Showing posts with label ಸ್ವಾನುಭವದ ಸುಖ ಸಾಧಿಸಿ ನೋಡಿ ತಾನಾಗದೇ ನಿಜಗೂಡಿ ಸ್ವಾನುಭವ mahipati. Show all posts
Showing posts with label ಸ್ವಾನುಭವದ ಸುಖ ಸಾಧಿಸಿ ನೋಡಿ ತಾನಾಗದೇ ನಿಜಗೂಡಿ ಸ್ವಾನುಭವ mahipati. Show all posts

Wednesday, 1 September 2021

ಸ್ವಾನುಭವದ ಸುಖ ಸಾಧಿಸಿ ನೋಡಿ ತಾನಾಗದೇ ನಿಜಗೂಡಿ ಸ್ವಾನುಭವ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾನುಭವದ ಸುಖ ಸಾಧಿಸಿ ನೋಡಿ ತಾನಾಗದೇ ನಿಜಗೂಡಿ ಸ್ವಾನುಭವ ಪ  

ಮನದ ಕೊನಿಯಲ್ಯದ ಘನಸುಖದಾಟ ಅನುಭವಕಿದು ಬಲು ನೀಟ ಖೂನದೋರುವ ಘನ ಗುರುದಯ ನೋಟ ಮುನಿಜನಕಾಗುವ ಪ್ರಗಟ 1 

ಸುರಿಯುತಲ್ಯದ ಸುಖ ಸಂತ್ರಾಧಾರಿ ಇರುಳ ಹಗಲದೀ ಪರಿ ಅನುದಿನ ನಿಜಸಾರಿ ತೋರುತಲ್ಯದ ಘನ ಬೀರಿ 2 

ಸ್ವಹಿತ ಸಾಧನಕಿದು ಸವಿಸಾರ ಮಹಾನುಭವದಾಗರÀ ಮಹಿಪತಿಗಿದು ಮಾಡುವ ಮನೋಹರ ಇಹಪರ ಘನ ಸಹಕಾರ 3

***