Showing posts with label ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ramesha. Show all posts
Showing posts with label ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ramesha. Show all posts

Tuesday, 19 November 2019

ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ankita ramesha

by ಗಲಗಲಿಅವ್ವನವರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.

ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1

ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2

ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3

ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4

ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
*******