiha viṣṇu śikhadoḷu umāmahēśvara nārasiṁhasvāmi |
tanna anudinadi nenevara mr̥tyu pariharipa ||16||

Verse 17
mauḷyalliha vāsudēvanu ēḷu adika nava jāti rūpava tāḷi |
mukhadoḷu śravaṇa nayanādi avayavagaḷige āḷarasu tānāgi |
satata sulīlegaivutali ippa |
sukhamaya kēḷi kēḷisi nōḍi nōḍisi nuḍidu nuḍisuvanu ||17||

Verse 18
eraḍadikavu eppattu enipa sāvirada nāḍige |
mukhyavu ēka uttarashata gaḷalli ihavu nūrā oṁdu mūrtigaḷu |
aridu dēhadi kalaśa nāmaka harige kaḷegaḷu ivu endu |
nairantaradi pūjisutiharu paramādaradi bhūsuraru ||18||

Verse 19
idake kāraṇavenisuvavu eraḍadika daśa nāḍigaḷa oḷage |
surā nadiye modalāda amala tīrthagalu ihavu karaṇadi |
padumanābhanu kēśavādi dvidaśa rūpadali ippanalli |
ati mr̥duḷavāda suṣumnadoḷage ēkātmanenisuvanu ||19||

Verse 20
āmnaya pratipādya śrī pradyumna dēvānu dēhadoḷage |
suṣumnadi īḍā piṅgaḷadi viśvādi rūpadali |
nirmalātmanu vāṇī vāyu caturmukharoḷiddū akhila jīvara |
karma guṇava anusarisi naḍevanau viśva vyāpakanu ||20||

Verse 21
abda ayana r̥tu māsa pakṣa suśabdadindali karesutali |
nīlābda varṇa aniruddhane modalāda aidu rūpadali |
habbihanu sarvatradali karuṇābdhi nālvattaidu rūpadi |
labhyanāguvanī pari dhēnisuva bhakutarige ||21||

Verse 22
aidu rūpātmaganu ippattaidu rūpadalippa |
matte hadinaidu tithi ippattanālkarinda peccisalu |
aiduvadu aravattadika āraidu divasa āhvayan oḷage |
mana tōydavage tāpatrayada mahadōṣavellihudō ||22||

Verse 23
divasa yāma mahūrta ghaṭikādi avayavagaḷoḷagiddū |
gaṅgā pravāhadaṁdadi kālanāmaka pravahisutalippa |
ivana guṇa rūpa kriyoṅgaḷa nivahadoḷu muḷugi āḍutali |
bhārgavi sadānandātmaḷu āgihaḷu ellā kāladali ||23||

Verse 24
vēdatatigaḷa māni lakṣmī dharādharana guṇa rūpa kriye gaḷa |
ādi madhya antavanu kāṇade manadiyōcisuta |
ādapane ītanaige patni? kr̥pōdadhiyu svīkarisudanu |
lōkādhipanu bhikṣukana maneya autanavana koṁbaṁte ||24||

Verse 25
kōvidaru cittaisuvaddu śrīdēviyoḷahihau nikhila guṇa |
tr̥ṇa jīvarali kalpisi yukutiyali mattu kramadinda |
dēva dēvakiyippaḷu endaridu ā viriñcana janani |
ītana āvakālaku ariyau antava narara pāḍēnu ||25||

Verse 26
kṣīra dadhi navanīta ghr̥tadoḷu saurabha rasāhvayanenisi śāntīramaṇa |
jñāna iccha kriyā śakṭyendemba īrereḍu nāmadali karesuta |
bhāratī vāgdēvi vāyu sarōruha āsana |
alli nelegiharu ellā kāladali ||26||

Verse 27
vasugaḷeṁṭu nava praja īśaru śvasana guṇa aivattu |
ēkādaśa divākararu anite rudraru aśvinigaḷeraḍu |
daśa vihīna śatākhya ī sumanasaroḷage |
caturātma nīyāmisuva brahma samīra khaga phaṇīndrara oḷagiddū ||27||

Verse 28
tōrutippanu cakradali hiṁkāra nāmaka śaṅkadali pratihāra |
gadeyali nidhana padmadoḷi ippa prasthāna |
kāruṇikanu udgīthānamadi māramaṇana ai rūpagaḷa |
śaṅkāri modalāda āyudha gaḷoḷu smarisi dharisutiru ||28||

Verse 29
tanuve ratha vāk abhimāniye guṇavenisuvaḷu |
śrōtradoḷu rōhiṇi śaśāṅkaru pāśa pāṇigaḷu aśvavendeniisi |
inanu saṁjñā dēviyaru iharu anala lōcana |
sūtenenisuva praṇava pādya prāṇa nāmaka rathikanenisuvanu ||29||

Verse 30
amita mahimana apāra guṇagaḷa samita varṇātmaka śruti smr̥ti gamisalāpave |
tadabhimānigaḷu endenisikoṁba |
kamalā saṁbhava bhava sura indrādi amararu anudina tiḷiyalu ariyaru |
svamahimegaḷa ādi anta madhyagaḷu ariva sarvajña ||30||

Verse 31
vitta dēhāgāra dārā patya mitrādigaloḷage |
hari pratyagātmanu endenisi nelegippanendaridu |
nityadali saṁtr̥pti baḍisuta uttama adhama madhyamara |
kr̥ta kr̥tyanāgu unmattanu āgade bhr̥tya nānendu ||31||

Verse 32
dēva dēvēśana sumūrti kaḷēvaragaḷoḷage anavarata saṁbhāvisuta |
pūjisuta nōḍuta sukisutiru biḍade |
śrīvara jagannātha viṭhala tā olidu kāruṇyadali |
bhava nōva pariharisuvanu pravitata patita pāvananu ||32||
***

Pronunciation Guide
Use a long duration for vowels marked with a dash (ā, ī, ū) and a short, crisp duration for others.

Pronounce the retroflex consonants (ṭ, ḍ, ṇ) by curling the tongue tip back to touch the hard palate.

Treat 'ś' and 'ṣ' as soft 'sh' sounds; ensure the 'h' in 'kh', 'gh', and 'th' is distinctly audible.

The 'ñ' sound is like the 'ny' in "canyon," and 'ṅ' is the nasal 'ng' found in the word "sing."

Maintain a steady, devotional rhythm, pausing slightly at the "|" to allow each poetic line to settle.
***

ಹರಿಕಥಾಮೃತಸಾರದ 'ಅಂಗುಷ್ಠ ಸಂಧಿ' (ಸಂಧಿ ೮), ಇದನ್ನು 'ಪಾದಾದಿ ಕೇಶವರ್ಣನ ಸಂಧಿ' ಎಂದೂ ಕರೆಯುತ್ತಾರೆ. ಭಗವಂತನು ನಮ್ಮ ದೇಹದ ಪ್ರತಿಯೊಂದು ಅಂಗದಲ್ಲಿಯೂ ಒಂದೊಂದು ರೂಪದಿಂದ ಹೇಗೆ ನೆಲೆಸಿದ್ದಾನೆ ಎಂಬುದನ್ನು ಈ ಸಂಧಿಯಲ್ಲಿ ಜಗನ್ನಾಥದಾಸರು ವಿವರಿಸಿದ್ದಾರೆ. ಹರಿಕಥಾಮೃತಸಾರದ ಅಂಗುಷ್ಠ ಸಂಧಿ (ಸಂಧಿ ೮) ಯ ಸಾರಾಂಶ ಇಲ್ಲಿದೆ:

ಸಾರಾಂಶ:
ಈ ಸಂಧಿಯನ್ನು 'ಪಾದಾದಿ ಕೇಶವರ್ಣನ ಸಂಧಿ' ಎಂದೂ ಕರೆಯುತ್ತಾರೆ. ಜಗನ್ನಾಥದಾಸರು ಈ ಸಂಧಿಯಲ್ಲಿ ಭಗವಂತನು ನಮ್ಮ ದೇಹದ ಪ್ರತಿ ಅಂಗಾಂಗದಲ್ಲಿಯೂ ಹೇಗೆ ನೆಲೆಸಿದ್ದಾನೆ ಎಂಬುದನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ.

ಅಂಗಾಂಗಗಳಲ್ಲಿ ಭಗವಂತನ ವಾಸ್ತವ್ಯ: ಪಾದದ ಹೆಬ್ಬೆರಳಿನಿಂದ ಹಿಡಿದು ತಲೆಯ ತುದಿ (ಶಿಖೆ)ಯವರೆಗೆ ಭಗವಂತನು ವಿವಿಧ ರೂಪಗಳಲ್ಲಿ (ಉದಾಹರಣೆಗೆ: ಜಯಂತ, ಕಪಿಲ, ಅನಿರುದ್ಧ, ಪ್ರದ್ಯುಮ್ನ, ವಾಸುದೇವ, ನರಸಿಂಹ) ವ್ಯಾಪಿಸಿದ್ದಾನೆ. ನಮ್ಮ ಶರೀರದ ಪ್ರತಿಯೊಂದು ನಾಡಿ, ನರ, ಇಂದ್ರಿಯ ಮತ್ತು ಅವಯವಗಳನ್ನು ಆಯಾ ರೂಪದ ಭಗವಂತನೇ ನಿಯಂತ್ರಿಸುತ್ತಿದ್ದಾನೆ.

ಕರ್ಮಗಳ ನಿಯಂತ್ರಣ: ನಮ್ಮ ಪ್ರತಿಯೊಂದು ಕ್ರಿಯೆ, ಉಸಿರಾಟ, ಮಾತು, ದೃಷ್ಟಿ ಮತ್ತು ಜಾಗ್ರತೆ-ಸ್ವಪ್ನ-ಸುಷುಪ್ತಿ ಅವಸ್ಥೆಗಳಿಗೂ ಭಗವಂತನೇ ಪ್ರೇರಕ. ಜೀವಿಗಳ ಅನಾದಿ ಕರ್ಮ ಮತ್ತು ಪ್ರಕೃತಿ ಗುಣಗಳಿಗನುಸಾರವಾಗಿ ನಮ್ಮ ಎಲ್ಲ ವ್ಯಾಪಾರಗಳನ್ನು ಅವನೊಬ್ಬನೇ ನಡೆಸುತ್ತಿದ್ದಾನೆ.

ದೇವತೆಗಳ ಪಾತ್ರ: ದೇಹದ ವಿವಿಧ ಭಾಗಗಳಲ್ಲಿ ಅಧಿಷ್ಠಾನ ದೇವತೆಗಳು (ಇಂದ್ರ, ವಾಯು, ಬ್ರಹ್ಮ, ಸಪ್ತರ್ಷಿಗಳು, ದಿಕ್ಷಾಲಕರು ಇತ್ಯಾದಿ) ನೆಲೆಸಿದ್ದಾರೆ. ಅವರೆಲ್ಲರೂ ಭಗವಂತನಿಗೆ ಅಧೀನರಾಗಿ ಅವನ ಸೇವೆಯನ್ನು ಮಾಡುತ್ತಿದ್ದಾರೆ. ಆ ದೇವತೆಗಳ ಒಳಗೂ ಭಗವಂತನ ನಿಯಾಮಕ ರೂಪಗಳಿವೆ.

ಭಕ್ತಿಯ ಮಹತ್ವ: ಇಂತಹ ಅದ್ಭುತ ಜ್ಞಾನವನ್ನು ಪಡೆದು, "ನಾನು ಭಗವಂತನ ದಾಸ, ಈ ದೇಹವು ಅವನ ವಾಸಸ್ಥಾನ" ಎಂದು ಅರಿತು ಭಕ್ತಿಪೂರ್ವಕವಾಗಿ ಆ ಭಗವಂತನನ್ನು ನಿತ್ಯವೂ ಪೂಜಿಸಬೇಕು. ಹೀಗೆ ಸದಾ ಭಗವಂತನನ್ನು ಸ್ಮರಿಸುವ ಭಕ್ತರ ಸಂಸಾರಿಕ ದುಃಖಗಳನ್ನು ಜಗನ್ನಾಥ ವಿಠಲನು ಪರಿಹರಿಸುತ್ತಾನೆ.

ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಶರೀರವೇ ಒಂದು ದೇವಾಲಯ, ಅದರಲ್ಲಿ ನೆಲೆಸಿರುವ ಭಗವಂತನೇ ಸರ್ವಾಂತರ್ಯಾಮಿ ಮತ್ತು ಸಕಲ ಜೀವರಾಶಿಯ ಚಾಲಕ ಎಂಬುದೇ ಈ ಸಂಧಿಯ ಮುಖ್ಯ ಪ್ರತಿಪಾದನೆ.

Meaning

ಪದ್ಯ ೧:
ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ
ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ
ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ
ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ||೧||
ಅರ್ಥ: ಪಾದದ ಅಭಿಮಾನಿಯಾದ ಜಯಂತನ ರೂಪದಲ್ಲಿ ಭಗವಂತನಿದ್ದಾನೆ. ಬಲಗಾಲಿನ ಹೆಬ್ಬೆರಳಿನಲ್ಲಿ ಭಾರಭೃದ್ರೂಪನಾದ ಮುಖ್ಯಪ್ರಾಣನಿದ್ದು, ಅಲ್ಲಿ ಹತ್ತು ರೂಪಗಳಿಂದ ಭಗವಂತನು ನಮ್ಮ ನಡೆ-ನುಡಿಗಳನ್ನು ನಿಯಂತ್ರಿಸುತ್ತಿದ್ದಾನೆ.

ಪದ್ಯ ೨:
ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು
ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ
ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ
ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು||೨||
ಅರ್ಥ: ಕಪಿಲ, ಚಾರ್ವಾಂಗ ರೂಪದಿಂದ ಕೈಗಳ ಸಂಧಿಯಲ್ಲಿ, ಪಾರ್ಶ್ವದಲ್ಲಿ, ಗುಹ್ಯಸ್ಥಾನದಲ್ಲಿ ಹೀಗೆ ದೇಹದ ವಿವಿಧ ಭಾಗಗಳಲ್ಲಿ ಭಗವಂತನಿದ್ದು ನಮ್ಮ ಸಕಲ ಕರ್ಮಗಳನ್ನು ತಾನೇ ಮಾಡುತ್ತಿದ್ದಾನೆ.

ಪದ್ಯ ೩:
ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ
ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ
ಐದಿಸುತ ಗರ್ಭವನು ಜೀವರ ಅನಾದಿ ಕರ್ಮ ಪ್ರಕೃತಿ ಗುಣಗಳ
ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ||೩||
ಅರ್ಥ: ನಾಭಿಯ ಮೂಲದಲ್ಲಿ ಆರು ದಳಗಳಿರುವ ಐದು ಕಮಲಗಳಿವೆ. ಅಲ್ಲಿ ಅನಿರುದ್ಧಾದಿ ಐದು ರೂಪಗಳಿಂದ ಭಗವಂತನಿದ್ದು, ಜೀವಿಗಳ ಕರ್ಮ ಮತ್ತು ಪ್ರಕೃತಿ ಗುಣಗಳಿಗನುಸಾರವಾಗಿ ನಮ್ಮ ಎಲ್ಲ ವ್ಯಾಪಾರಗಳನ್ನು ನಡೆಸುತ್ತಿದ್ದಾನೆ.

ಪದ್ಯ ೪:
ನಾಭಿಯಲಿ ಷಟ್ಕೋನ ಮಂಡಲದ ಈ ಭವಿಷ್ಯದ್ ಬ್ರಹ್ಮನೊಳು
ಮುಕ್ತಾಭ ಶ್ರೀ ಪ್ರದ್ಯುಮ್ನನು ಇಪ್ಪನು ವಿಬುಧ ಗಣಸೇವ್ಯ
ಶೋಭಿಸುವ ಕೌಸ್ತುಭವೆ ಮೊದಲಾದ ಆಭರಣ ಆಯುಧಗಳಿಂದ
ಮಹಾ ಭಯಂಕರ ಪಾಪ ಪುರುಷನ ಶೋಷಿಸುವ ನಿತ್ಯ||೪||
ಅರ್ಥ: ನಾಭಿಯ ಷಟ್ಕೋನ ಮಂಡಲದಲ್ಲಿ ಶ್ರೀ ಪ್ರದ್ಯುಮ್ನನಿದ್ದಾನೆ. ಅವನು ಕೌಸ್ತುಭ ಮೊದಲಾದ ಆಭರಣಗಳಿಂದ ಶೋಭಿಸುತ್ತಾ, ನಮ್ಮ ಪಾಪಗಳನ್ನು ನಿತ್ಯವೂ ನಾಶ ಮಾಡುತ್ತಾನೆ.

ಪದ್ಯ ೫:
ದ್ವಾದಶ ಅರ್ಕರ ಮಂಡಲವು ಮಧ್ಯ ಉದರದೊಳು ಸುಷುಮ್ನದೊಳಗಿಹದು
ಐದು ರೂಪಾತ್ಮಕನು ಅರವತ್ತಧಿಕ ಮುನ್ನೂರು
ಈ ದಿವಾರಾತ್ರಿಗಳ ಮಾನಿಗಳು ಆದ ದಿವಿಜರ ಸಂತಯಿಸುತ
ನಿಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ||೫||
ಅರ್ಥ: ಉದರದ ಮಧ್ಯದಲ್ಲಿ ಹನ್ನೆರಡು ಸೂರ್ಯ ಮಂಡಲಗಳಿವೆ. ಅಲ್ಲಿ ಭಗವಂತನು ಐದು ರೂಪಗಳಿಂದಿದ್ದು, ದೇವತೆಗಳನ್ನು ಸಂತೋಷಪಡಿಸುತ್ತಾ ದೈತ್ಯರನ್ನು ಸಂಹರಿಸುತ್ತಾನೆ.

ಪದ್ಯ ೬:
ಹೃದಯದೊಳಗಿಹದು ಅಷ್ಟದಳ ಕಮಲ ಅದರೊಳಗೆ
ಪ್ರಾದೇಶ ನಾಮಕನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ
ಪದುಮಚಕ್ರ ಸುಶಂಖ ಸುಗದಾಂಗದ ಕಟಕ ಮುಕುಟ ಅಂಗುಳೀಯಕ
ಪದಕ ಕೌಸ್ತುಭ ಹಾರ ಗ್ರೈವೇಯ ಆದಿ ಭೂಷಿತನು||೬||
ಅರ್ಥ: ಹೃದಯದಲ್ಲಿ ಎಂಟು ದಳದ ಕಮಲವಿದೆ. ಅದರಲ್ಲಿ ಪ್ರಾದೇಶ ನಾಮಕನಾದ ಭಗವಂತನು ಉದಯಿಸುವ ಸೂರ್ಯನಂತೆ ಹೊಳೆಯುತ್ತಿದ್ದಾನೆ. ಅವನು ಸಕಲ ಆಭರಣಗಳಿಂದ ಭೂಷಿತನಾಗಿದ್ದಾನೆ.

ಪದ್ಯ ೭:
ದ್ವಿದಳ ಪದ್ಮವು ಶೋಭಿಪುದು ಕಂಠದಲಿ ಮುಖ್ಯಪ್ರಾಣ
ತನ್ನಯ ಸುದತಿಯಿಂದ ಒಡಗೂಡಿ ಹಂಸ ಉಪಾಸನೆಯ ಮಾಳ್ಪ
ಉದಕವು ಅನ್ನಾದಿಗಳಿಗೆ ಅವಕಾಶದನು ತಾನಾಗಿದ್ದು
ಉದಾನ ಅಭಿಧನು ಶಬ್ಧವ ನುಡಿದು ನುಡಿಸುವ ಸರ್ವಜೀವರೊಳು||೭||
ಅರ್ಥ: ಕಂಠದಲ್ಲಿ ಎರಡು ದಳದ ಕಮಲವಿದೆ. ಅಲ್ಲಿ ಮುಖ್ಯಪ್ರಾಣನು ಹಂಸರೂಪದ ಭಗವಂತನನ್ನು ಉಪಾಸನೆ ಮಾಡುತ್ತಿದ್ದಾನೆ. ಉದಾನ ರೂಪದ ಭಗವಂತನು ನಮ್ಮ ಮಾತುಗಳನ್ನು ನುಡಿಸುತ್ತಾನೆ.

ಪದ್ಯ ೮:
ನಾಸಿಕದಿ ನಾಸತ್ಯ ದಸ್ರರು ಶ್ವಾಸಮಾನೀ ಪ್ರಾಣ ಭಾರತಿ
ಹಂಸ ಧನ್ವಂತ್ರಿಗಳು ಅಲ್ಲಲ್ಲಿ ಇಪ್ಪರು ಅವರೊಳಗೆ
ಭೇಶ ಭಾಸ್ಕರರು ಅಕ್ಷಿ ಯುಗಳಕೆ ಅಧೀಶರೆನಿಪರು
ಅವರೊಳಗೆ ಲಕ್ಷ್ಮೀಶದಧಿ ವಾಮನರು ನೀಯಾಮಿಸುತಲಿ ಇರುತಿಹರು||೮||
ಅರ್ಥ: ಮೂಗಿನಲ್ಲಿ, ಉಸಿರಾಟದಲ್ಲಿ ದೇವತೆಗಳಿದ್ದಾರೆ. ಕಣ್ಣುಗಳಿಗೆ ಸೂರ್ಯ ಅಧಿಪತಿ. ಆ ಎಲ್ಲ ದೇವತೆಗಳ ಒಳಗೆ ಭಗವಂತನು ವಾಮನ ರೂಪದಿಂದ ನಿಯಾಮಕನಾಗಿದ್ದಾನೆ.

ಪದ್ಯ ೯:
ಸ್ತಂಭ ರೂಪದಲಿ ಇಪ್ಪ ದಕ್ಷಿಣ ಅಂಬಕದಿ ಪ್ರದ್ಯುಮ್ನ
ಗುಣ ರೂಪ ಅಂಭ್ರಣಿಯು ತಾನಾಗಿ ಇಪ್ಪಳು
ವತ್ಸರೂಪದಲಿ ಪೊಂಬಸಿರ ಪದಯೋಗ್ಯ ಪವನ
ತ್ರಿಯಂಬಕಾದಿ ಸಮಸ್ತ ದಿವಿಜ ಕದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ||೯||
ಅರ್ಥ: ಬಲಗಣ್ಣಿನಲ್ಲಿ ಪ್ರದ್ಯುಮ್ನನಿದ್ದಾನೆ. ಭಗವಂತನ ರೂಪಗಳಲ್ಲಿ ದೇವತೆಗಳು ಸೇವೆ ಮಾಡುತ್ತಾ ಸಕಲ ಜಗತ್ತಿನ ಪದಾರ್ಥಗಳನ್ನು ನಮಗೆ ತೋರಿಸುತ್ತಾರೆ.

ಪದ್ಯ ೧೦:
ನೇತ್ರಗಳಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ ಅತ್ರಿ
ಆ ಜಮದಗ್ನಿ ನಾಮಗಳಿಂದ ಕರೆಸುತಲಿ
ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು
ಜಗತ್ರಯ ಈಶನ ಭಜಿಪರು ಅನುದಿನ ಪರಮ ಭಕುತಿಯಲಿ||೧೦||
ಅರ್ಥ: ನಮ್ಮ ಕಣ್ಣುಗಳಲ್ಲಿ ಸಪ್ತರ್ಷಿಗಳ ರೂಪದಿಂದ ಭಗವಂತನಿದ್ದಾನೆ. ಇಂದ್ರ, ಸೂರ್ಯ ಮೊದಲಾದ ದೇವತೆಗಳು ನಿರಂತರವಾಗಿ ಭಗವಂತನನ್ನು ಭಜಿಸುತ್ತಿದ್ದಾರೆ.

ಪದ್ಯ ೧೧:
ಜ್ಯೋತಿಯೊಳಗೆ ಇಪ್ಪನು ಕಪಿಲ ಪುರುಹೂತ ಮುಖ ದಿಕ್ಪತಿಗಳಿಂದ ಸಮೇತನಾಗಿ
ದಕ್ಷಿಣ ಅಕ್ಷಿಯ ಮುಖದೊಳಿಹ ವಿಶ್ವ
ಶ್ವೇತವರ್ಣ ಚತುರ್ಭುಜನು ಸಂಪ್ರೀತಿಯಿಂದಲಿ
ಸ್ಥೂಲ ವಿಷಯವ ಚೇತನರಿಗೆ ಉಂಡು ಉಣಿಪ ಜಾಗ್ರತೆಯಿತ್ತು ನೃಗಜಾಸ್ಯ||೧೧||
ಪದ್ಯ ೧೨:
ನೆಲೆಸಿಹರು ದಿಕ್ದೇವತೆಗಳು ಇಕ್ಕರದ ಕರ್ಣಂಗಳಲಿ
ತೀರ್ಥಂಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜನರು
ಬಲದ ಕಿವಿಯಲಿ ಇರುತಿಹರು ಬಾಂಬೊಳೆಯ ಜನಕ ತ್ರಿವಿಕ್ರಮನು
ನಿರ್ಮಲಿನರನು ಮಾಡುವನು ಈಪರಿ ಚಿಂತಿಸುವ ಜನರ||೧೨||
ಅರ್ಥ: ಕಿವಿಯಲ್ಲಿ ದಿಕ್ಷಾಲಕರು, ತೀರ್ಥಗಳ ಅಭಿಮಾನಿ ದೇವತೆಗಳಿದ್ದಾರೆ. ಬಲಗಿವಿಯಲ್ಲಿ ತ್ರಿವಿಕ್ರಮ ರೂಪದ ಭಗವಂತನಿದ್ದಾನೆ. ಹೀಗೆ ಚಿಂತಿಸುವವರನ್ನು ಅವನು ನಿರ್ಮಲರನ್ನಾಗಿ ಮಾಡುತ್ತಾನೆ.

ಪದ್ಯ ೧೩:
ಚಿತ್ತಜ ಇಂದ್ರರು ಮನದೊಳು ಇಪ್ಪರು ಕೃತ್ತಿವಾಸನು ಅಹಂಕಾರದಿ
ಚಿತ್ತ ಚೇತನಮಾನಿಗಳು ವಿಹಗ ಇಂದ್ರ ಫಣಿಪರೊಳು ನಿತ್ಯದಲಿ ನೆಲೆಗೊಂಡು
ಹತ್ತೊಂಭತ್ತು ಮೊಗ ತೈಜಸನು
ಸ್ವಪ್ನಾವಸ್ಥೆಯೈದಿಸಿ ಜೀವರನು ಪ್ರವಿಭಕ್ತ ಭುಕುವೆನಿಪ||೧೩||
ಅರ್ಥ: ಮನಸ್ಸಿನಲ್ಲಿ ಇಂದ್ರ, ಅಹಂಕಾರದಲ್ಲಿ ಶಿವ ನೆಲೆಸಿದ್ದಾರೆ. ತೈಜಸ ರೂಪದ ಭಗವಂತನು ಸ್ವಪ್ನಾವಸ್ಥೆಯನ್ನು ನೀಡಿ ಜೀವರ ಅನುಭವಕ್ಕೆ ಕಾರಣವಾಗುತ್ತಾನೆ.

ಪದ್ಯ ೧೪:
ಜ್ಞಾನಮಯ ತೈಜಸನು ಹೃದಯ ಸ್ಥಾನವ ಐದಿಸಿ
ಪ್ರಾಜ್ಞನೆಂಬ ಅಭಿಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನೆ ಕೊಡುತ
ಆನತೆಷ್ಟ ಪ್ರದನು ಅನುಸಂಧಾನವೀಯದೆ ಸುಪ್ತಿಯೈದಿಸಿ
ತಾನೆ ಪುನರಪಿ ಸ್ವಪ್ನ ಜಾಗ್ರತೆಯೀವ ಚೇತನಕೆ||೧೪||
ಅರ್ಥ: ಜ್ಞಾನಮಯನಾದ ಭಗವಂತನು ಪ್ರಾಜ್ಞ ರೂಪದಿಂದ ಸುಷುಪ್ತಿ (ಗಾಢ ನಿದ್ರೆ) ಸ್ಥಿತಿಯನ್ನು ಕೊಡುತ್ತಾನೆ, ಮತ್ತೆ ಎಚ್ಚರಗೊಳಿಸುತ್ತಾನೆ.

ಪದ್ಯ ೧೫:
ನಾಲಿಗೆಯೊಳಿಹ ವರುಣ ಮತ್ಸ್ಯ ಅಣುನಾಲಿಗೆಯೊಳು ಉಪೇಂದ್ರ ಇಂದ್ರರು
ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ
ಅಲೆಯೊಳು ವಾಮನ ಸುಭಾಮನ ಫಾಲದೊಳು ಶಿವ ಕೇಶವನು
ಸುಕಪೋಲದೊಳಗೆ ರತೀಶ ಕಾಮನು ಅಲ್ಲಿ ಪ್ರದ್ಯುಮ್ನ||೧೫||
ಅರ್ಥ: ನಾಲಿಗೆ, ತಾಲು (ಅಂಗುಳಿ), ಹಣೆ, ಕೆನ್ನೆ ಹೀಗೆ ದೇಹದ ಪ್ರತಿಯೊಂದು ಭಾಗದಲ್ಲಿ ಭಗವಂತನ ವಿವಿಧ ರೂಪಗಳು ಮತ್ತು ದೇವತೆಗಳು ನೆಲೆಸಿದ್ದಾರೆ.

ಪದ್ಯ ೧೬:
ರೋಮಗಳಲಿ ವಸಂತ ತ್ರಿಕಕುದ್ಧಾಮ ಮುಖದೊಳಗೆ ಅಗ್ನಿ ಭಾರ್ಗವ
ತಾಮರಸ ಭವ ವಾಸುದೇವರು ಮಸ್ತಕದೊಳಿಹರು
ಈ ಮನದೊಳಿಹ ವಿಷ್ಣು ಶಿಖದೊಳು ಉಮಾಮಹೇಶ್ವರ ನಾರಸಿಂಹಸ್ವಾಮಿ
ತನ್ನ ಅನುದಿನದಿ ನೆನೆವರ ಮೃತ್ಯು ಪರಿಹರಿಪ||೧೬||
ಅರ್ಥ: ರೋಮಗಳು, ಮುಖ, ಮಸ್ತಕ, ಶಿಖೆ ಹೀಗೆ ಪ್ರತಿಯೊಂದು ಭಾಗದಲ್ಲೂ ವಿಷ್ಣು, ನರಸಿಂಹ ಮುಂತಾದ ರೂಪಗಳಿವೆ. ಇವರನ್ನು ನಿತ್ಯವೂ ನೆನೆಯುವವರ ಮೃತ್ಯುಭಯವನ್ನು ಭಗವಂತನೇ ಪರಿಹರಿಸುತ್ತಾನೆ.

ಪದ್ಯ ೧೭:
ಮೌಳಿಯಲ್ಲಿಹ ವಾಸುದೇವನು ಏಳು ಅಧಿಕ ನವ ಜಾತಿ ರೂಪವ ತಾಳಿ
ಮುಖದೊಳು ಶ್ರವಣ ನಯನಾದಿ ಅವಯವಗಳಿಗೆ ಆಳರಸು ತಾನಾಗಿ
ಸತತ ಸುಲೀಲೆಗೈಯುತಲಿ ಇಪ್ಪ
ಸುಖಮಯ ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು||೧೭||
ಅರ್ಥ: ತಲೆಯ ಭಾಗದಲ್ಲಿ ವಾಸುದೇವನು ೧೬ ರೂಪಗಳನ್ನು ತಾಳಿ, ಕಣ್ಣು-ಕಿವಿಯಾದಿ ಇಂದ್ರಿಯಗಳಿಗೆ ಒಡೆಯನಾಗಿ ಎಲ್ಲವನ್ನೂ ಮಾಡಿಸುತ್ತಾ ಸುಖಮಯನಾಗಿ ಲೀಲೆಯನ್ನು ಮಾಡುತ್ತಾನೆ.

ಪದ್ಯ ೧೮:
ಎರಡಧಿಕವು ಎಪ್ಪತ್ತು ಎನಿಪ ಸಾವಿರದ ನಾಡಿಗೆ
ಮುಖ್ಯವು ಏಕ ಉತ್ತರ ಶತಗಳು ಅಲ್ಲಿ ಇಹವು ನೂರಾ ಒಂದು ಮೂರ್ತಿಗಳು
ಅರಿದು ದೇಹದಿ ಕಲಶ ನಾಮಕ ಹರಿಗೆ ಕಳೆಗಳು ಇವು ಎಂದು
ನೈರಂತರದಿ ಪೂಜಿಸುತಿಹರು ಪರಮಾದರದಿ ಭೂಸುರರು||೧೮||
ಅರ್ಥ: ದೇಹದ ೭೨,೦೭೨ ನಾಡಿಗಳ ಒಳಗೆ ಮುಖ್ಯವಾದ ೧೦೧ ನಾಡಿಗಳಲ್ಲಿ ಭಗವಂತನ ರೂಪಗಳಿವೆ. ಇವುಗಳನ್ನು ಭಗವಂತನ ಕಳೆಗಳೆಂದು ಅರಿತು ಜ್ಞಾನಿಗಳು ಸದಾ ಪೂಜಿಸುತ್ತಾರೆ.

ಪದ್ಯ ೧೯:
ಇದಕೆ ಕಾರಣವೆನಿಸುವವು ಎರಡಧಿಕ ದಶ ನಾಡಿಗಳ ಒಳಗೆ
ಸುರಾ ನದಿಯೆ ಮೊದಲಾದ ಅಮಲ ತೀರ್ಥಗಳು ಇಹವು ಕರಣದಲಿ
ಪದುಮನಾಭನು ಕೇಶವಾದಿ ದ್ವಿದಶ ರೂಪದಲಿ ಇಪ್ಪನಲ್ಲಿ
ಅತಿ ಮೃದುಳವಾದ ಸುಷುಮ್ನದೊಳಗೆ ಏಕಾತ್ಮನೆನಿಸುವನು||೧೯||
ಅರ್ಥ: ನಾಡಿಗಳ ಒಳಗೆ ಪವಿತ್ರ ತೀರ್ಥಗಳಿವೆ. ಪದ್ಮನಾಭನು ಕೇಶವಾದಿ ೨೪ ರೂಪಗಳಲ್ಲಿ ಸುಷುಮ್ನಾ ನಾಡಿಯ ಒಳಗೆ ನೆಲೆಸಿದ್ದಾನೆ.

ಪದ್ಯ ೨೦:
ಆಮ್ನಯ ಪ್ರತಿಪಾದ್ಯ ಶ್ರೀ ಪ್ರದ್ಯುಮ್ನ ದೇವಾನು ದೇಹದೊಳಗೆ
ಸುಷುಮ್ನದಿ ಈಡಾ ಪಿಂಗಳದಿ ವಿಶ್ವಾದಿ ರೂಪದಲಿ
ನಿರ್ಮಲಾತ್ಮನು ವಾಣಿ ವಾಯು ಚತುರ್ಮುಖರೊಳಿದ್ದು ಅಖಿಳ ಜೀವರ
ಕರ್ಮ ಗುಣವ ಅನುಸರಿಸಿ ನಡೆವನು ವಿಶ್ವ ವ್ಯಾಪಕನು||೨೦||
ಅರ್ಥ: ಪ್ರದ್ಯುಮ್ನನು ಸುಷುಮ್ನಾ, ಈಡಾ ಮತ್ತು ಪಿಂಗಳಾ ನಾಡಿಗಳಲ್ಲಿ ವಿಶ್ವಾದಿ ರೂಪದಿಂದಿದ್ದು, ಜೀವರ ಕರ್ಮಗಳಿಗನುಸಾರವಾಗಿ ಎಲ್ಲವನ್ನೂ ನಡೆಸುವ ವಿಶ್ವವ್ಯಾಪಕನಾಗಿದ್ದಾನೆ.

ಪದ್ಯ ೨೧:
ಅಬ್ದ ಅಯನ ಋತು ಮಾಸ ಪಕ್ಷ ಸುಶಬ್ಧದಿಂದಲಿ ಕರೆಸುತಲಿ
ನೀಲಾಬ್ಧ ವರ್ಣ ಅನಿರುದ್ಧನೆ ಮೊದಲಾದ ಐದು ರೂಪದಲಿ
ಹಬ್ಬಿಹನು ಸರ್ವತ್ರದಲಿ ಕರುಣಾಬ್ಧಿ ನಾಲ್ವತ್ತೈದು ರೂಪದಿ
ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ||೨೧||
ಅರ್ಥ: ಕಾಲದ ವಿವಿಧ ವಿಭಾಗಗಳಾಗಿ ಅನಿರುದ್ಧಾದಿ ರೂಪಗಳಲ್ಲಿ ಹರಡಿರುವ ಭಗವಂತನು, ೪೫ ರೂಪಗಳಿಂದ ಭಕ್ತರಿಗೆ ಸುಲಭವಾಗಿ ಸಿಗುತ್ತಾನೆ.

ಪದ್ಯ ೨೨:
ಐದು ರೂಪಾತ್ಮಕನು ಇಪ್ಪತ್ತೈದು ರೂಪದಲಿಪ್ಪ
ಮತ್ತೆ ಹದಿನೈದು ತಿಥಿ ಇಪ್ಪತ್ತನಾಲ್ಕರಿಂದ ಪೆಚ್ಚಿಸಲು
ಐದುವದು ಅರವತ್ತಧಿಕ ಆರೈದು ದಿವಸ ಆಹ್ವಯನೊಳಗೆ
ಮನ ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹುದೋ||೨೨||
ಅರ್ಥ: ತಿಥಿ-ವಾರ-ನಕ್ಷತ್ರಗಳ ವಿಭಾಗದಲ್ಲಿ ನೆಲೆಸಿರುವ ಭಗವಂತನನ್ನು ಚಿಂತಿಸುವ ಭಕ್ತರಿಗೆ ಮೂರು ವಿಧದ ತಾಪತ್ರಯಗಳು (ಆಧ್ಯಾತ್ಮಿಕ, ಆಧಿಭೌತಿಕ, ಆಧಿদৈವಿಕ) ಇರುವುದಿಲ್ಲ.

ಪದ್ಯ ೨೩:
ದಿವಸ ಯಾಮ ಮಹೂರ್ತ ಘಟಿಕಾದಿ ಅವಯವಗಳೊಳಗಿದ್ದು
ಗಂಗಾ ಪ್ರವಾಹದಂದದಿ ಕಾಲನಾಮಕ ಪ್ರವಹಿಸುತಲಿಪ್ಪ
ಇವನ ಗುಣ ರೂಪ ಕ್ರಿಯಂಗಳ ನಿವಹದೊಳು ಮುಳುಗಿ ಆಡುತಲಿ
ಭಾರ್ಗವಿ ಸದಾನಂದಾತ್ಮಳು ಆಗಿಹಳು ಎಲ್ಲ ಕಾಲದಲಿ||೨೩||
ಅರ್ಥ: ಕಾಲದ ಪ್ರತಿ ಕ್ಷಣದಲ್ಲೂ ಭಗವಂತನಿದ್ದಾನೆ. ಲಕ್ಷ್ಮೀದೇವಿಯು ಅವನ ಗುಣ-ರೂಪಗಳ ಚಿಂತನೆಯಲ್ಲಿ ಸದಾ ಆನಂದಮಯಳಾಗಿದ್ದಾಳೆ.

ಪದ್ಯ ೨೪:
ವೇದತತಿಗಳ ಮಾನಿ ಲಕ್ಷ್ಮೀ ಧರಾಧರನ ಗುಣ ರೂಪ ಕ್ರಿಯೆಗಳ
ಆದಿ ಮಧ್ಯ ಅಂತವನು ಕಾಣದೆ ಮನದಿಯೋಚಿಸುತ
ಆದಪನೆ ಈತನಿಗೆ ಪತ್ನಿ? ಕೃಪೋದಧಿಯು ಸ್ವೀಕರಿಸುದನು
ಲೋಕಾಧಿಪನು ಭಿಕ್ಷುಕನ ಮನೆಯ ಔತಣವ ಕೊಂಬಂತೆ||೨೪||
ಅರ್ಥ: ಭಗವಂತನ ಮಹಿಮೆಯನ್ನು ಲಕ್ಷ್ಮೀದೇವಿಯೂ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅಂತಹವನು ತನ್ನ ಭಕ್ತರ ಭಕ್ತಿಯನ್ನು ದೀನರ ಮನೆಯ ಔತಣದಂತೆ ಸ್ವೀಕರಿಸುತ್ತಾನೆ.

ಪದ್ಯ ೨೫:
ಕೋವಿದರು ಚಿತ್ತೈಸುವದು ಶ್ರೀದೇವಿಯೊಳಗಿಹ ನಿಖಿಲ ಗುಣ
ತೃಣ ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ
ದೇವ ದೇವಕಿಯಿಪ್ಪಳು ಎಂದರಿದು ಆ ವಿರಿಂಚನ ಜನನಿ
ಈತನ ಆವಕಾಲಕು ಅರಿಯಳು ಅಂತವ ನರರ ಪಾಡೇನು||೨೫||
ಅರ್ಥ: ಭಗವಂತನ ಅನಂತ ಗುಣಗಳನ್ನು ಯಾರೂ ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ, ಜ್ಞಾನಿಗಳು ಇದನ್ನು ಮನಗಾಣಬೇಕು.

ಪದ್ಯ ೨೬:
ಕ್ಷೀರ ದಧಿ ನವನೀತ ಘೃತದೊಳು ಸೌರಭ ರಸಾಹ್ವಯನೆನಿಸಿ ಶಾಂತೀರಮಣ
ಜ್ಞಾನ ಇಚ್ಚಾ ಕ್ರಿಯಾ ಶಕ್ತಿಯೆಂದೆಂಬ ಈರೆರೆಡು ನಾಮದಲಿ ಕರೆಸುತ
ಭಾರತೀ ವಾಗ್ದೇವಿ ವಾಯು ಸರೋರುಹ ಆಸನರು
ಅಲ್ಲಿ ನೆಲೆಸಿಹರು ಎಲ್ಲ ಕಾಲದಲಿ||೨೬||
ಅರ್ಥ: ಜ್ಞಾನ, ಇಚ್ಛಾ, ಕ್ರಿಯಾ ಶಕ್ತಿ ಸ್ವರೂಪನಾದ ಭಗವಂತನ ಸನ್ನಿಧಿಯಲ್ಲಿ ಭಾರತಿ, ವಾಯು, ಬ್ರಹ್ಮ ಮೊದಲಾದವರು ನೆಲೆಸಿದ್ದಾರೆ.

ಪದ್ಯ ೨೭:
ವಸುಗಳೆಂಟು ನವ ಪ್ರಜ ಈಶರು ಶ್ವಸನ ಗುಣ ಐವತ್ತು
ಏಕಾದಶ ದಿವಾಕರರು ಅನಿತೆ ರುದ್ರರು ಅಶ್ವಿನಿಗಳೆರಡು
ದಶ ವಿಹೀನ ಶತಾಖ್ಯ ಈ ಸುಮನಸರೊಳಗೆ
ಚತುರಾತ್ಮ ನೀಯಾಮಿಸುವ ಬ್ರಹ್ಮ ಸಮೀರ ಖಗ ಫಣೀಂದ್ರರ ಒಳಗಿದ್ದು||೨೭||
ಅರ್ಥ: ಅಷ್ಟ ವಸುಗಳು, ರುದ್ರರು, ಅಶ್ವಿನೀ ದೇವತೆಗಳು ಹೀಗೆ ಎಲ್ಲ ದೇವತೆಗಳ ಒಳಗೂ ಭಗವಂತನ ನಿಯಾಮಕ ರೂಪಗಳಿವೆ.

ಪದ್ಯ ೨೮:
ತೋರುತಿಪ್ಪನು ಚಕ್ರದಲಿ ಹಿಂಕಾರ ನಾಮಕ ಶಂಖದಲಿ ಪ್ರತಿಹಾರ
ಗದೆಯಲಿ ನಿಧನ ಪದ್ಮದಲಿ ಇಪ್ಪ ಪ್ರಸ್ಥಾನ
ಕಾರುಣಿಕನು ಉದ್ಗೀಥನಾಮದಿ ಮಾರಮಣನ ಐ ರೂಪಗಳ
ಶಂಖಾರಿ ಮೊದಲಾದ ಆಯುಧಗಳೊಳು ಸ್ಮರಿಸಿ ಧರಿಸುತಿರು||೨೮||
ಅರ್ಥ: ಭಗವಂತನು ಧರಿಸಿರುವ ಶಂಖ, ಚಕ್ರ, ಗದೆ, ಪದ್ಮಗಳಲ್ಲಿಯೂ ಅವನು ವಿಶಿಷ್ಟ ನಾಮಗಳಿಂದ ನೆಲೆಸಿದ್ದಾನೆ. ಅವುಗಳನ್ನು ಸ್ಮರಿಸುತ್ತಾ ಪೂಜಿಸಬೇಕು.

ಪದ್ಯ ೨೯:
ತನುವೆ ರಥ ವಾಕ್ ಅಭಿಮಾನಿಯೆ ಗುಣವೆನಿಸುವಳು
ಶ್ರೋತ್ರದೊಳು ರೋಹಿಣಿ ಶಶಾಂಕರು ಪಾಶ ಪಾಣಿಗಳು ಅಶ್ವವೆಂದೆನಿಸಿ
ಇನನು ಸಂಜ್ಞಾ ದೇವಿಯರು ಇಹರ ಅನಲ ಲೋಚನ
ಸೂತನೆನಿಸುವ ಪ್ರಣವ ಪಾದ್ಯ ಪ್ರಾಣ ನಾಮಕ ರಥಿಕನೆನಿಸುವನು||೨೯||
ಅರ್ಥ: ದೇಹವನ್ನು ರಥಕ್ಕೆ, ಮನಸ್ಸನ್ನು ಕಡಿವಾಣಕ್ಕೆ ಹೋಲಿಸಲಾಗಿದೆ. ಇಲ್ಲಿ ಭಗವಂತನು ರಥಿಕನಾಗಿ ನಮ್ಮ ಜೀವನದ ರಥವನ್ನು ನಡೆಸುತ್ತಿದ್ದಾನೆ.

ಪದ್ಯ ೩೦:
ಅಮಿತ ಮಹಿಮನ ಅಪಾರ ಗುಣಗಳ ಸಮಿತ ವರ್ಣಾತ್ಮಕ ಶ್ರುತಿ ಸ್ಮೃತಿ ಗಮಿಸಲಾಪವೆ
ತದಭಿಮಾನಿಗಳು ಎಂದೆನಿಸಿಕೊಂಬ
ಕಮಲಾ ಸಂಭವ ಭವ ಸುರ ಇಂದ್ರಾದಿ ಅಮರರು ಅನುದಿನ ತಿಳಿಯಲು ಅರಿಯರು
ಸ್ವಮಹಿಮೆಗಳ ಆದಿ ಅಂತ ಮಧ್ಯಗಳು ಅರಿವ ಸರ್ವಜ್ಞ||೩೦||
ಅರ್ಥ: ಭಗವಂತನ ಮಹಿಮೆಯನ್ನು ಬ್ರಹ್ಮಾದಿ ದೇವತೆಗಳೂ ಸಂಪೂರ್ಣವಾಗಿ ಅರಿಯಲು ಅಶಕ್ತರು. ಅವನು ಸರ್ವಜ್ಞನಾಗಿದ್ದಾನೆ.

ಪದ್ಯ ೩೧:
ವಿತ್ತ ದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ
ಹರಿ ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು
ನಿತ್ಯದಲಿ ಸಂತೃಪ್ತಿ ಬಡಿಸುತ ಉತ್ತಮ ಅಧಮ ಮಧ್ಯಮರ
ಕೃತ ಕೃತ್ಯನಾಗು ಉನ್ಮತ್ತನು ಆಗದೆ ಭೃತ್ಯ ನಾನೆಂದು||೩೧||
ಅರ್ಥ: ಸಂಪತ್ತು, ಮನೆ, ಮಡದಿ, ಮಕ್ಕಳಲ್ಲಿ ಭಗವಂತನನ್ನೇ ಕಾಣುತ್ತಾ, "ನಾನು ಭಗವಂತನ ದಾಸ" ಎಂಬ ಭಾವನೆಯಿಂದ ಸಂತೃಪ್ತನಾಗಿ ಬದುಕಬೇಕು.

ಪದ್ಯ ೩೨:
ದೇವ ದೇವೇಶನ ಸುಮೂರ್ತಿ ಕಳೇವರಗಳೊಳಗೆ ಅನವರತ ಸಂಭಾವಿಸುತ
ಪೂಜಿಸುತ ನೋಡುತ ಸುಖಿಸುತಿರು ಬಿಡದೆ
ಶ್ರೀವರ ಜಗನ್ನಾಥ ವಿಠಲ ತಾ ಒಲಿದು ಕಾರುಣ್ಯದಲಿ
ಭವ ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು||೩೨||
ಅರ್ಥ: ಜಗನ್ನಾಥ ವಿಠಲನು ನಮ್ಮ ದೇಹದಲ್ಲಿರುವ ತನ್ನ ರೂಪಗಳನ್ನು ಪೂಜಿಸುವ ಭಕ್ತರ ಸಂಸಾರದ ನೋವನ್ನು ಪರಿಹರಿಸಿ ರಕ್ಷಿಸುತ್ತಾನೆ.
***

Summary of Angushta Sandhi
This chapter is famously known as the Padadi-Kesha Varnana Sandhi (the description of the Lord's presence from the feet to the crown of the head). In this section, Jagannatha Dasa eloquently explains how the Lord resides in every part of the human body.

The Lord’s Abode in the Body: From the big toe to the crown of the head, the Lord dwells in various divine forms (such as Jayanta, Kapila, Aniruddha, Pradyumna, Vasudeva, and Narasimha). Every nerve, organ, and sense in our body is governed and directed by these specific manifestations of the Lord.

The Controller of All Actions: The Lord is the prime mover behind every action, breath, speech, vision, and the three states of consciousness (waking, dreaming, and deep sleep). He manages all our activities according to the soul's ancient karma and inherent nature.

The Role of Deities: Presiding deities (such as Indra, Vayu, Brahma, the Saptarishis, and the Directional Guardians) reside in various parts of the body. However, they are all subservient to the Lord and serve Him; the Lord resides within these deities as their supreme Controller and Inner-Dweller.

The Importance of Devotion: Recognizing this profound truth—that our body is a temple and the Lord is the Indweller—we should cultivate the attitude of a servant (dasa). By constantly remembering and worshiping Him with devotion, a devotee can attain supreme peace. Jagannatha Vittala, being pleased with such devotion, removes the pains of worldly existence and purifies the soul.

In essence: This chapter teaches that the human body is a sacred vessel for the Supreme Lord, who is the Sarvantaryami (All-Pervading Inner-Dweller) and the ultimate driver of all living beings.

Meaning

Verse 1
pādamāni jayantana oḷage sumēdha nāyakanu ippa |
dakṣiṇa pādada aṅguṭadalli pavananu bhārabhŕdrūpa |
kādukoṇḍiha ṭaṅkitara modalāda nāmadi |
saṁdhigaḷali īraidu rūpadali ippa saṁtata naḍedu naḍesutali ||1||

Meaning: The Lord resides in the form of Jayanta in the foot. In the big toe of the right foot, He dwells as Mukhya Prana in the form of the Supporter of the Universe (Bharabhrut). Dwelling there with ten specific forms and names, He constantly guides and directs all our movements.

Verse 2
kapila cārvāṅga ādi rūpadi vapugaḷoḷu hastagaḷa saṁdhiyoḷu |
aparimita karmagaḷa māḍutalippa dinadinadi |
kr̥paṇa vatsala pārśvadoḷu para suphaliyenisuva |
gudupasthadi vipuḷa balibhaga manavenisi tuṁdiyoḷage irutihanu ||2||

Meaning: In forms like Kapila and Charvanga, and within the joints of the hands, He performs countless actions daily. The Lover of the humble dwells in the sides, the private parts, and within the stomach, overseeing all bodily functions.

Verse 3
aidu mēloṁdadikadaḷavuḷḷa aidu padmavu nābhi mūladi |
aidu mūrtigaḷihavu aniruddhādi nāmadi |
aidisuta garbhavanu jīvara anādi karma prakr̥ti guṇagaḷa |
hādi tappalugoḍade vyāpāragaḷa māḍutiha ||3||

Meaning: At the root of the navel are five lotuses, each with six petals. Within them reside five forms of the Lord (beginning with Aniruddha). He manages the souls' ancient karma and inherent nature, ensuring they do not stray from the correct path.

Verse 4
nābhiyali ṣaṭkōna maṁdalada ī bhaviṣyad brahmaṇoḷu |
muktābha śrī pradyumnanu ippanu vibudha gaṇasēvya |
śōbhisuva kaustubhave modalāda ābharaṇa āyudhagaḷinda |
mahā bhayaṁkara pāpa puruṣana śōṣisuva nitya ||4||

Meaning: In the hexagonal mandala of the navel, the radiant Sri Pradyumna resides, served by the gods. Adorned with jewels like the Kaustubha and holding His weapons, He perpetually destroys the fearsome "personification of sin."

Verse 5
dvādaśa arkara maṁḍalavu madhya udaradoḷu suṣumnadoḷagihadu |
aidu rūpātmaganu aravattadika munnūru |
ī divārātrigaḷa mānigaḷu āda divijara saṁtayisuta |
niṣāda rūpaka daityaranu saṁharipa nityadali ||5||

Verse 6
hr̥dayadoḷagihadu aṣṭadaḷa kamala adaroḷage |
prādēśa nāmakanudita bhāskaranante tōrpanu biṁbanendenisi |
padumacakra suśaṅkha sugadāṅgada kaṭaka mukuṭa aṅguḷīyaka |
padaka kaustubha hāra graivēya ādi bhūṣitanu ||6||

Meaning: Inside the heart is an eight-petalled lotus. In it, the Lord dwells as Pradesha, shining like the rising sun. He is adorned with the lotus, discus, conch, mace, crown, rings, necklace, and the Kaustubha gem.

Verse 7
dvidala padmavu śōbhipudu kaṁṭhadali mukhyaprāṇa |
tannaya sudatiyinda oḍagūḍi haṁsa upāsanē māḷpa |
udakavu annādigaḷige avakāśadanu tānāgiddū |
udāna abhidhanu śabdhava nuḍidu nuḍisuva sarvajīvaroḷu ||7||

Meaning: A two-petalled lotus shines in the throat, where Mukhya Prana meditates on the Lord as Hamsa. As Udana, the Lord provides the capacity for food and speech, causing all souls to speak.

Verse 8
nāsikadi nāsatya dasraru śvāsama-nī prāṇa bhāratī |
haṁsa dhanvaṁtrigaḷu allalli ipparu avaroḷage |
bhēśa bhāskararu akṣi yugaḷake adhīśareniparu |
avaroḷage lakṣmīśadadhi vāmanaru nīyāmisutali irutiharu ||8||

Meaning: The Ashwini twins reside in the nostrils; Prana and Bharati in the breath; Hamsa and Dhanvantari in their respective places. The Sun god rules the eyes. Within all of them, the Lord (Vamana) dwells as the supreme controller.

Verse 9
staṁbha rūpadali ippa dakṣiṇa aṁbakadi pradyumna |
guṇa rūpa aṁbhraṇiyu tānāgi ippaḷu |
vatsarūpadali poṁbasira padayōgya pavana |
triyaṁbakādi samasta divija kadāṁba sēvitanāgi sarva padārthagala tōrpa ||9||

Meaning: The Lord dwells in the right eye as Pradyumna. The presiding deities serve Him, and through this divine grace, all objects of the world are revealed to the soul.

Verse 10
nētragagaḷali vasiṣṭha viśvāmitra bhāradvāja gautama atri |
ā jamadagni nāmagalinda karesutali |
patratāpaka śakra sūrya dharitri parjanyādi suraru |
jagatraya īśana bhajiparu anudina parama bhakutiyali ||10||

Meaning: In the eyes, the Lord resides in the names of the seven sages (Saptarishis). Indra, Surya, Parjanya, and other gods worship the Lord of the three worlds daily with supreme devotion.

Verse 11
jyōtiyoḷage ippanu kapila puruhūta mukha dikpatigaḷinda samētanāgi |
dakṣiṇa akṣiya mukhadoḷiha viśva |
śvētavarṇa caturbhujanu saṁprītiyindali |
sthūla viṣayava cētanarige uṁḍu uṇipa jāgrateyittu nr̥gajāsyana ||11||

Meaning: The Lord dwells in the light of the eyes with the directional deities. In the right eye, He is Vishwa, the white-complexioned, four-armed Lord who provides experiences of the gross world to the soul in the waking state.

Verse 12
nelesiharu dikdēvatēgaḷu ikkarada karṇaṅgaḷali |
tīrthaṁgaḷige mānigaḷāda suranadi mukhya nirjanaru |
balada kivaliyali irutiharu bāṁboḷeya janaka trivikramanu |
nirmalinaranu māḍuvanu īpari cintisuva janara ||12||

Meaning: The directional deities reside in the ears. The presiding deities of holy rivers are also present. The Lord dwells in the right ear as Trivikrama, purifying those who meditate on Him in this way.

Verse 13
cittaja indraru manadoḷu ipparu kr̥ttivāsanau ahaṅkārādi |
citta cētanamanigaḷu vihaga indra phaṇipar oḷu nityadali nelegonḍu |
haṭṭoṁbattu moga taijasanu |
svapnāvastheyaidisi jīvaranu pravibhakta bhukuvēnipa ||13||

Meaning: Indra resides in the mind, and Shiva in the ego. The Lord as Taijasa (with nineteen mouths) induces the dream state, allowing the soul to experience the diversity of the dream world.

Verse 14
jñānamaya taijasanu hr̥daya sthānava aidisi |
prājñanemba abhidhānadiṁ karesutta citsukha vyaktiyane koḍuta |
ānateṣṭa pradanu anusaṁdhānavīyade suptiyaidisi |
tāne punarapi svapna jāgrateyīva cētanake ||14||

Meaning: The Lord as the Knower (Pragna) resides in the heart, granting the bliss of consciousness. He brings about deep sleep and, when the time is right, brings the soul back to the waking and dream states.

Verse 15
nāligeyoḷiha varuṇa matsya aṇunāligeyoḷu upēndra indraru |
tālu parjanyākhya sūryanu ardhagarbhaniha |
aleyoḷu vāmana subhāmana phāladoḷu śiva kēśavanu |
sukapōladoḷage ratīśa kāmanu alli pradyumna ||15||

Meaning: In the tongue, palate, forehead, and cheeks, various forms of the Lord (Varuna, Matsya, Upendra, Indra, Vamana, Shiva, Keshava, and Pradyumna) reside, directing all aspects of our speech and facial movements.

Verse 16
rōmagaḷali vasanta trikakuddhāma mukhadoḷage agni bhārgava |
tāmarasa bhava vāsudēvaru mastakadoḷiharu |
ī manadoḷiha viṣṇu śikhadoḷu umāmahēśvara nārasiṁhasvāmi |
tanna anudinadi nenevara mr̥tyu pariharipa ||16||

Meaning: In the hair, mouth, head, and tuft of hair, the Lord resides as Vasant, Agni, Vasudeva, Vishnu, and Narasimha. He perpetually removes the fear of death for those who remember Him daily.

Verse 17
mauḷyalliha vāsudēvanu ēḷu adika nava jāti rūpava tāḷi |
mukhadoḷu śravaṇa nayanādi avayavagaḷige āḷarasu tānāgi |
satata sulīlegaivutali ippa |
sukhamaya kēḷi kēḷisi nōḍi nōḍisi nuḍidu nuḍisuvanu ||17||

Meaning: Dwelling in the crown of the head, Lord Vasudeva assumes sixteen forms. He becomes the supreme ruler of all organs—the ears, eyes, and others—performing His divine play, enabling the soul to hear, see, and speak through His grace.

Verse 18
eraḍadikavu eppattu enipa sāvirada nāḍige |
mukhyavu ēka uttarashata gaḷalli ihavu nūrā oṁdu mūrtigaḷu |
aridu dēhadi kalaśa nāmaka harige kaḷegaḷu ivu endu |
nairantaradi pūjisutiharu paramādaradi bhūsuraru ||18||

Meaning: Among the 72,072 nerves (nāḍis) in the body, 101 are primary, housing 101 forms of the Lord. Knowing these as the manifestations of Lord Kalasha, the wise (Brahmins/knowers) worship them with supreme devotion.

Verse 19
idake kāraṇavenisuvavu eraḍadika daśa nāḍigaḷa oḷage |
surā nadiye modalāda amala tīrthagalu ihavu karaṇadi |
padumanābhanu kēśavādi dvidaśa rūpadali ippanalli |
ati mr̥duḷavāda suṣumnadoḷage ēkātmanenisuvanu ||19||

Meaning: Within the 12 primary nerves lie holy waters like the Ganga. Lord Padmanabha dwells there in His 24 forms (Keshava, etc.). Within the delicate Sushumna nerve, He resides as the One Supreme Soul.

Verse 20
āmnaya pratipādya śrī pradyumna dēvānu dēhadoḷage |
suṣumnadi īḍā piṅgaḷadi viśvādi rūpadali |
nirmalātmanu vāṇī vāyu caturmukharoḷiddū akhila jīvara |
karma guṇava anusarisi naḍevanau viśva vyāpakanu ||20||

Meaning: Lord Pradyumna, the subject of the Vedas, dwells within the body in the Sushumna, Ida, and Pingala nerves in forms like Vishwa. Dwelling with Vani, Vayu, and Brahma (the four-faced), He guides all souls according to their karma and nature as the All-Pervading Lord.

Verse 21
abda ayana r̥tu māsa pakṣa suśabdadindali karesutali |
nīlābda varṇa aniruddhane modalāda aidu rūpadali |
habbihanu sarvatradali karuṇābdhi nālvattaidu rūpadi |
labhyanāguvanī pari dhēnisuva bhakutarige ||21||

Meaning: The Lord, whose complexion is like a blue cloud, is known by the names of the units of time (years, seasons, months, etc.). Dwelling in the five forms (Aniruddha, etc.) and in 45 forms across all, the Ocean of Mercy makes Himself easily accessible to devotees who meditate on Him.

Verse 22
aidu rūpātmaganu ippattaidu rūpadalippa |
matte hadinaidu tithi ippattanālkarinda peccisalu |
aiduvadu aravattadika āraidu divasa āhvayan oḷage |
mana tōydavage tāpatrayada mahadōṣavellihudō ||22||

Meaning: The Lord dwells in the five forms, 25 forms, and the divisions of the lunar calendar (tithi, etc.). For those who immerse their minds in Him, where could the great defects of the three-fold miseries (tāpatraya) possibly exist?

Verse 23
divasa yāma mahūrta ghaṭikādi avayavagaḷoḷagiddū |
gaṅgā pravāhadaṁdadi kālanāmaka pravahisutalippa |
ivana guṇa rūpa kriyoṅgaḷa nivahadoḷu muḷugi āḍutali |
bhārgavi sadānandātmaḷu āgihaḷu ellā kāladali ||23||

Meaning: Dwelling in every unit of time—days, hours, minutes—the Lord flows like the river Ganga. Immersed in the play of His divine attributes, forms, and actions, Goddess Lakshmi remains in supreme bliss at all times.

Verse 24
vēdatatigaḷa māni lakṣmī dharādharana guṇa rūpa kriye gaḷa |
ādi madhya antavanu kāṇade manadiyōcisuta |
ādapane ītanaige patni? kr̥pōdadhiyu svīkarisudanu |
lōkādhipanu bhikṣukana maneya autanavana koṁbaṁte ||24||

Meaning: Goddess Lakshmi, the presiding deity of the Vedas, contemplates the Lord's infinite qualities, realizing His beginning, middle, and end are beyond comprehension. Yet, the Ocean of Mercy accepts the offerings of His devotees, just as the Lord of the Universe accepts a humble meal from a beggar.

Verse 25
kōvidaru cittaisuvaddu śrīdēviyoḷahihau nikhila guṇa |
tr̥ṇa jīvarali kalpisi yukutiyali mattu kramadinda |
dēva dēvakiyippaḷu endaridu ā viriñcana janani |
ītana āvakālaku ariyau antava narara pāḍēnu ||25||

Meaning: Wise ones should understand that even Goddess Lakshmi cannot fathom the fullness of the Lord's infinite qualities. If even she, the mother of Brahma, cannot fully comprehend Him, what to speak of ordinary mortals?

Verse 26
kṣīra dadhi navanīta ghr̥tadoḷu saurabha rasāhvayanenisi śāntīramaṇa |
jñāna iccha kriyā śakṭyendemba īrereḍu nāmadali karesuta |
bhāratī vāgdēvi vāyu sarōruha āsana |
alli nelegiharu ellā kāladali ||26||

Meaning: The Lord dwells in milk, curd, butter, and ghee, known as the essence. Called by the names Jnana, Iccha, Kriya, and Shakti, He dwells with Bharati, Vayu, and Brahma (Lotus-seated) at all times.

Verse 27
vasugaḷeṁṭu nava praja īśaru śvasana guṇa aivattu |
ēkādaśa divākararu anite rudraru aśvinigaḷeraḍu |
daśa vihīna śatākhya ī sumanasaroḷage |
caturātma nīyāmisuva brahma samīra khaga phaṇīndrara oḷagiddū ||27||

Meaning: In the 8 Vasus, 9 Prajapatis, 50 forms of Vayu, 11 Rudras, and the Ashwini twins—in all these gods, the Lord dwells as the Four-Armed Controller (Chaturatma), residing within Brahma, Vayu, Garuda, and Shesha.

Verse 28
tōrutippanu cakradali hiṁkāra nāmaka śaṅkadali pratihāra |
gadeyali nidhana padmadoḷi ippa prasthāna |
kāruṇikanu udgīthānamadi māramaṇana ai rūpagaḷa |
śaṅkāri modalāda āyudha gaḷoḷu smarisi dharisutiru ||28||

Meaning: The Lord manifests in His weapons: as Hinkara in the Discus (Chakra), Pratihara in the Conch (Shankha), Nidhana in the Mace (Gada), Prasthana in the Lotus (Padma), and Udgitha in the Bow. Meditate on these five forms of the Lord associated with His weapons.

Verse 29
tanuve ratha vāk abhimāniye guṇavenisuvaḷu |
śrōtradoḷu rōhiṇi śaśāṅkaru pāśa pāṇigaḷu aśvavendeniisi |
inanu saṁjñā dēviyaru iharu anala lōcana |
sūtenenisuva praṇava pādya prāṇa nāmaka rathikanenisuvanu ||29||

Meaning: The body is the chariot; speech and attributes are the presiding deities. The ears are the horses. The Lord, as the Knower/Driver (Pranava/Prana), resides within as the Charioteer of this chariot of life.

Verse 30
amita mahimana apāra guṇagaḷa samita varṇātmaka śruti smr̥ti gamisalāpave |
tadabhimānigaḷu endenisikoṁba |
kamalā saṁbhava bhava sura indrādi amararu anudina tiḷiyalu ariyaru |
svamahimegaḷa ādi anta madhyagaḷu ariva sarvajña ||30||

Meaning: Can the infinite attributes of the Lord be fully captured by words or the scriptures? Even Brahma, Shiva, and Indra do not fully know them. Only the Lord, who is All-Knowing, knows the beginning, middle, and end of His own glory.

Verse 31
vitta dēhāgāra dārā patya mitrādigaloḷage |
hari pratyagātmanu endenisi nelegippanendaridu |
nityadali saṁtr̥pti baḍisuta uttama adhama madhyamara |
kr̥ta kr̥tyanāgu unmattanu āgade bhr̥tya nānendu ||31||

Meaning: Knowing that Lord Hari resides within wealth, the body, home, spouse, children, and friends as the Inner-Dweller, remain content. Do not become arrogant; instead, be a servant of the Lord and fulfill the purpose of your life.

Verse 32
dēva dēvēśana sumūrti kaḷēvaragaḷoḷage anavarata saṁbhāvisuta |
pūjisuta nōḍuta sukisutiru biḍade |
śrīvara jagannātha viṭhala tā olidu kāruṇyadali |
bhava nōva pariharisuvanu pravitata patita pāvananu ||32||

Meaning: Always cherish the Lord's divine forms residing within the body. Worship and behold them with joy, never ceasing. The Lord of Lakshmi, Jagannatha Vittala, being pleased by His mercy, will remove the pains of worldly existence and purify the fallen.
***

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

pAdamAni jayantana oLage sumEdha nAyakanu ippa
dakShiNa pAdada anguTadalli pavananu BAraBRudrUpa
kAdukonDiha Tankitara modalAda nAmadi
sandhigaLali Iraidu rUpadali ippa santata naDedu naDesutali||1||

kapila cArvAnga Adi rUpadi vapugaLoLu hastagaLa sandhiyoLu
aparimita karmagaLa mADutalippa dinadinadi
kRupaNa vatsala pArSvadoLu para suPaliyenisuva
gudupasthadi vipuLa baliBaga manavenisi tundiyoLage irutihanu||2||

aidu mEloMdadhikadaLavuLLa aidu padmavu nABi mUladi
aidu mUrtigaLihavu aniruddhAdi nAmadali
aidisuta garBavanu jIvara anAdi karma prakRuti guNagaLa
hAdi tappalugoDade vyApAragaLa mADutiha||3||

nABiyali ShaTkOna manDalada I BaviShyad brahmanoLu
muktABa SrI pradyumnanu ippanu vibudha gaNasEvya
SOBisuva kaustuBave modalAda ABaraNa AyudhagaLinda
mahA Bayankara pApa puruShana SOShisuva nitya||4||

dvAdaSa arkara manDalavu madhya udaradoLu suShumnadoLagihadu
aidu rUpAtmakanu aravattadhika munnUru
I divArAtrigaLa mAnigaLu Ada divijara santayisuta
niShAda rUpaka daityaranu saMharipa nityadali||5||

hRudayadoLagihadu aShTadaLa kamala adaroLage
prAdESa nAmakanudita BAskaranante tOrpanu biMbanendenisi
padumacakra suSanKa sugadAngada kaTaka mukuTa anguLIyaka
padaka kaustuBa hAra graivEya Adi BUShitanu||6||

dvidaLa padmavu SOBipudu kanThadali muKyaprANa
tannaya sudatiyinda oDagUDi haMsa upAsaneya mALpa
udakavu annAdigaLige avakASadanu tAnAgiddu
udAna aBidhanu Sabdhava nuDidu nuDisuva sarvajIvaroLu||7||

nAsikadi nAsatya dasraru SvAsamAnI prANa BArati
haMsa dhanvantrigaLu allalli ipparu avaroLage
BESa BAskararu akShi yugaLake adhISareniparu
avaroLage lakShmISadadhi vAmanaru nIyAmisutali irutiharu||8||

staMBa rUpadali ippa dakShiNa aMbakadi pradyumna
guNa rUpa aMBraNiyu tAnAgi ippaLu
vatsarUpadali poMbasira padayOgya pavana
triyaMbakAdi samasta divija kadaMba sEvitanAgi sarva padArthagaLa tOrpa||9||

nEtragaLali vasiShTha viSvAmitra BAradvAja gautama atri
A jamadagni nAmagaLiMda karesutali
patratApaka Sakra sUrya dharitri parjanyAdi suraru
jagatraya ISana Bajiparu anudina parama Bakutiyali||10||

jyOtiyoLage ippanu kapila puruhUta muKa dikpatigaLiMda samEtanAgi
dakShiNa akShiya muKadoLiha viSva
SvEtavarNa caturBujanu saMprItiyiMdali
sthUla viShayava cEtanarige uMDu uNipa jAgrateyittu nRugajAsya||11||

nelesiharu dikdEvategaLu ikkarada karNangaLali
tIrthaMgaLige mAnigaLAda suranadi muKya nirjanaru
balada kiviyali irutiharu bAMboLeya janaka trivikramanu
nirmalinaranu mADuvanu Ipari cintisuva janara||12||

cittaja indraru manadoLu ipparu kRuttivAsanu ahankAradi
citta cEtanamAnigaLu vihaga indra PaNiparoLu nityadali nelegonDu
hattoMBattu moga taijasanu
svapnAvastheyaidisi jIvaranu praviBakta Bukuvenipa||13||

j~jAnamaya taijasanu hRudaya sthAnava aidisi
prAj~janeMba aBidhAnadiM karesutta citsuKa vyaktiyane koDuta
AnateShTa pradanu anusandhAnavIyade suptiyaidisi
tAne punarapi svapna jAgrateyIva cEtanake||14||

nAligeyoLiha varuNa matsya aNunAligeyoLu upEndra indraru
tAlu parjanyAKya sUryanu ardhagarBaniha
aleyoLu vAmana suBAmana PAladoLu Siva kESavanu
sukapOladoLage ratISa kAmanu alli pradyumna||15||

rOmagaLali vasanta trikakuddhAma muKadoLage agni BArgava
tAmarasa Bava vAsudEvaru mastakadoLiharu
I manadoLiha viShNu SiKadoLu umAmahESvara nArasiMhasvAmi
tanna anudinadi nenevara mRutyu pariharipa||16||

mauLiyalliha vAsudEvanu ELu adhika nava jAti rUpava tALi
muKadoLu SravaNa nayanAdi avayavagaLige ALarasu tAnAgi
satata sulIlegaiyutali ippa
suKamaya kELi kELisi nODi nODisi nuDidu nuDisuvanu||17||

eraDadhikavu eppattu enipa sAvirada nADige
muKyavu Eka uttara SatagaLu alli ihavu nUrA ondu mUrtigaLu
aridu dEhadi kalaSa nAmaka harige kaLegaLu ivu endu
nairantaradi pUjisutiharu paramAdaradi BUsuraru||18||

idake kAraNavenisuvavu eraDadhika daSa nADigaLa oLage
surA nadiye modalAda amala tIrthagaLu ihavu karaNadali
padumanABanu kESavAdi dvidaSa rUpadali ippanalli
ati mRuduLavAda suShumnadoLage EkAtmanenisuvanu||19||

Amnaya pratipAdya SrI pradyumna dEvAnu dEhadoLage
suShumnadi IDA pingaLadi viSvAdi rUpadali
nirmalAtmanu vANi vAyu caturmuKaroLiddu aKiLa jIvara
karma guNava anusarisi naDevanu viSva vyApakanu||20||

abda ayana Rutu mAsa pakSha suSabdhadindali karesutali
nIlAbdha varNa aniruddhane modalAda aidu rUpadali
habbihanu sarvatradali karuNAbdhi nAlvattaidu rUpadi
laByanAguvanI pari dhEnisuva Bakutarige||21||

aidu rUpAtmakanu ippattaidu rUpadalippa
matte hadinaidu tithi ippattanAlkarinda peccisalu
aiduvadu aravattadhika Araidu divasa AhvayanoLage
mana tOydavage tApatrayada mahadOShavellihudO||22||

divasa yAma mahUrta GaTikAdi avayavagaLoLagiddu
gangA pravAhadandadi kAlanAmaka pravahisutalippa
ivana guNa rUpa kriyangaLa nivahadoLu muLugi ADutali
BArgavi sadAnandAtmaLu AgihaLu ella kAladali||23||

vEdatatigaLa mAni lakShmI dharAdharana guNa rUpa kriyegaLa
Adi madhya antavanu kANade manadiyOcisuta
Adapane Itanige patni? kRupOdadhiyu svIkarisudanu
lOkAdhipanu BikShukana maneya autaNava koMbante||24||

kOvidaru cittaisuvadu SrIdEviyoLagiha niKila guNa
tRuNa jIvarali kalpisi yukutiyali mattu kramadiMda
dEva dEvakiyippaLu endaridu A virincana janani
Itana AvakAlaku ariyaLu antava narara pADEnu||25||

kShIra dadhi navanIta GRutadoLu sauraBa rasAhvayanenisi SAntIramaNa
j~jAna iccA kriyA SaktiyendeMba IrereDu nAmadali karesuta
BAratI vAgdEvi vAyu sarOruha Asanaru
alli nelesiharu ella kAladali||26||

vasugaLenTu nava praja ISaru Svasana guNa aivattu
EkAdaSa divAkararu anite rudraru aSvinigaLeraDu
daSa vihIna SatAKya I sumanasaroLage
caturAtma nIyAmisuva brahma samIra Kaga PaNIMdrara oLagiddu||27||

tOrutippanu cakradali hinkAra nAmaka SanKadali pratihAra
gadeyali nidhana padmadali ippa prasthAna
kAruNikanu udgIthanAmadi mAramaNana ai rUpagaLa
SanKAri modalAda AyudhagaLoLu smarisi dharisutiru||28||

tanuve ratha vAk aBimAniye guNavenisuvaLu
SrOtradoLu rOhiNi SaSAMkaru pASa pANigaLu aSvavendenisi
inanu saMj~jA dEviyaru ihara anala lOcana
sUtanenisuva praNava pAdya prANa nAmaka rathikanenisuvanu||29||

amita mahimana apAra guNagaLa samita varNAtmaka Sruti smRuti gamisalApave
tadaBimAnigaLu endenisikoMba
kamalA saMBava Bava sura indrAdi amararu anudina tiLiyalu ariyaru
svamahimegaLa Adi anta madhyagaLu ariva sarvaj~ja||30||

vitta dEhAgAra dArA patya mitrAdigaLoLage
hari pratyagAtmanu endenisi nelesippanendaridu
nityadali saMtRupti baDisuta uttama adhama madhyamara
kRuta kRutyanAgu unmattanu Agade BRutya nAnendu||31||

dEva dEvESana sumUrti kaLEvaragaLoLage anavarata saMBAvisuta
pUjisuta nODuta suKisutiru biDade
SrIvara jagannAtha viThala tA olidu kAruNyadali
Bava nOva pariharisuvanu pravitata patita pAvananu||32||
***

No comments:

Post a Comment