..
kruti by ವೀರನಾರಾಯಣ Veeranarayana
ಮದಾಂಧನೋ ನಾನು ಮಧುಸೂದನ ಪ
ಜಗವನು ತುಂಬಿದ ತ್ರಿಗುಣಾತ್ಮಕನೆತೆಗೆದು ಕಣ್ಗಳ ನೋಡದ ನಾನು 1
ಪವನನೊಡೆಯ ನಿನ್ನ ಸವಿಸವಿ ಸ್ತವಕೆಕಿವಿಗೊಡದೆ ಕಿವುಡನಾದೆನಾ 2
ಎಡೆಗಿದ್ದರು ಗಡ ಅಡಗಿಹನಿಲ್ಲೆಂದುಹುಡುಕುತ ಕೇಳುವ ಜಡಮತಿ ನಾನು 3
ಗದುಗಿನ ವೀರನಾರಾಯಣನೆ ಎನ್ನಎದೆಯೊಳು ನಿಂತಿರೆ ನೋಡದ ನಾನು 4
***